ಹಾವೇರಿ: ಬಾಗಲಕೋಟ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ2026-27ನೇ ಸಾಲಿನ ತೋಟಗಾರಿಕಾ ಮೇಳವನ್ನು ಡಿ.23 ರಿಂದ 25ರ ವರೆಗೆ ಹವಾಮಾನ ವೈಪರೀತ್ಯದಲ್ಲಿಸುಸ್ಥಿರ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ವಿಶ್ವವಿದ್ಯಾಲಯದ ಆವರಣದಲ್ಲಿಹಮ್ಮಿಕೊಳ್ಳಲಾಗಿದೆ.ಈ ತೋಟಗಾರಿಕಾ ಮೇಳದಲ್ಲಿತೋಟಗಾರಿಕೆ ಕ್ಷೇತ್ರದಲ್ಲಿವಿಶೇಷ ಸಾಧನೆ ಮಾಡಿದ ಕೃಷಿಕರಿಗೆ ವಿಶ್ವವಿದ್ಯಾಲಯದ ವತಿಯಿಂದ ಪ್ರತಿಯೊಂದು ಜಿಲ್ಲೆಗೆ ಒಬ್ಬ ಶ್ರೇಷ್ಠ ತೋಟಗಾರಿಕಾ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಆದ್ದರಿಂದ ಈ ಪ್ರಶಸ್ತಿಗಾಗಿ ಹಾವೇರಿ ಜಿಲ್ಲೆಯ ರೈತ/ರೈತ ಮಹಿಳೆಯರು ಅರ್ಜಿಯನ್ನು (ಅನುಬಂಧ-1) ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ ಮಹಾವಿದ್ಯಾಲಯ, ದೇವಿಹೊಸೂರು ಕಚೇರಿಯಲ್ಲಿ್ಲಅಥವಾ ತೋ.ವಿ.ವಿ.ಯ ವೆಬ್ ಸೈಟ್ : ಡಿಡಿಡಿ.್ಠhsಚಿaಜa್ಝkಟಠಿ.ka್ಟ್ಞaಠಿaka.ಜಟv.ಜ್ಞಿ hಠಿಠಿp://ಡಿಡಿಡಿ.್ಠhsಚಿaಜa್ಝkಟಠಿ.ka್ಟ್ಞaಠಿaka.ಜಟv.ಜ್ಞಿ ಮೂಲಕ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು 2026 ನ.3ರೊಳಗೆ ಮೇಲಿನ ವಿಳಾಸಕ್ಕೆ ಸಲ್ಲಿಸಬೇಕು. ಮಾಹಿತಿಗೆ ಮೊ. 9480696396/9740603949 ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ 1800-425-7910ಗೆ ಸಂಪರ್ಕಿಸಬಹುದು.