ಜಂಬೂಸವಾರಿ: ರೈಲಿನಲ್ಲಿಮೈಸೂರಿಗೆ 1 ಲಕ್ಷ ಪ್ರಯಾಣಿಕರ ಸಂಚಾರ

Contributed by: Mahadev Swamy|Vijaya Karnataka•
1 lakh passengers rail transport to mysore special arrangements during jambusavari
ಜಂಬೂಸವಾರಿ: ರೈಲಿನಲ್ಲಿಮೈಸೂರಿಗೆ

1 ಲಕ್ಷ ಪ್ರಯಾಣಿಕರ ಸಂಚಾರ
ವಿಕ ಸುದ್ದಿಲೋಕ ಮೈಸೂರು

ದಸರಾ ಮಹೋತ್ಸವದ ಜಂಬೂಸವಾರಿಯ ದಿನವಾದ ಅ. 21ರಂದು ನಾನಾ ಭಾಗಗಳಿಂದ ಮೈಸೂರಿಗೆ 1 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ನೈಋುತ್ಯ ರೈಲ್ವೆಯ ಮೈಸೂರು ವಿಭಾಗವು ಪ್ರಕಟಣೆಯಲ್ಲಿತಿಳಿಸಿದೆ.

ಸ್ವಯಂ ಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಬಳಕೆ ಶೇ. 33.23ರಷ್ಟು ಹೆಚ್ಚಾಗಿದ್ದು, ಅವುಗಳ ಮೂಲಕ ಆದಾಯದಲ್ಲಿಶೇ. 32.10ರಷ್ಟು ಏರಿಕೆಯಾಗಿದೆ. ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಯ ಹೆಚ್ಚಿದ ಬಳಕೆಯಿಂದ ಟಿಕೆಟ್ ಕೌಂಟರ್ ಗಳಲ್ಲಿನ ಸರತಿ ಸಾಲುಗಳು ಕಡಿಮೆಯಾಗಿ, ನಿಲ್ದಾಣದ ಮುಖ್ಯ ಪ್ರವೇಶ ಹಾಗೂ ಪ್ಲಾಟ್ ಫಾಮ್ ರ್ ಪ್ರವೇಶ ಮಾರ್ಗಗಳಲ್ಲಿಜನಸಂದಣಿ ನಿಯಂತ್ರಣಕ್ಕೆ ಸಹಕಾರಿಯಾಯಿತು.

ಮೈಸೂರು ದಸರಾ ಮಹೋತ್ಸವದ ಪ್ರಮುಖ ದಿನವಾದ ಅ. 21ರಂದು, ನೈಋುತ್ಯ ರೈಲ್ವೆಯ ಮೈಸೂರು ವಿಭಾಗವು ಮೈಸೂರು ರೈಲು ನಿಲ್ದಾಣದಲ್ಲಿಉಂಟಾದ ಭಾರಿ ಪ್ರಯಾಣಿಕರ ದಟ್ಟಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಅಂದು ನಿಲ್ದಾಣದ ಮೂಲಕ ಸುಮಾರು ಒಂದು ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಟಿಕೆಟ್ ವಿತರಣೆಯಲ್ಲಿಮಹತ್ವದ ಸಾಧನೆ ದಾಖಲಾಗಿದ್ದು, ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದವರಲ್ಲಿಶೇ.53.4ರಷ್ಟು ಪ್ರಯಾಣಿಕರು ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳನ್ನು ಬಳಸಿದ್ದಾರೆ. ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳ ಮೂಲಕ 2025ರಲ್ಲಿ13,285 ಪ್ರಯಾಣಿಕರು ಟಿಕೆಟ್ ಪಡೆದಿದ್ದರೆ, 2026ರ ಅ. 21ರಂದು ಈ ಸಂಖ್ಯೆ 17,700ಕ್ಕೆ ಏರಿಕೆಯಾಗಿದೆ. 2026ರಲ್ಲಿಯುಟಿಎಸ್ ಮೊಬೈಲ್ ಆ್ಯಪ್ ಮೂಲಕ ಟಿಕೆಟ್ ಪಡೆಯದವರ ಸಂಖ್ಯೆ 5,495ಕ್ಕೆ ತಲುಪಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.13.04ರಷ್ಟು ಹೆಚ್ಚಳವಾಗಿದೆ.

ಕೋಟ್

ದಸರಾ ಸಂದರ್ಭದಲ್ಲಿಪ್ರಯಾಣಿಕರ ಸುರಕ್ಷತೆ, ಅನುಕೂಲತೆ ಮತ್ತು ಟಿಕೆಟ್ ಕೌಂಟರ್ ಗಳಲ್ಲಿಕಾಯುವ ಸಮಯವನ್ನು ಕಡಿಮೆ ಮಾಡುವುದಕ್ಕೆ ನಾವು ಹೆಚ್ಚಿನ ಆದ್ಯತೆ ನೀಡಿದ್ದೇವೆ. ರೈಲು ನಿಲ್ದಾಣದಿಂದ ಪ್ರಯಾಣ ಆರಂಭಿಸಿದವರಲ್ಲಿಶೇ.53.4ರಷ್ಟು ಪ್ರಯಾಣಿಕರು ಡಿಜಿಟಲ್ ಮತ್ತು ಸ್ವಯಂ ಸೇವಾ ಟಿಕೆಟ್ ವ್ಯವಸ್ಥೆಗಳನ್ನು ಬಳಸಿರುವುದು, ರೈಲ್ವೆ ಸೇವೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿಮಹತ್ವದ ಸಾಧನೆಯಾಗಿದೆ.

- ಗಿರೀಶ್ ಧರ್ಮರಾಜ್ , ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ, ಮೈಸೂರು ವಿಭಾಗ.