ಗುಂಬಳ್ಳಿ ಬಸ್ ತಂಗುದಾಣ ಅಕ್ರಮ ಕೇರಳ ಲಾಟರಿ, ಮದ್ಯ ಸೇವನೆ ತಾಣ

Contributed by: shankardp123@gmail.com|Vijaya Karnataka•
kerala lottery and alcohol service illegal at gumballi bus stand public outrage against police
- ಪೊಲೀಸರ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

ವಿಕ ಸುದ್ದಿಲೋಕ ಯಳಂದೂರು
ತಾಲೂಕಿನ ಗುಂಬಳ್ಳಿ ಗ್ರಾಮದ ವೃತ್ತದಲ್ಲಿನಿರ್ಮಿಸಿರುವ ಬಸ್ ನಿಲ್ದಾಣದ ತಂಗುದಾಣ ಕೇರಳ ಲಾಟರಿ ಮಾರಾಟ ಮತ್ತು ಮದ್ಯ ಸೇವನೆ ಮಾಡುವ ತಾಣವಾಗಿ ಮಾರ್ಪಾಡಾಗಿದೆ.

ಯಳಂದೂರು ಪಟ್ಟಣದಿಂದ ಹೊಸಳ್ಳಿ ಕೆರೆ ತನಕ ಹೊಸದಾಗಿ ರಸ್ತೆ ನಿರ್ಮಾಣ ಮಾಡಿ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ಬರುವ ಭಕ್ತರು ಮತ್ತು ಸಾರ್ವಜನಿಕರಿಗೆ ಬಿಸಿಲು ಮಳೆ ಬಂದರೆ ಅನುಕೂಲ ವಾಗುವ ಉದ್ದೇಶದಿಂದ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಪ್ರಯಾಣಿಕರಿಗೆ ಅನುಕೂಲವಾಗದೆ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುವವರಿಗೆ ಅನುಕೂಲವಾಗಿದೆ.

ಗುಂಬಳ್ಳಿ ಗ್ರಾಮದ ಬಸ್ ತಂಗುದಾಣದಲ್ಲಿ10 ಮಂದಿಗೂ ಹೆಚ್ಚು ಅಕ್ರಮ ಕೇರಳ ಲಾಟರಿ ಮಾರಾಟಗಾರರು ಗುಂಬಳ್ಳಿ ಬಸ್ ನಿಲ್ದಾಣದಲ್ಲಿರಾಜಾರೋಷವಾಗಿ ಮಾರಾಟ ಮಾಡುತ್ತಾರೆ. ಈ ಬಗ್ಗೆ ಯಳಂದೂರು ಪಟ್ಟಣ ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ್ಲ. ಪೊಲೀಸರಿಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಲಾಟರಿ ಮಾರಾಟ ಮಾಡುವ ಸಮಯದಲ್ಲಿನಮಗೆ ತಿಳಿಸಿ ನಾವು ಬಂದು ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಆರೋಪ: ಯಳಂದೂರು ಪಟ್ಟಣ ಠಾಣೆಗೆ ಅಕ್ರಮ ಕೇರಳ ಲಾಟರಿ ಮಾರಾಟ ಮಾಡುವ ಬಗ್ಗೆ ಮಾಹಿತಿ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಳ್ಳದೆ ಮೂರ್ನಾಲ್ಕು ತಿಂಗಳಿಂದ ಗ್ರಾಮೀಣ ಪ್ರದೇಶಗಳಲ್ಲಿಬೀದಿ, ಅಂಗಡಿ ಮುಗ್ಗಟ್ಟು, ಬಸ್ ತಂದುದಾಣಗಳಲ್ಲಿಮಾರಾಟವಾಗುತ್ತಿದೆ. ಈ ಬಗ್ಗೆ ಎಸ್ಸಿ, ಎಸ್ಟಿ ಹಿತರಕ್ಷಣಾ ಸಮಿತಿ ಸಭೆಗಳಲ್ಲಿಸಾರ್ವಜನಿಕರು ಸಾಕಷ್ಟು ದೂರು ನೀಡಿದ್ದಾರೆ. ಆದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಸಿ ಎಚ್ ಎನ್ 22 ವೈ ಎಲ್ ಡಿ 1

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ ವೃತ್ತದಲ್ಲಿರುವ ಬಸ್ ನಿಲ್ದಾಣದ ತಂಗುದಾಣದಲ್ಲಿಕೇರಳ ಲಾಟರಿ ಮಾರಾಟ ಮಾಡುತ್ತಿರುವುದು.

ಸಿ ಎಚ್ ಎನ್ 22 ವೈ ಎಲ್ ಡಿ 2

ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾ.ಪಂ. ಎದುರು ಚರಂಡಿಯಲ್ಲಿಮದ್ಯದ ಪೌಚ್ ಮತ್ತು ಪ್ಲಾಸ್ಟಿಕ್ ತುಂಬಿರುವುದು.