ವಿಕ ಸುದ್ದಿಲೋಕ ದಾವಣಗೆರೆಕನ್ನಡ ರಾಜ್ಯೋತ್ಸವ ಅಂಗವಾಗಿ ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘದ ವತಿಯಿಂದ ಸಂಘದ ಅಧ್ಯಕ್ಷರು, ನಗರಸಭೆ ಮಾಜಿ ಅಧ್ಯಕ್ಷ ಬಿ.ವೀರಣ್ಣ ನೇತೃತ್ವದಲ್ಲಿಹಾಗೂ ಕುಸ್ತಿ ಪ್ರೋತ್ಸಾಹಕರ ಸಹಯೋಗದಲ್ಲಿನ.29ರ ಭಾನುವಾರ ರಾಜ್ಯ, ಅಂತರ್ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಭಾರೀ ಕಾಟಾ ನಿಕಾಲಿ ಜಂಗಿ ಬಯಲು ಕುಸ್ತಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಖಜಾಂಚಿ ಕೆ.ಎಂ. ವೀರೇಶ್ ಪೈಲ್ವಾನ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಅಂದು ಮಧ್ಯಾಹ್ನ 3.30ಕ್ಕೆ ಸಚಿವರಾದ ಎಸ್ .ಎಸ್ . ಮಲ್ಲಿಕಾರ್ಜುನ್ , ಕೆ.ಎಸ್ . ಬಸವಂತಪ್ಪ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡುವರು. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಕೆ.ಎಂ. ಸುರೇಶ್ , ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಸಮಥ್ ರ್ ಶಾಮನೂರು, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 3.30ರಿಂದ ರಾತ್ರಿ 9 ಗಂಟೆಯವರೆಗೆ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ32 ಜೊತೆ ಭಾರೀ ಕಾಟಾ ನಿಕಾಲಿ ಜಂಗಿ ಕುಸ್ತಿಗಳು ನಡೆಯಲಿವೆ. ಈ ಪೈಕಿ ಹರಿಯಾಣದ ಪೈಲ್ವಾನ್ ರೋಹಿತ್ ಲಾಡ್ ಪೂರ್ ಹಾಗೂ ಇರಾನ್ ಪೈಲ್ವಾನ್ ಮಹಮ್ಮದ್ ಹಮೀದ್ ಪೈ ನಡುವೆ ನಡೆಯುವ 1 ನಂಬರ್ ಕುಸ್ತಿಯಲ್ಲಿವಿಜೇತ ಜಟ್ಟಿಗೆ 2.5 ಲಕ್ಷ ರೂ. ನಗದು ಹಾಗೂ ಬೆಳ್ಳಿ ಗದೆ, ಸೋತ ಪೈಲ್ವಾನ್ ಗೆ 2.5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಅಲ್ಲದೇ, ಹರಿಯಾಣದ ದೀಪಾಂಶು ಪೈ ಹಾಗೂ ಇರಾನ್ ನ ಇರ್ಫಾನ್ ಪೈ ನಡುವೆ ಜರುಗುವ 2 ನಂಬರ್ ಕುಸ್ತಿಯಲ್ಲಿಗೆದ್ದ ಹಾಗೂ ಸೋತ ಅಭ್ಯರ್ಥಿಗಳಿಬ್ಬರಿಗೂ ತಲಾ 2 ಲಕ್ಷ ರೂ. ಬಹುಮಾನ ವಿತರಿಸಲಾಗುವುದು. ಇನ್ನುಳಿದಂತೆ ನಡೆಯುವ ಸಾಮಾನ್ಯ ದರ್ಜೆಯ ಕುಸ್ತಿಯಲ್ಲಿಸೆಣಸಾಡುವ ಪೈಲ್ವಾನರಿಗೂ ನಗದು ಬಹುಮಾನ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈ ಪಂದ್ಯಾವಳಿಯಲ್ಲಿತೀರ್ಪುಗಾರರಾಗಿ ಬಿ.ವೀರಣ್ಣ, ವಿನಾಯಕ ಪೈಲ್ವಾನ್ , ಮನೋಹರ್ , ಯಶವಂತರಾವ್ ಜಾಧವ್ , ಮಾಲತೇಶರಾವ್ , ಶ್ರೀನಿವಾಸ್ ಟಿ. ದಾಸಕರಿಯಪ್ಪ, ಖಂಡೋಜಿರಾವ್ ಕಾರ್ಯನಿರ್ವಹಿಸಲಿದ್ದಾರೆ. ಪಂದ್ಯಾವಳಿ ವೀಕ್ಷಣೆಗೆ ಬರುವ ಕುಸ್ತಿ ಪ್ರಿಯರಿಗೂ ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿಸಂಘದ ಕಾರ್ಯದರ್ಶಿ ಕೆ.ಆರ್ . ಮಂಜುನಾಥ ಶ್ಯಾಗಲೆ, ಎನ್ .ಎಂ. ಆಂಜನೇಯ ಗುರೂಜಿ, ಬಿ.ವಿ. ಪ್ರಮೋದ್ , ಮನೋಹರ್ ಪೈ, ಗಿರೀಶ್ , ಮತ್ತಿತರರಿದ್ದರು.