ತೆಂಗಿನ ಮರಗಳಿಗೆ ದುಂಬಿಗಳ ಕಾಟ !

Contributed by: www.hvprasanna@gmail.com|Vijaya Karnataka•
destruction of coconut trees due to weevil infestation
ತೆಂಗಿನ ಮರಗಳಿಗೆ ದುಂಬಿಗಳ ಕಾಟ !

ವೀಕ ಸುದ್ದಿಲೋಕ ಸಾತನೂರು : ಕಾಂಡಕೊರಕ ದುಂಬಿಗಳ ಹಾವಳಿಯಿಂದಾಗಿ ತೆಂಗಿನ ಮರಗಳ ಸುಳಿಗಳು ಒಣಗಿ ಮರಗಳು ಸಂಪೂರ್ಣವಾಗಿ ನಾಶವಾಗುತ್ತಿದ್ದು, ತೆಂಗು ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅತ್ತಿಹಳ್ಳಿ ಗ್ರಾಮದ ಲಕ್ಷ್ಮಣ ಎಂಬುವವರ ಫಲಭರಿತ ಸುಮಾರು ಹತ್ತು ತೆಂಗಿನ ಮರಗಳು ಕಾಂಡಕೊರೆಯುವ ದುಂಬಿಗಳ ಹಾವಳಿಯಿಂದ ಸಂಪೂರ್ಣವಾಗಿ ಹಾಳಾಗಿವೆ.

ಒಂದು ತೆಂಗಿನ ಮರ ಬೆಳೆಸಲು ಸುಮಾರು ನಾಲ್ಕು ರಿಂದ ಐದು ವರ್ಷ ಬೇಕಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿದುಂಬಿಗಳು ಹೆಚ್ಚಾಗಿ ತೆಂಗಿನ ಮರದ ಸುಳಿಯನ್ನೇ

ತಿಂದು ನಾಶಪಡಿಸುತ್ತಿದ್ದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಬೆಳೆಗಾರರು ಸಿಲುಕಿದ್ದೇವೆ ಎಂದು ರೈತ ಲಕ್ಷ್ಮಣ್ ತಮ್ಮ ಅಳಲನ್ನು ತೋಡಿಕೊಂಡರು.

ತೆಂಗಿನ ಮರಗಳಲ್ಲಿಹೆಚ್ಚಾಗಿ ಕಂಡುಬರುವ ದುಂಬಿಯನ್ನು ರೈನೋ ಸೀರಿಯಸ್ ಅಥವಾ ಕೊಂಬಿನ ಹುಳು ಎನ್ನಲಾಗುತ್ತದೆ. ಈ ದುಂಬಿಗಳು ಮರದ ಸುಳಿಯನ್ನೇ ತಿನ್ನುವುದರಿಂದ ಗರಿ ಬಿಚ್ಚಿಕೊಂಡಾಗ ಕತ್ತರಿಸಿದ, ಇಂಗ್ಲಿಷ್ ವಿ ಆಕಾರದ ಗುರುತುಗಳು ಕಾಣುತ್ತವೆ, ತೀವ್ರತೆ ಹೆಚ್ಚಾದರೆ, ಸುಳಿ ಕೊಳೆತು ಮರವೇ ಸಂಪೂರ್ಣವಾಗಿ ಒಣಗಿ ಹೋಗುತ್ತದೆ.

ತೆಂಗಿನ ತೋಟದ ನೈರ್ಮಲ್ಯ ಮತ್ತು ಯಾಂತ್ರಿಕ ಪದ್ಧತಿ, ದುಂಬಿಗಳು ಮೊಟ್ಟೆ ಇಟ್ಟು ಮರಿ ಮಾಡಲು ಮುಖ್ಯವಾಗಿ ತೋಟದಲ್ಲಿರುವ ಸಗÜಣಿ ಗೊಬ್ಬರದ ಗುಂಡಿಗಳು ಮತ್ತು ಒಣಗಿದ ಮತ್ತು ಸತ್ತ ತೆಂಗಿನ ಮರಗಳ ಕಾಂಡಗಳು ಕಾರಣವಾಗಿವೆ. ಒಣಗಿದ ತೆಂಗಿನ ಗರಿಗಳನ್ನು ತೋಟದಿಂದ ಹೊರಗೆ ತೆಗೆದು ಸುಟ್ಟು ಹಾಕಬೇಕು. ಹುಳುಗಳನ್ನು

ಹೊರ ತೆಗೆಯುವುದು, ಕಬ್ಬಿಣದ ಕೊಕ್ಕೆವುಳ್ಳ ಸಲಾಕಿಗಳನ್ನು ಬಳಸಿ ಮರದ ಸುಳಿಯಲ್ಲಿರುವ ದುಂಬಿಗಳನ್ನು ಹೊರ ತೆಗೆಯಬೇಕು.

ದುಂಬಿಗಳ ಕಾಟದಿಂದ ತೆಂಗಿನ ಮರಗಳು ಹೆಚ್ಚಿನ ಸಂಖ್ಯೆಯಲ್ಲಿನಾಶವಾಗುತ್ತಿದ್ದು, ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಂಬಂಧಪಟ್ಟ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತೆಂಗಿನ ತೋಟಗಳಿಗೆ ಭೇಟಿ ನೀಡಿ, ದುಂಬಿ ನಿಯಂತ್ರಣಗಳ ಬಗ್ಗೆ ಸೂಕ್ತ ಮಾಹಿತಿ ನೀಡಿ, ನಷ್ಟದಲ್ಲಿರುವ ರೈತರಿಗೆ ಆರ್ಥಿಕ ನೆರವು ನೀಡಬೇಕೆಂದು ಸಾತನೂರು ಹೋಬಳಿ ತೆಂಗು ಬೆಳೆ ರೈತರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.

----

23 ಸಾತನೂರು 1: ದುಂಬಿ ಹುಳುಗಳ ಕಾಟದಿಂದ ತೆಂಗಿನ ಮರಗಳು ನಾಶವಾಗಿರುವುದು