ರಾಣಿ ಚನ್ನಮ್ಮ ಜಯಂತಿ ಆಚರಣೆಲಕ್ಕುಂಡಿ: ಇಲ್ಲಿಯ ಲಕ್ಕುಂಡಿ ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿವೀರರಾಣಿ ಕಿತ್ತೂರ ಚನ್ನಮ್ಮಳ 248 ನೇ ಜಯಂತಿ ಆಚರಿಸಲಾಯಿತು.
ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕರ್ನಾಟಕದ ವೀರಮಾತೆ ಚನ್ನಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ಗುರುಮಾತೆ ಆರ್ .ಬಿ.ಬರದ್ವಾಡ, ಹಿರಿಯ ಶಿಕ್ಷಕ ಬಸವರಾಜ ಆಯ್ .ಗರ್ಜಪ್ಪನವರ, ಎ.ಎಂ. ದಂಡಿನ, ಅರ್ಜುನ ಚಲವಾದಿ, ಆರ್ .ಎಂ.ದಂಡಿನ, ಶಿವಲೀಲಾ ಸುತ್ತೂರಮಠ, ಲಕ್ಷ್ಮೇ ಗರ್ಜಪ್ಪನವರ, ಅಂಬುಜಾ ಕುಲಕರ್ಣಿ ಹಾಗೂ ವಿದ್ಯಾರ್ಥಿಗಳು ಇದ್ದರು.
ಫೋಟೊ: 23ಎಲ್ ಕೆಡಿ 3:
ಲಕ್ಕುಂಡಿಯಲ್ಲಿಬಾಪೂಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿವೀರರಾಣಿ ಕಿತ್ತೂರ ಚನ್ನಮ್ಮಳ 248ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು.