- ಯೋಜನೆ ವಿರೋಧಿಸಿ ಒಕ್ಕೂಟದಿಂದ ಮುಷ್ಕರ ನಡೆಸುವ ಎಚ್ಚರಿಕೆವಿಕ ಸುದ್ದಿಲೋಕ ಚಿಕ್ಕಮಗಳೂರು
ಕೇಂದ್ರ ಸರಕಾರದ ಹೊಸ ಇಪಿಎಫ್ ಯೋಜನೆ ಕಾರ್ಮಿಕರ ವಿರೋಧಿಯಾಗಿದ್ದು, ಇದನ್ನು ಹಿಂಪಡೆಯದಿದ್ದರೆ ಎಲ್ಲಕಾರ್ಮಿಕ ಸಂಘಟನೆಗಳು ಒಗ್ಗೂಡಿ ಮುಷ್ಕರ ನಡೆಸಲಾಗುವುದು ಎಂದು ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ ಎಚ್ಚರಿಸಿದೆ.
ಐಎನ್ ಟಿಯುಸಿ ಪ್ರಧಾನ ಕಾರ್ಯದರ್ಶಿ ಮಾಣಿಕ್ಯ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿ, ಕೇಂದ್ರ ಸರಕಾರದ ನೂತನ ಇಪಿಎಫ್ ಯೋಜನೆಯಿಂದ ಕಾಫಿ, ಚಹಾ, ರಬ್ಬರ್ ತೋಟಗಳಲ್ಲಿದುಡಿಯುತ್ತಿರುವ ಸಹಸ್ರಾರು ಕಾರ್ಮಿಕರಿಗೆ ಸಮಸ್ಯೆಯಾಗಲಿದೆ. ಕೇಂದ್ರ ಸರಕಾರ ಕೂಡಲೇ ಈ ನಿಯಮಗಳನ್ನು ಪರಿಶೀಲಿಸಿ, ತೋಟ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಕಾಫಿ, ಚಹಾ, ರಬ್ಬರ್ ತೋಟಗಳಲ್ಲಿದುಡಿಯುವ ಕಾರ್ಮಿಕರು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಜೀವನ ಸಾಗಿಸುತ್ತಿದ್ದಾರೆ. ಕಡಿಮೆ ದಿನಗೂಲಿ, ಉದ್ಯೋಗದ ಅನಿಶ್ಚಿತತೆ, ಕುಟುಂಬ ನಿರ್ವಹಣೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಖರ್ಚುಗಳು ಅವರ ಬದುಕಿನ ಭಾಗವಾಗಿವೆ. ಇಂತಹ ಸಂದರ್ಭದಲ್ಲಿಕಾರ್ಮಿಕರ ಭವಿಷ್ಯ ನಿಧಿ ಅವರ ಪಾಲಿಗೆ ಕೇವಲ ಉಳಿತಾಯವಲ್ಲ, ಸಂಕಷ್ಟದ ಸಮಯದಲ್ಲಿನೆರವಾಗುವ ಪ್ರಮುಖ ಸಾಮಾಜಿಕ ಭದ್ರತೆಯಾಗಿದೆ. ಆ ಹಣವನ್ನು ಅಗತ್ಯವಿದ್ದಾಗ ಬಳಸಿಕೊಳ್ಳಲು ಅನಗತ್ಯ ನಿರ್ಬಂಧ ವಿಧಿಸಿರುವುದು ಖಂಡನೀಯ ಎಂದು ಹೇಳಿದರು.
ಪಿಎಫ್ ಹಣದಲ್ಲಿಶೇ.25ರಷ್ಟನ್ನು ಖಾತೆಯಲ್ಲಿಉಳಿಸಿಕೊಳ್ಳುವ ಕಡ್ಡಾಯ ನಿಯಮಕ್ಕೆ ವಿನಾಯಿತಿ ನೀಡಬೇಕು. ಪಿಎಫ್ ಮುಂಗಡ ಹಣ ಪಡೆಯುವ ಸಂದರ್ಭದಲ್ಲಿಒಟ್ಟು ಮೊತ್ತದ ಶೇ.25ರಷ್ಟು ಹಣವನ್ನು ಖಾತೆಯಲ್ಲೇ ಉಳಿಸಬೇಕು ಎಂಬ ನಿಯಮವು ಕಾರ್ಮಿಕರ ತುರ್ತು ಅಗತ್ಯಗಳಿಗೆ ಅಡ್ಡಿಯಾಗಬಾರದು. ಕಾರ್ಮಿಕರಿಗೆ ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಹಾಗೂ ಇತರ ತುರ್ತು ಸಂದರ್ಭಗಳಲ್ಲಿಹಣದ ಅಗತ್ಯವಿರುತ್ತದೆ. ಹೀಗಾಗಿ ಪ್ಲಾಂಟೇಶನ್ ಕಾರ್ಮಿಕರಿಗೆ ಈ ನಿಯಮದಿಂದ ವಿನಾಯಿತಿ ನೀಡಿ, ಅನ್ವಯಿಸುವ ನಿಯಮಗಳ ಪ್ರಕಾರ ಅರ್ಹ ಮೊತ್ತವನ್ನು ಪೂರ್ಣವಾಗಿ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪೂರ್ಣ ಪಿಎಫ್ ಸೆಟ್ ್ಲಮೆಂಟ್ ಗಾಗಿ 12 ತಿಂಗಳು ಕಾಯುವ ನಿಯಮವನ್ನು ಹಿಂಪಡೆಯಬೇಕು. ನಮ್ಮ ಬೇಡಿಕೆಗಳನ್ನು ಕೇಂದ್ರ ಸರಕಾರ ಪರಿಗಣಿಸಿ ನ್ಯಾಯ ಒದಗಿಸದಿದ್ದರೆ ಹಂತಹಂತವಾಗಿ ಹೋರಾಟ ಆರಂಭಿಸಲಾಗುವುದು ಎಂದು ಎಚ್ಚರಿಸಿದರು.
ಪ್ಲಾಂಟೇಶನ್ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿಯು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನೊಂದಿಗೆ ವೇತನ ಸಂಬಂಧಿತ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ಕಾರ್ಮಿಕರಿಗೆ ಶೇ.17ರಷ್ಟು ವೇತನ ಹೆಚ್ಚಳವಾಗಲಿದೆ ಎಂದರು.
ಐಎನ್ ಟಿಯುಸಿ ಸಂಘಟನೆಯ ರಾಮಚಂದ್ರ ಒಡೆಯರ್ , ಗೋವಿಂದನ್ , ಸೆಲ್ವಂ, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಸಿ.ಧರ್ಮರಾಜ್ , ರಮೇಶ್ ಮತ್ತಿತರರು ಇದ್ದರು.