ಸಂಸತ್ ಭವನ ಮಾದರಿಯಲ್ಲಿವೃತ್ತ ನಿರ್ಮಾಣ

Contributed by: umeshganachari@yahoo.in|Vijaya Karnataka•
ambedkar circle construction a new attraction for tourists
ಸಂಸತ್ ಭವನ ಮಾದರಿಯಲ್ಲಿವೃತ್ತ ನಿರ್ಮಾಣ

ವಿಕ ಸುದ್ದಿಲೋಕ ಇಳಕಲ್
ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ .ಅಂಬೇಡ್ಕರ್ ಕಂಚಿನ ಪ್ರತಿಮೆ ಪ್ರತಿಷ್ಠಾಪನೆಗೆ ಅಂಬೇಡ್ಕರ್ ವೃತ್ತದಲ್ಲಿಅಡಿಪಾಯ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ.

ಸಂಸತ್ ಭವನದ ಮಾದರಿಯಲ್ಲಿಚಿಕ್ಕ ಕಟ್ಟಡ ನಿರ್ಮಿಸಿ ಅದರ ಮೇಲೆ ಪ್ರತಿಮೆ ಪ್ರತಿಷ್ಠಾಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಹಲವು ವರ್ಷಗಳ ಕನಸು ನನಸಾಗಿಸುವ ನಿಟ್ಟಿನಲ್ಲಿಹುನಗುಂದ ಶಾಸಕ, ಜಿಲ್ಲಾಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಪ್ರಯತ್ನ ನಡೆಸಿದ್ದಾರೆ. ವೃತ್ತ ನಿರ್ಮಾಣಕ್ಕೆ ಸಚಿವರೇ ಸ್ವತಃ 22 ಲಕ್ಷ ರೂ. ಭರಿಸಿದ್ದು ವಿಶೇಷ. ನಗರೋತ್ಥಾನ ಎಸ್ ಎಪಿಟಿಎಸ್ ಅನುದಾನದಡಿ ಒಂದು ಕೋಟಿ ರೂ. ವೆಚ್ಚದಲ್ಲಿವೃತ್ತ ನಿರ್ಮಿಸುತ್ತಿದ್ದು, ಶರಣಪ್ಪ ಆಮದಿಹಾಳ, ಸುರೇಶ ಜಂಗ್ಲಿಮತ್ತಿತರರು ಸಚಿವರ ಮೇಲೆ ಒತ್ತಡ ಹೇರಿ ಕಾಮಗಾರಿಗೆ ವೇಗ ಕಲ್ಪಿಸಿದ್ದಾರೆ.

2027ರ ಏ.14 ರಂದು ಅಂಬೇಡ್ಕರ್ ಜಯಂತಿ ದಿನದಂದು ವೃತ್ತ ಉದ್ಘಾಟನೆಗೆ ಸಿದ್ಧತೆ ನಡೆದಿದೆ. 5 ಅಡಿ ಎತ್ತರದ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಲಿಫ್ಟ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಮುಖಂಡ ಸುರೇಶ ಜಂಗ್ಲಿತಿಳಿಸಿದ್ದಾರೆ.

(ಫೋಟೊ:21-ಐಎಲ್ಕೆ-1)-

ಇಳಕಲ್ ನಗರದ ಅಂಬೇಡ್ಕರ್ ವೃತ್ತದಲ್ಲಿಕಂಚಿನ ಪ್ರತಿಮೆ ಸ್ಥಾಪಿಸಲು ಸಂಸತ್ ಭವನ ಮಾದರಿಯಲ್ಲಿಕಟ್ಟಡ ನಿರ್ಮಿಸಿರುವುದು.