ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಸಂಪನ್ನ: ಜಿಲ್ಲೆಯಲ್ಲಿಶೇ.74.76ರಷ್ಟು ಮತದಾನ, ಮಂಚೇನಹಳ್ಳಿ ಪ್ರಥಮ
ವಿಧಾನ ಪರಿಷತ್ ಚುನಾವಣೆಯಲ್ಲಿಬೊಂಬಾಟ್ ಮತದಾನಪದವಿ ಮತದಾರರಿಂದ ಭರ್ಜರಿ ಮತದಾನ
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಜಿಲ್ಲಾದ್ಯಂತ ಶುಕ್ರವಾರ ನಡೆದ ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟಾರೆ ಶೇ.74.76ರಷ್ಟು ಮತದಾನ ದಾಖಲಾಗಿದೆ. ಜಿಲ್ಲಾದ್ಯಂತ ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಶಾಂತಯುತವಾಗಿ ಮುಕ್ತಾಯಗೊಂಡಿದೆ.
ಜಿಲ್ಲೆಯಲ್ಲಿಪದವೀಧರ ಮತದಾರರಿಗಾಗಿ ಒಟ್ಟು 36 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಒಟ್ಟು ನೋಂದಾಯಿತ 26,262 ಮತದಾರರ ಪೈಕಿ 19,634ಕ್ಕೂ ಹೆಚ್ಚು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕು ಕಚೇರಿ ಆವರಣದಲ್ಲಿಸ್ಥಾಪಿಸಲಾಗಿದ್ದ ಮತಗಟ್ಟೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಜಿ. ಪ್ರಭು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಸುಸೂತ್ರವಾಗಿ ಹಾಗೂ ವ್ಯವಸ್ಥಿತವಾಗಿ ನಡೆಯಲು ಕೈಗೊಂಡಿದ್ದ ಕ್ರಮಗಳನ್ನು ವೀಕ್ಷಿಸಿದ ಅವರು, ಕರ್ತವ್ಯದಲ್ಲಿದ್ದ ಚುನಾವಣೆ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಚೇಳೂರು ಲಾಸ್ಟ್ : ಜಿಲ್ಲೆಯ ತಾಲೂಕುವಾರು ಮತದಾನದ ಪ್ರಮಾಣವನ್ನು ಗಮನಿಸಿದರೆ, ಮಂಚೇನಹಳ್ಳಿ ತಾಲೂಕಿನಲ್ಲಿಅತಿ ಹೆಚ್ಚು ಮತ್ತು ಚೇಳೂರು ತಾಲೂಕಿನಲ್ಲಿಅತಿ ಕಡಿಮೆ ಮತದಾನವಾಗಿದೆ. ಪದವೀಧರ ಮತದಾರರು ಸರತಿ ಸಾಲಿನಲ್ಲಿನಿಂತು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಬಿಗಿ ಬಂದೋಬಸ್ ್ತನಲ್ಲಿಚುನಾವಣೆ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಬಾಕ್ಸ್
ಮತದಾನದ ವಿವರ
ಮಂಚೇನಹಳ್ಳಿ: ಶೇ.89.83 (ಜಿಲ್ಲೆಯಲ್ಲೇ ಅತಿ ಹೆಚ್ಚು)
ಗುಡಿಬಂಡೆ: ಶೇ.79.72
ಶಿಡ್ಲಘಟ್ಟ: ಶೇ.78.23
ಚಿಂತಾಮಣಿ: ಶೇ.75.61
ಗೌರಿಬಿದನೂರು: ಶೇ.75.20
ಬಾಗೇಪಲ್ಲಿ: ಶೇ.71.82
ಚಿಕ್ಕಬಳ್ಳಾಪುರ: ಶೇ.71.34
ಚೇಳೂರು: ಶೇ.63.52 (ಜಿಲ್ಲೆಯಲ್ಲೇ ಅತಿ ಕಡಿಮೆ)
ಬಾಕ್ಸ್
ಆಗ್ನೇಯ ಪದವೀಧರ ಚುನಾವಣೆ; ಮತದಾರರಿಗೆ ಹಣ ಹಂಚಿಕೆ ಆರೋಪ; ಇಬ್ಬರ ವಿರುದ್ಧ ದೂರು ದಾಖಲು
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ
ಜಿಲ್ಲಾದ್ಯಂತ ಶುಕ್ರವಾರ ನಡೆದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಬಹುತೇಕ ಶಾಂತಯುತವಾಗಿ ಮುಕ್ತಾಯಗೊಂಡಿದೆ. ಆದರೆ ಮತದಾರರಿಗೆ ಹಣ ಹಂಚಿಕೆ ಮಾಡಿದ ಗಂಭೀರ ಆರೋಪವೊಂದು ಕೇಳಿಬಂದಿದೆ.
ನಗರದ ತಾಲೂಕು ಕಚೇರಿ ಬಳಿ ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಮತಯಾಚಿಸಲು ಮತದಾರರಿಗೆ ಹಣದ ಆಮಿಷವೊಡ್ಡಲಾಗಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಚುನಾವಣೆ ಜಾಗೃತ ದಳದ ಅಧಿಕಾರಿಗಳು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ನಡೆದದ್ದೇನು?: ಮತದಾನದ ದಿನವಾದ ಶುಕ್ರವಾರ ಮಧ್ಯಾಹ್ನ ಸುಮಾರು 1.20ರ ಸುಮಾರಿಗೆ ತಾಲೂಕು ಕಚೇರಿ ಪಕ್ಕದಲ್ಲಿರುವ ಪಿಎಲ…ಡಿ ಬ್ಯಾಂಕ್ ಕಟ್ಟಡದ ನೆಲಮಹಡಿಯ ಪಾರ್ಕಿಂಗ್ ಸ್ಥಳದಲ್ಲಿಇಬ್ಬರು ವ್ಯಕ್ತಿಗಳು ಬಿಜೆಪಿ ಅಭ್ಯರ್ಥಿ ಕೆ.ಎಂ. ಸುರೇಶ್ ಪರ ಮತ ಚಲಾಯಿಸುವಂತೆ ಹಣ ಹಂಚುತ್ತಿರುವ ವಿಡಿಯೋ ಜಿಲ್ಲಾಧಿಕಾರಿ ಕಚೇರಿಯ ಚುನಾವಣೆ ಶಾಖೆ ಸಿಬ್ಬಂದಿ ಗಮನಕ್ಕೆ ಬಂದಿದೆ. ಕೂಡಲೇ ಈ ಮಾಹಿತಿಯನ್ನು ಎಫ್ ಎಸ್ ಟಿ (ಫ್ಲೈಯಿಂಗ್ ಸ್ಕಾ$್ವಡ್ ಟೀಮ…) ತಂಡದ ಮುಖ್ಯಸ್ಥರಿಗೆ ರವಾನಿಸಲಾಗಿದೆ.
ಸ್ಥಳದಲ್ಲಿಕರಪತ್ರಗಳು ಜಪ್ತಿ: ಮಾಹಿತಿ ತಿಳಿಯುತ್ತಿದ್ದಂತೆಯೇ ಎಫ್ ಎಸ್ ಟಿ ಮುಖ್ಯಸ್ಥ ಡಿ.ಎಂ. ರವಿಕುಮಾರ್ ಹಾಗೂ ತಂಡ ಸ್ಥಳಕ್ಕೆ ಧಾವಿಸಿತು. ಅಧಿಕಾರಿಗಳು ಬರುವುದನ್ನು ಗಮನಿಸಿದ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸ್ಥಳ ಪರಿಶೀಲನೆ ನಡೆಸಿದಾಗ ಸುಮಾರು 200ಕ್ಕೂ ಹೆಚ್ಚು ಚುನಾವಣೆ ಪ್ರಚಾರದ ಭಿತ್ತಿಪತ್ರಗಳು (ಕರಪತ್ರಗಳು) ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಣ ಹಂಚಿಕೆಯಲ್ಲಿತೊಡಗಿದ್ದ ಶ್ರೀನಿವಾಸ್ ಹಾಗೂ ಆತನ ಜತೆಗಿದ್ದ ಮತ್ತೊಬ್ಬ ಅಪರಿಚಿತ ವ್ಯಕ್ತಿಯ ವಿರುದ್ಧ ಚುನಾವಣೆ ನೀತಿಸಂಹಿತೆ ಉಲ್ಲಂಘನೆ ಅಡಿಯಲ್ಲಿಕಾನೂನು ಕ್ರಮ ಜರುಗಿಸುವಂತೆ ಅಧಿಕಾರಿಗಳು ದೂರಿನ ಜತೆಗೆ ವಿಡಿಯೋ ಸಿಡಿ ಹಾಗೂ ವಶಪಡಿಸಿಕೊಂಡ ಭಿತ್ತಿಪತ್ರಗಳನ್ನು ಪೊಲೀಸರಿಗೆ ಹಾಜರುಪಡಿಸಿದ್ದಾರೆ.