(ಸೂಚನೆ: ಹಾಸನದವರು ಬಳಸಿಕೊಳ್ಳಬಹುದು) ಬಸವರಾಜಾಚಾರ್ ಗೆ ಪ್ರಿಂಟ್ ಬಿನಾಲೆ ಇಂಡಿಯಾ ಪ್ರಶಸ್ತಿ ಪ್ರದಾನ
Vijaya Karnataka•
ಬೆಂಗಳೂರು: ಕೇಂದ್ರ ಲಲಿತ ಕಲಾ ಅಕಾಡೆಮಿ ವತಿಯಿಂದ ಹೊಸದಿಲ್ಲಿಯಲ್ಲಿಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿಕರ್ನಾಟಕ ಮೂಲದ ಚಿತ್ರ ಕಲಾವಿದ ಬಸವರಾಜಾಚಾರ್ ಸೇರಿದಂತೆ ಐವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂತಾರಾಷ್ಟ್ರೀಯ ಮಟ್ಟದ ‘ಪ್ರಿಂಟ್ ಬಿನಾಲೆ ಇಂಡಿಯಾ’ ಪ್ರಶಸ್ತಿ ಪ್ರದಾನ ಮಾಡಿದರು.
ಬಸವರಾಜಾಚಾರ್ ಅವರ ‘ಲೈಫ್ ಸೈಕಲ್ ’ ಎಂಬ ಚಿತ್ರ ಕಲಾಕೃತಿಗೆ ಈ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು 2 ಲಕ್ಷ ರೂಪಾಯಿ ನಗದು ಹಾಗೂ ಪ್ರಮಾಣ ಪತ್ರ ಒಳಗೊಂಡಿದೆ. ಮೂಲತಃ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಬ್ಬೂರು ಗ್ರಾಮದ ಇವರು ಬೆಂಗಳೂರು ನಿವಾಸಿಯಾಗಿದ್ದಾರೆ. ಮುದ್ರಣ ಮಾಧ್ಯಮದ ಕಲೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಪ್ರಶಸ್ತಿ ಕೊಡಲಾಗುತ್ತದೆ. 34 ದೇಶಗಳಿಂದ 1449 ಪ್ರವೇಶಗಳು ಬಂದಿದ್ದು, ಆಯ್ಕೆ ಸಮಿತಿಯು ಬಸವರಾಜಾಚಾರ್ ಸೇರಿದಂತೆ ಐವರನ್ನು ಆಯ್ಕೆ ಮಾಡಿತ್ತು.ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಸಮಾರಂಭದಲ್ಲಿಉಪಸ್ಥಿತರಿದ್ದರು.