ವಿಕ ಸುದ್ದಿಲೋಕ ಸಾಗರಸಾಗರದಲ್ಲಿಮುಂದಿನ ವರ್ಷದಿಂದ ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಚಿಂತನೆ ನಡೆಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿಮಂಗಳವಾರ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬನ್ನಿ ಮುಡಿಯುವ ಶಾಸ್ತ್ರದಲ್ಲಿಪಾಲ್ಗೊಂಡು ಅವರು ಮಾತನಾಡಿದರು.
ಶಿವಮೊಗ್ಗ ಮತ್ತು ಹೊಸನಗರ ಮಾದರಿಯಲ್ಲಿಸಾಗರ ದಸರಾ ಆಯೋಜಿಸುವ ಉದ್ದೇಶವಿದ್ದು, ಈ ಸಂಬಂಧ ವಿವಿಧ ಸಂಘ-ಸಂಸ್ಥೆಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.
ತಾಲೂಕಿನಲ್ಲಿಮಳೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ನವರಾತ್ರಿ ಸಂದರ್ಭದಲ್ಲಿಉತ್ತಮ ಮಳೆ, ಬೆಳೆ ಹಾಗೂ ರೈತರ ಸಂಕಷ್ಟ ನಿವಾರಣೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಉಪವಿಭಾಗಾಧಿಕಾರಿ ವೀರೇಶಕುಮಾರ್ ಸೀಮೋಲ್ಲಂಘನೆ ಶಾಸ್ತ್ರ ನೆರವೇರಿಸಿದರು. ತಹಸೀಲ್ದಾರ್ ಡಾ.ಆರ್ .ಪ್ರತಿಭಾ ಜಮಾಬಂಧಿ ಪ್ರಕ್ರಿಯೆಯಲ್ಲಿಭಾಗವಹಿಸಿ ಸಹಿ ಹಾಕಿದರು.
ಮಾರಿಕಾಂಬ ಪ್ರತಿಷ್ಠಾನದ ಅಧ್ಯಕ್ಷ ಎಂ.ನಾಗರಾಜ್ , ಉದ್ಯಮಿ ಟಿ.ವಿ. ಪಾಂಡುರಂಗ, ಪ್ರಮುಖರಾದ ಶ್ರೀನಿವಾಸ್ ಮೇಸ್ತಿ್ರ, ಎಂ.ಡಿ. ಆನಂದ್ , ಸುಂದರ ಸಿಂಗ್ , ಕೆ.ಎನ್ .ನಾಗೇಂದ್ರ, ಐ.ವಿ.ಹೆಗಡೆ, ಗಣಪತಿ ಮಂಡಗಳಲೆ, ಗಿರೀಶ್ ಕೋವಿ ಹಾಗೂ ಗಣಪತಿ ದೇವಸ್ಥಾನದ ಅರ್ಚಕ ನವೀನ್ ಜೋಯ್ ್ಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.
====
ತಹಸೀಲ್ದಾರ್ ಕಣ್ಣೀರು, ವಿಡಿಯೊ ವೈರಲ್
ಸಾಗರದಲ್ಲಿಪ್ರತಿವರ್ಷ ದಸರಾ ಸಂದರ್ಭ ಬನ್ನಿ ಮುಡಿಯುವ ಶಾಸ್ತ್ರವನ್ನು ತಹಸೀಲ್ದಾರ್ ನೆರವೇರಿಸಿಕೊಂಡು ಬರುವುದು ರೂಢಿ. ಆದರೆ ಈ ಬಾರಿ ಸಾಗರದಲ್ಲಿಉಪವಿಭಾಗಾಧಿಕಾರಿ ಸೀಮೋಲ್ಲಂಘನೆ ಶಾಸ್ತ್ರ ನೆರವೇರಿಸಿರುವುದು ಸಾರ್ವಜನಿಕ ವಲಯದಲ್ಲಿಚರ್ಚೆಗೆ ಗ್ರಾಸವಾಗಿದೆ. ಸಾಗರದಲ್ಲಿತಹಸೀಲ್ದಾರ್ ಡಾ. ಪ್ರತಿಭಾ ಅವರು ಜಮಾಬಂಧಿ ಕಾರ್ಯದಲ್ಲಿಪಾಲ್ಗೊಂಡಿದ್ದರೂ, ಬನ್ನಿ ಮುಡಿಯುವ ಶಾಸ್ತ್ರದಲ್ಲಿಭಾಗವಹಿಸದಿರುವುದು ಸ್ಥಳೀಯವಾಗಿ ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಈ ನಡುವೆ, ಯಾವುದೇ ಧಾರ್ಮಿಕ ಕಾರ್ಯಕ್ರಮದಲ್ಲಿಪಾಲ್ಗೊಳ್ಳದೆ ಜನರ ನಡುವೆ ನಿಂತು ತಹಸೀಲ್ದಾರ್ ಕಣ್ಣೀರು ಹಾಕುತ್ತಿರುವ ದೃಶ್ಯಗಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ಪಡೆಯಲು ತಹಸೀಲ್ದಾರ್ ದೂರವಾಣಿ ಸಂಪರ್ಕಕ್ಕೆ ಲಭಿಸಲಿಲ್ಲ. ಉಪವಿಭಾಗಾಧಿಕಾರಿ ಕರೆ ಸ್ವೀಕರಿಸಲಿಲ್ಲ.
ಚಿತ್ರಶೀರ್ಷಿಕೆ
21ಎಸ್ ಜಿಆರ್ 1
ಸಾಗರದಲ್ಲಿಮಂಗಳವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ದಸರಾ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿಉಪವಿಭಾಗಾಧಿಕಾರಿ ವೀರೇಶಕುಮಾರ್ ಸೀಮೋಲ್ಲಂಘನೆ ಶಾಸ್ತ್ರ ನೆರವೇರಿಸಿದರು.