ಕುಣಿಗಲ್ ನಲ್ಲಿಶೇ.89ರಷ್ಟು ಮತದಾನ

Contributed by: sidduvijaykarnataka@gmail.com|Vijaya Karnataka•
89 voter turnout in kunigal peaceful election process underway
ವಿಕ ಸುದ್ದಿಲೋಕ ಕುಣಿಗಲ್

ರಾಜಕೀಯ ವಲಯದಲ್ಲಿಭಾರಿ ಕುತೂಹಲ ಮೂಡಿಸಿರುವ ಆಗ್ನೇಯ ಪದವೀಧರರ ಪರಿಷತ್ ಚುನಾವಣೆ ತಾಲೂಕಿನಲ್ಲಿಶಾಂತಿಯುತವಾಗಿ ನಡೆಯುವ ಮೂಲಕ ಶೇ.89ರಷ್ಟು ಮತದಾನವಾಗಿದೆ.
ಶುಕ್ರವಾರ ಬೆಳಗ್ಗೆ ಎಂಟು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ನಡೆದ ಚುನಾವಣೆಯಲ್ಲಿಪದವೀಧರ ಮತದಾರರು ತಾಲೂಕಿನ ಕೊತ್ತಗೆರೆ, ಯಡಿಯೂರು, ಅಮೃತೂರು, ಹುಲಿಯೂರುದುರ್ಗ, ಹುತ್ರಿದುರ್ಗ ಕುಣಿಗಲ್ ಕಸಬಾ ಸೇರಿ 6 ಹೋಬಳಿ ಕೇಂದ್ರದ ಮತಗಟ್ಟೆಗೆ ತೆರಳಿ ಸರತಿ ಸಾಲಿನಲ್ಲಿನಿಂತು ಮತದಾನ ಮಾಡಿದರು. ತಾಲೂಕಿನಲ್ಲಿ2216 ಪದವೀಧರ ಮತಗಳು ನೋಂದಣಿಯಾಗಿದ್ದು, ಈ ಬಾರಿಯ ಚುನಾವಣೆಯಲ್ಲಿ2017 ಮತದಾರರು ಗೌಪ್ಯ ಮತದಾನ ಮಾಡಿದ್ದಾರೆ.

ಯಡಿಯೂರು ಮತಗಟ್ಟೆ ಒಂದರಲ್ಲಿಯೇ ಎನ್ ಡಿಎ ಮೈತ್ರಿಕೂಟದ ಮುಖಂಡರುಗಳಾದ ಡಿ. ಕೃಷ್ಣಕುಮಾರ್ , ಡಾ. ರವಿ ಬಾಬು, ಬಿ.ಎನ್ . ಲೋಕೇಶ್ ಮತ್ತು ಬಿ.ಎನ್ . ಜಗದೀಶ್ ಹಾಗೂ ಕುಣಿಗಲ್ ಪಟ್ಟಣದಲ್ಲಿಕಾಂಗ್ರೆಸ್ ಮುಖಂಡರಾದ ರಂಗಣ್ಣಗೌಡ ಮತ ಚಲಾಯಿಸಿದ್ದಾರೆ.

ಮತಗಟ್ಟೆಗೆ ಬರುವ ಪದವೀಧರ ಮತದಾರರಿಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಪರವಾಗಿ ಶಾಸಕ ಡಾ. ಎಚ್ .ಡಿ. ರಂಗನಾಥ್ ಅವರು ತಾಲೂಕು ಕಚೇರಿಯ ಮುಂದೆ ಚೀಟಿ ನೀಡುವ ಮೂಲಕ ಮತ ಕೇಳಿದ್ದು ವಿಶೇಷವಾಗಿತ್ತು.

ಚುನಾವಣಾ ಅಧಿಕಾರಿಯಾದ ತಹಸೀಲ್ದಾರ್ ಕರಿಯ ನಾಯಕ್ ತಾಲೂಕಿನಲ್ಲಿಯಾವುದೇ ರೀತಿಯ ಗೊಂದಲ ಇಲ್ಲದೆ ಶಾಂತಿಯುತ ಚುನಾವಣೆಗೆ ವ್ಯವಸ್ಥೆ ಮಾಡಿದರು.

ಪೋಟೋ ಇದೆ:- 23ಕುಣಿಗಲ್ 1: ಶಾಸಕ ಎಚ್ .ಡಿ. ರಂಗನಾಥ್ ಮತಗಟ್ಟೆಯಲ್ಲಿಕಾಂಗ್ರೆಸ್ ಅಭ್ಯರ್ಥಿ ಪರ ಮತ ಕೋರಿದರು.