Kesari Tours Awarded Best International Group Tour Operator
ಕೇಸರಿ ಟೂರ್ಸ್ಗೆ ‘ಇಂಡಿಯಾ ಟ್ರಾವೆಲ್ ಅವಾರ್ಡ್ಸ್’ ಗೌರವ
Contributed by: Harsha Vardhana|Vijaya Karnataka•
ಹೊಸದಿಲ್ಲಿ: ಪ್ರಸಿದ್ಧ ‘ಇಂಡಿಯಾ ಟ್ರಾವೆಲ್ ಅವಾರ್ಡ್ಸ್ 2026’ ಸಮಾರಂಭದಲ್ಲಿ ಕೇಸರಿ ಟೂರ್ಸ್ ಸಂಸ್ಥೆಯು ‘ಅತ್ಯುತ್ತಮ ಅಂತಾರಾಷ್ಟ್ರೀಯ ಗ್ರೂಪ್ ಟೂರ್ ಆಪರೇಟರ್ ’ ಪ್ರಶಸ್ತಿಗೆ ಭಾಜನವಾಗಿದೆ. ಸತತ ಮೂರನೇ ಬಾರಿಗೆ ಈ ಗೌರವವನ್ನು ಪಡೆದಿರುವ ಕೇಸರಿ ಟೂರ್ಸ್, ತನ್ನ ಅತ್ಯುತ್ತಮ ಸೇವೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಜೇಲಮ್ ಚೌಬಾಲ್ ಪಾಟೀಲ್ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿ ಹೆಮ್ಮೆ ವ್ಯಕ್ತಪಡಿಸಿದರು.
1984ರಲ್ಲಿಸ್ಥಾಪನೆಯಾದ ಕೇಸರಿ ಟೂರ್ಸ್, ಕಳೆದ 42 ವರ್ಷಗಳಿಂದ ಗುಣಮಟ್ಟದ ಸೇವೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿದೆ. ಮಹಿಳೆಯರು, ಹಿರಿಯ ನಾಗರಿಕರು, ಮದುಮಕ್ಕಳು ಹಾಗೂ ವಿದ್ಯಾರ್ಥಿಗಳಿಗಾಗಿ ವಿಶೇಷ ಪ್ರವಾಸ ಪ್ಯಾಕೇಜ್ ಗಳನ್ನು ಸಂಸ್ಥೆ ನೀಡುತ್ತಾ ಬಂದಿದೆ. ‘‘ಪ್ರವಾಸಿಗರ ಅಚಲ ವಿಶ್ವಾಸ ಮತ್ತು ಸಿಬ್ಬಂದಿಯ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದ್ದು, ವಿಶ್ವದಾದ್ಯಂತ ಸ್ಮರಣೀಯ ಪ್ರವಾಸ ಅನುಭವವನ್ನು ಒದಗಿಸಲು ಸಂಸ್ಥೆ ಬದ್ಧವಾಗಿದೆ,’’ ಎಂದು ಜೇಲಮ್ ಚೌಬಾಲ್ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.