ಸೂರ್ಯ ಘರ್ ಸೇವಾ ಸೇತು ಸೌಲಭ್ಯಕ್ಕೆ ಸಲಹೆ

Contributed by: n.babubhadravathi@gmail.com|Vijaya Karnataka•
mesc comms opportunity for free electricity service through surya ghar scheme
ಸೂರ್ಯ ಘರ್ ಸೇವಾ ಸೇತು ಸೌಲಭ್ಯಕ್ಕೆ ಸಲಹೆ

ವಿಕ ಸುದ್ದಿಲೋಕ ಭದ್ರಾವತಿ
ಕೇಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದಲ್ಲಿಪ್ರಧಾನ ಮಂತ್ರಿ ಸೂರ್ಯ ಘರ್ ಸೇವಾ ಸೇತು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಮುಂದಾಗಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್ .ಆರ್ .ವೀರೇಂದ್ರ ಹೇಳಿದರು.

ಅವರು ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಚೇರಿ ಆವರಣದಲ್ಲಿ3 ದಿನಗಳ ಕಾಲ ಪ್ರಧಾನ ಮಂತ್ರಿ ಸೂರ್ಯಘರ್ ಸೇವಾ ಸೇತು ಯೋಜನೆ ಅನುಷ್ಟಾನಗೊಳಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯುತ್ ಗ್ರಾಹಕರಿಗೆ ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ವಿವಿಧ ಸೋಲಾರ್ ಕಂಪನಿಗಳ ಅಧಿಕೃತ ಮಾರಾಟಗಾರರೊಂದಿಗೆ ಕಾರ್ಯಾಗಾರ ಆಯೋಜಿಸಲಾಗಿದೆ. ಗ್ರಾಹಕರಿಗೆ ಬ್ಯಾಂಕ್ ಸಾಲ ಸೌಲಭ್ಯ ಸಹ ಲಭಿಸಲಿದೆ. ಸೋಲಾರ್ ಅಳವಡಿಕೆಯಿಂದ ಮೆಸ್ಕಾಂಗೆ ವಿದ್ಯುತ್ ಉಳಿತಾಯವಾಗಲಿದ್ದು ಜತೆಗೆ ಗ್ರಾಹಕರು 20 ವರ್ಷಗಳ ಕಾಲ ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿಸಹಾಯಕ ಕಾರ್ಯಪಾಲಕ ಎಂಜಿನಿಯರ್ ಬೀರಪ್ಪ, ಗ್ರಾಮಾಂತರ ಎಂಜಿನಿಯರ್ ಮುನಾಫ್ , ವಿಭಾಗೀಯ ಲೆಕ್ಕಾಧಿಕಾರಿ ಅಶ್ವಿನ್ ಕುಮಾರ್ , ಮೆಸ್ಕಾಂ ಇಲಾಖೆಯ ವಿವಿಧ ಘಟಕಗಳ ಅಧಿಕಾರಿಗಳು ಉಪಸ್ಥಿತರಿದ್ದರು.

17ಭದ್ರಾವತಿ8

ಭದ್ರಾವತಿ ನಗರದ ಉಂಬ್ಳೆಬೈಲು ರಸ್ತೆಯಲ್ಲಿರುವ ಮೆಸ್ಕಾಂ ಕಚೇರಿ ಆವರಣದಲ್ಲಿ3 ದಿನಗಳ ಕಾಲ ಪ್ರಧಾನ ಮಂತ್ರಿ ಸೂರ್ಯಘರ್ ಸೇವಾ ಸೇತು ಯೋಜನೆ ಅನುಷ್ಟಾನಗೊಳಿಸುವ ಕಾರ್ಯಕ್ರಮವನ್ನು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್ .ಆರ್ .ವೀರೇಂದ್ರ ಉದ್ಘಾಟಿಸಿದರು.