ಯೆಮನ್ ಜಲಪ್ರದೇಶದಲ್ಲಿದಾಳಿಗೊಳಗಾದ ಐಷಾರಾಮಿ ನೌಕೆಯಲ್ಲಿದ್ದ ಎಲ್ಲಾ14 ಭಾರತೀಯ ನಾಗರಿಕರು ಸಂಪೂರ್ಣ ಸುರಕ್ಷಿತವಾಗಿದ್ದಾರೆ ಎಂದು ಯಮನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಖಚಿತಪಡಿಸಿದೆ.ಪ್ರಸ್ತುತ ಈ ಎಲ್ಲಾಭಾರತೀಯರು ಯೆಮೆನ್ ನ ಹೊಡೆದಾ ಪ್ರದೇಶದ ಸುತ್ತಲೂ ಸುರಕ್ಷಿತ ಸ್ಥಳದಲ್ಲಿದ್ದಾರೆ ಎಂದು ತಿಳಿಸಲಾಗಿದ್ದು, ಅವರ ಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತೀಯ ದೂತವಾಸವು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದೇ ವೇಳೆ, ಯೆಮನ್ ನಲ್ಲಿಹೆಚ್ಚುತ್ತಿರುವ ಹಿಂಸಾಚಾರ ಮತ್ತು ಸೌದಿ ಅರೇಬಿಯಾದ ನಾಗರಿಕ ನೆಲೆಗಳ ಮೇಲೆ ಹೌತಿಗಳು ನಡೆಸುತ್ತಿರುವ ದಾಳಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ತೀವ್ರವಾಗಿ ಖಂಡಿಸಿದ್ದಾರೆ.