ಲಿಂಗಸುಗೂರು- ನಿಯಮ ಉಲ್ಲಂಘನೆ, ಉಚ್ಚಾಟನೆ

Contributed by: mkhussain.lgs@gmail.com|Vijaya Karnataka•
violation of farmers association rules expulsion and new struggle
ನಿಯಮ ಉಲ್ಲಂಘನೆ , ಉಚ್ಚಾಟನೆ

ಲಿಂಗಸುಗೂರು : ‘‘ರೈತ ಸಂಘದ ತಾಲೂಕು ಅಧ್ಯಕ್ಷ, ಕಾರ್ಯದರ್ಶಿಗಳು ಸಂಘದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದು, ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ,’’ ಎಂದು ಎಂದು ಸಂಘದ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ನಂದಿಹಾಳ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ‘‘ರೈತರ ಸಮಸ್ಯೆಗಳಿಗೆ ಧ್ವನಿಯಾಗಿ, ರೈತರ ಹಕ್ಕುಗಳಿಗಾಗಿ ಹೋರಾಟ ಮಾಡುವುದು ಸಂಘದ ಮುಖ್ಯ ಉದ್ದೇಶ. ಆದರೆ, ಇವರು ವೈಯಕ್ತಿಕ ಹಿತಾಸಕ್ತಿಗೆ ಸಂಘದ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಸಂಘಟನೆಯಿಂದ ಉಚ್ಚಾಟಿಸಲಾಗಿದೆ. ಮುಂದಿನ ದಿನಗಳಲ್ಲಿಇನ್ನಷ್ಟು ಬದಲಾವಣೆ ಮಾಡಲಾಗುವುದು. ತಾಲೂಕಿನ ರೈತರ ಸಮಸ್ಯೆಗಳನ್ನು ಗುರುತಿಸಿ, ಅವುಗಳ ಪರಿಹಾರಕ್ಕಾಗಿ ಸಂಘಟಿತ ಹೋರಾಟ ರೂಪಿಸಲಾಗುವುದು. ಸಂಘದ ಪದಾಧಿಕಾರಿಗಳು ಯಾವುದೇ ಭಿನ್ನಾಭಿಪ್ರಾಯವಿಲ್ಲದೇ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು,’’ ಎಂದರು. ರೈತ ಮುಖಂಡರಾದ ಹನುಮನಗೌಡ, ಬಸವರಾಜ ಚಲುವಾದಿ ಇದ್ದರು.

---

23ಆರ್ ಸಿಎಚ್ ಎಲ್ ಎನ್ ಜಿ1: ಶಿವಪುತ್ರಗೌಡ ನಂದಿಹಾಳ