(æೂೕಕರ್ಣ)ನ್ಯಾ.ಅತುಲ ಅವರಿಂದ ಆತ್ಮಲಿಂಗಕ್ಕೆ ಪೂಜೆ

Contributed by: gajunayakgokarna@gmail.com|Vijaya Karnataka•
justice atul chandurkar performs pooja at atma linga
ವಿಕ ಸುದ್ದಿಲೋಕ ಗೋಕರ್ಣ:

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅತುಲ ಎಸ್ . ಚಾಂದುರ್ ಕರ್ ರವರು ಕುಟುಂಬ ಸಮೇತರಾಗಿ ಶುಕ್ರವಾರ ಇಲ್ಲಿನ ಮಹಾಬಲೇಶ್ವರ ಮಂದಿರಕ್ಕೆ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು. ನಂತರ ಮಂದಿರದ ವತಿಯಿಂದ ಪ್ರಸಾದ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಅರ್ಚಕ ವೇ. ಗಣಪತಿ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಈ ವೇಳೆ ಮಂದಿರದ ಮೇಲಸ್ತುವಾರಿ ಸಮಿತಿ ಸದಸ್ಯರಾದ ವೇ. ಪರಮೇಶ್ವರ ರಮಣಿಪ್ರಸಾದ, ವೇ.ಸುಬ್ರಹ್ಮಣ್ಯ ಅಡಿ, ಮಹೇಶ ಹಿರೇಗಂಗೆ, ದೇವಾಲಯದ ವ್ಯವಸ್ಥಾಪಕರು, ಸಿಬ್ಬಂದಿ, ನ್ಯಾಯಮೂರ್ತಿಗಳ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು. ಇದಕ್ಕೂ ಮೊದಲು ಮಹಾಗಣಪತಿ ಮಂದಿರಕ್ಕೆ ತೆರಳಿ ದರ್ಶನ ಪಡೆದರು. ಇವೆರಡು ದೇವಾಲಯದ ಬಳಿಕ ತಾಮ್ರಗೌರಿ ಮಂದಿರಕ್ಕೆ ತೆರಳಿ ದೇವಿ ದರ್ಶನ ಪಡೆದರು. ಪಿಐ ಶ್ರೀಧರ ಎಸ್ .ಆರ್ . ನೇತೃತ್ವದಲ್ಲಿಪಿಎಸ್ ಐ ಅನಿಲ್ , ಕುಮಟಾ ಪಿಎಸ್ ಐ. ಖಾದರಬಾಷಾ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋೂಬಸ್ ್ತ ಕಲ್ಪಿಸಿದ್ದರು.

23 ಜಿ .ಕೆ .ಎನ್ 1 ಎ, ಬಿ :

ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅತುಲ ಎಸ್ . ಚಾಂದುರ್ ಕರ್ ರವರು ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದರು.