ಕೇರಳ ರಾಜ್ಯದ ಅಬಕಾರಿ ಮತ್ತು ಸಹಕಾರ ಸಚಿವ ಎಂ. ಲಿಜು ಅವರು ಶುಕ್ರವಾರ ಕುಟುಂಬ ಸಮೇತರಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ಸಚಿವರನ್ನು ಗೌರವಿಸಲಾಯಿತು. ಎಂ. ಲಿಜು ಮಾತನಾಡಿ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಬ್ರಹ್ಮಶ್ರೀ ನಾರಾಯಣಗುರುಗಳ ದಿವ್ಯಹಸ್ತದಿಂದ ಪ್ರತಿಷ್ಠಾಪನೆಯಾದ ಕ್ಷೇತ್ರವಾಗಿದ್ದು, ಬೇಡಿದವರಿಗೆ ವರದ ಕೊಡುವ ಶಕ್ತಿ ಕೇಂದ್ರವಾಗಿದೆ. ನಾನು ಚುನಾವಣೆಗೆ ನಿಲ್ಲುವ ಮೊದಲೇ ಈ ಕ್ಷೇತ್ರಕ್ಕೆ ಬಂದು ವಿಶೇಷ ಪ್ರಾರ್ಥನೆ ಮಾಡಿ ಹೋಗಿದ್ದೆ. ಆ ಬಳಿಕ ಚುನಾವಣೆಯಲ್ಲಿಗೆದ್ದು ನಮ್ಮ ಸರಕಾರ ಬಂದು ಸಚಿವನಾಗುವ ಅವಕಾಶ ಸಿಕ್ಕಿತು. ಇದು ನಿಜಕ್ಕೂ ದೇವರು, ಗುರುಗಳ ಅನುಗ್ರಹದಿಂದ ಸಾಧ್ಯವಾಗಿದ್ದು, ಆ ಹಿನ್ನೆಲೆಯಲ್ಲಿಕುಟುಂಬ ಸಮೇತನಾಗಿ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಮಾಡಿದ್ದೇನೆ ಎಂದರು.ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್ . ಸೋಮಸುಂದರ್ , ಕೋಶಾಧಿಕಾರಿ ಪದ್ಮರಾಜ್ ಆರ್ ., ದೇವಸ್ಥಾನ ಅಭಿವೃದ್ಧಿ ಸಮಿತಿ ಸದಸ್ಯ ರಾಧಾಕೃಷ್ಣ, ಸಚಿವರ ಪತ್ನಿ ಅಂಬಲಿ ಲಿಜು, ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಚಿಲಿಂಬಿ, ಗೋಕರ್ಣನಾಥ ಕೋ-ಅಪರೇಟಿವ್ ಬ್ಯಾಂಕ್ ನಿರ್ದೇಶಕ ಯೋಗೀಶ್ ಕೋಟ್ಯಾನ್ ಮೂಲ್ಕಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
23ಎಂಎನ್ ಜಿ-ಕುದ್ರೋಳಿ ವಿಸಿಟ್
ಕುದ್ರೋಳಿ ಕ್ಷೇತ್ರಕ್ಕೆ ಕೇರಳ ಅಬಕಾರಿ ಸಚಿವ ಎಂ. ಲಿಜು ಅವರು ಭೇಟಿ ನೀಡಿ, ದೇವರ ದರ್ಶನ ಪಡೆದರು.