ಬ್ರಿಟಿಷರ ದಬ್ಬಾಳಿಕೆಗೆ ಸಡ್ಡು ಹೊಡೆದ ವೀರವನಿತೆ ಚೆನ್ನಮ್ಮ

Contributed by: shashidonihaklu@gmail.com|Vijaya Karnataka•
the heroine kittur rani chennamma declares war on the british
ಸ್ವಾಭಿಮಾನ, ದೇಶಪ್ರೇಮಕ್ಕೆ ಕಿತ್ತೂರು ರಾಣಿ ಚೆನ್ನಮ್ಮ ಹೋರಾಟವೇ ಪ್ರೇರಣೆ | ಎಡಿಸಿ ಡಾ. ತಿಪ್ಪೇಸ್ವಾಮಿ ಸ್ಮರಣೆ

ವಿಕ ಸುದ್ದಿಲೋಕ ತುಮಕೂರು
ಬ್ರಿಟಿಷರ ದಬ್ಬಾಳಿಕೆ ಮತ್ತು ದತ್ತು ಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಯ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ, ದೇಶದ ಸ್ವಾಭಿಮಾನ ಹಾಗೂ ಸಂಸ್ಥಾನದ ಅಸ್ಮಿತೆ ಕಾಪಾಡಲು ವೀರಾವೇಶದಿಂದ ಹೋರಾಟ ನಡೆಸಿದ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಮಹಿಳೆಯರಿಗೆ ಆದರ್ಶಪ್ರಾಯರಾಗಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್ . ತಿಪ್ಪೇಸ್ವಾಮಿ ಸ್ಮರಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಜಿಲ್ಲಾಡಳಿತದಿಂದ ಶುಕ್ರವಾರ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಅವರ 202ನೇ ಜಯಂತಿ ಆಚರಣೆಯಲ್ಲಿಮಾತನಾಡಿದ ಅವರು, ಬ್ರಿಟಿಷರು ಭಾರತೀಯ ಸಂಸ್ಥಾನಗಳನ್ನು ತಮ್ಮ ವಶಕ್ಕೆ ಪಡೆಯಲು ರೂಪಿಸಿದ್ದ ನೀತಿಗಳ ವಿರುದ್ಧ ಚೆನ್ನಮ್ಮ ಸಿಡಿದೆದ್ದರು. ತಮ್ಮ ರಾಜ್ಯದ ಸ್ವಾತಂತ್ರ್ಯ ಮತ್ತು ಹಕ್ಕುಗಳ ರಕ್ಷಣೆಗಾಗಿ ಪ್ರಬಲ ಬ್ರಿಟಿಷ್ ಆಡಳಿತವನ್ನೇ ಎದುರಿಸಿದ ಅವರ ಧೈರ್ಯ, ಶೌರ್ಯ ಮತ್ತು ನಾಯಕತ್ವ ಇತಿಹಾಸದಲ್ಲಿಅಚ್ಚಳಿಯದೆ ಉಳಿದಿವೆ ಎಂದರು.

ಭಾರತಕ್ಕೆ ತನ್ನದೇ ಆದ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯಿದ್ದು, ದೇಶದ ನೆಲ, ಜಲ ಹಾಗೂ ಸ್ವಾತಂತ್ರ್ಯದ ರಕ್ಷಣೆಗಾಗಿ ಅನೇಕ ಮಹಿಳೆಯರು ಹೋರಾಡಿದ್ದಾರೆ. ಅಂತಹ ವೀರ ಮಹಿಳೆಯರ ಸಾಲಿನಲ್ಲಿಕಿತ್ತೂರು ರಾಣಿ ಚೆನ್ನಮ್ಮ ಪ್ರಮುಖ ಸ್ಥಾನ ಪಡೆದಿದ್ದಾರೆ. ಬ್ರಿಟಿಷರ ದತ್ತು ಮಕ್ಕಳಿಗೆ ಹಕ್ಕಿಲ್ಲಎಂಬ ನೀತಿಗೆ ಸವಾಲೆಸೆದ ಅವರು, ಶಿವಲಿಂಗ ಸರ್ಜಾನನ್ನು ದತ್ತು ಪಡೆದು ಸಿಂಹಾಸನದ ಉತ್ತರಾಧಿಕಾರಿಯನ್ನಾಗಿ ಘೋಷಿಸುವ ಮೂಲಕ ತಮ್ಮ ಸಂಸ್ಥಾನದ ಹಕ್ಕನ್ನು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಕಿತ್ತೂರಿನ ರಕ್ಷಣೆಗಾಗಿ ತಮ್ಮ ಸಂಸ್ಥಾನದ ಮಹಿಳೆಯರು ಹಾಗೂ ಯುವಜನರಿಗೆ ಕತ್ತಿವರಸೆ, ಕುದುರೆ ಸವಾರಿ ಸೇರಿದಂತೆ ವಿವಿಧ ಯುದ್ಧಕಲೆಗಳಲ್ಲಿತರಬೇತಿ ನೀಡಿ, ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಸಜ್ಜುಗೊಳಿಸಿದ್ದರು. ಅವರ ಹೋರಾಟದ ಮನೋಭಾವ ಮತ್ತು ದೇಶನಿಷ್ಠೆ ಇಂದಿಗೂ ಸ್ಫೂರ್ತಿದಾಯಕವಾಗಿದೆ. ರಾಜ್ಯ ಸರಕಾರ ಕಿತ್ತೂರು ಉತ್ಸವದ ಮೂಲಕ ಅವರ ಸ್ಮರಣೆ ಮುಂದುವರಿಸುತ್ತಿದ್ದು, ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿಜಿಲ್ಲಾಡಳಿತದಿಂದ ಈ ಬಾರಿ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕು ಮರ್ಜಿ, ಮೇಲ್ವಿಚಾರಕ ಸುರೇಶಕುಮಾರ್ , ಚುನಾವಣಾ ತಹಸೀಲ್ದಾರ್ ವೀಣಾ, ಡಿಡಿಪಿಯು ತ್ರಿವೇಣಿ ಮತ್ತಿತರರಿದ್ದರು.

ಕೋಟ್ 1:

ಎರಡು ಶತಮಾನಗಳ ಹಿಂದೆಯೇ ತಮ್ಮ ಸಂಸ್ಥಾನದ ರಕ್ಷಣೆ ಹಾಗೂ ಜನಸಾಮಾನ್ಯರ ಹಕ್ಕುಗಳಿಗಾಗಿ ಬಲಾಢ್ಯ ಬ್ರಿಟಿಷರ ವಿರುದ್ಧ ಹೋರಾಡಿದ ಕಿತ್ತೂರು ರಾಣಿ ಚೆನ್ನಮ್ಮ ದೇಶಪ್ರೇಮ ಮತ್ತು ಸ್ವಾಭಿಮಾನದ ಪ್ರತೀಕ. ಪಾಶ್ಚಿಮಾತ್ಯರ ದಬ್ಬಾಳಿಕೆ, ದೌರ್ಜನ್ಯ ಮತ್ತು ಅಧಿಕಾರದ ದುರಾಸೆಯ ವಿರುದ್ಧ ಬಂಡೆದ್ದ ಅವರು, ತಮ್ಮ ಕೊನೆಯ ಉಸಿರಿನವರೆಗೂ ಪ್ರತಿರೋಧದ ಸಂಕೇತವಾಗಿ ಉಳಿದರು. ಇಂದಿನಂತೆ ಮಹಿಳೆಯರಿಗೆ ಕಾನೂನು ರಕ್ಷಣೆ ಮತ್ತು ಹಲವು ಸೌಲಭ್ಯಗಳು ಇಲ್ಲದ ಕಾಲದಲ್ಲಿಯೇ ತಮ್ಮ ಹಕ್ಕುಗಳಿಗಾಗಿ ಹೋರಾಡಿದ ಅವರ ತ್ಯಾಗ, ಧೈರ್ಯ ಹಾಗೂ ಆತ್ಮಗೌರವ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಬೇಕು .

- ಕೆ.ಎಸ್ .ಸಿದ್ದಲಿಂಗಪ್ಪ, ಕಸಾಪ ಜಿಲ್ಲಾಧ್ಯಕ್ಷ

ಕೋಟ್ 2:

ಕಿತ್ತೂರು ರಾಣಿ ಚೆನ್ನಮ್ಮ ಅವರ ಆತ್ಮವಿಶ್ವಾಸ, ಧೈರ್ಯ, ಶೌರ್ಯ ಮತ್ತು ಸಾಹಸ ಮಹಿಳೆಯರಿಗೆ ಮಾದರಿಯಾಗಿವೆ. ದೇಶದ ಸಂಪತ್ತನ್ನು ವಶಪಡಿಸಿಕೊಳ್ಳುವ ಬ್ರಿಟಿಷರ ನೀತಿ ವಿರೋಧಿಸಿ, ತಮ್ಮ ಹಕ್ಕುಗಳಿಗಾಗಿ ದಿಟ್ಟತನದಿಂದ ಹೋರಾಡಿದ ಚೆನ್ನಮ್ಮ ಅವರಿಂದ ದೇಶನಿಷ್ಠೆ, ದೇಶಭಕ್ತಿ ಮತ್ತು ಹೋರಾಟದ ಮನೋಭಾವ ಕಲಿಯಬೇಕಿದೆ.

- ಡಾ. ಶೈಲಾ ನಾಗರಾಜ್ , ಲೇಖಕಿ

ಫೋಟೋ 23ಟಿಯುಎಂ1 : ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಶುಕ್ರವಾರ ಜಿಲ್ಲಾಡಳಿತದಿಂದ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆಯಲ್ಲಿಎಡಿಎಸಿ ಡಾ.ಎನ್ .ತಿಪ್ಪೆಸ್ವಾಮಿ ಅವರು ಚೆನ್ನಮ್ಮ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.