ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಾಣಿಯೂರು ಇದರ ಸದಸ್ಯೆ ಕುಸುಮಾವತಿ ಕೆನ್ನಾರು ಕಾಣಿಯೂರು ಅವರು ಇತ್ತೀಚೆಗೆ ನಿಧನರಾಗಿದ್ದು, ಅವರ ಪುತ್ರ ಮೋಹನ ಅವರಿಗೆ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಧನ ಸಹಾಯದ ಚೆಕ್ ನ್ನು ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ ಸಂಘದ ಪ್ರಧಾನ ಕಚೇರಿಯಲ್ಲಿಹಸ್ತಾಂತರಿಸಿದರು.ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ನಿರ್ದೇಶಕರಾದ ಅನಂತ ಕುಮಾರ್ ಬೈಲಂಗಡಿ, ರಮೇಶ್ ಉಪ್ಪಡ್ಕ, ಸುಂದರ ದೇವಸ್ಯ, ಪರಮೇಶ್ವರ ಅನಿಲ, ದಿವಾಕರ ಮರಕ್ಕಡ, ಲೋಕೇಶ್ ಆತಾಜೆ, ಶೀಲಾವತಿ ಮುಗರಂಜ, ವೀಣಾ ಅಂಬುಲ, ರತ್ನಾವತಿ ಮುದ್ವ, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಗೌಡ ಉಪಸ್ಥಿತರಿದ್ದರು.
(ಚೆಕ್ ಹಸ್ತಾಂತರಿಸಲಾಯಿತು: ಫೊಟೋ ಫೈಲ್ ನೇಮ್ 23ಕೆಡಿಬಿ ಎಸ್ ಟಿ)