ಕೇಂದ್ರದಿಂದ ಎಸ್ ಐಆರ್ ದುರ್ಬಳಕೆ

Contributed by: tsdayananda@gmail.com|Vijaya Karnataka•
strong opposition farmers protest against central governments sir
ವಿಕ ಸುದ್ದಿಲೋಕ ತಿಪಟೂರು

ನೇರವಾಗಿ ಚುನಾವಣೆಗಳಲ್ಲಿಗೆಲ್ಲಲು ಸಾಧ್ಯವಿಲ್ಲಎಂದು ಅರಿತ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ಏನಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಲೇಬೇಕು ಎಂದು ನಿರ್ಧರಿಸಿ ಎಸ್ ಐಆರ್ ಅನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರಕ್ಕೆ ಬರಲು ಹವಣಿಸುತ್ತಿದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಬಸವಣ್ಣ ಆಪಾದಿಸಿದರು.
ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿಸಂಯುಕ್ತ ಕಿಸಾನ್ ಮೋರ್ಚ, ಎಸ್ ಐಆರ್ ವಿರೋಧಿ ಒಕ್ಕೂಟ, ಪ್ರಾಂತ ರೈತ ಸಂಘ ಹಾಗೂ ಇತರ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನಾ ಧರಣಿಯಲ್ಲಿಮಾತನಾಡಿದ ಅವರು, ಈ ಕೂಡಲೇ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ವಜಾ ಮಾಡಬೇಕು ಹಾಗೂ ಇಡೀ ಎಸ್ ಐಆರ್ ಪ್ರಕ್ರಿಯೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಪ್ರಗತಿಪರ ಒಕ್ಕೂಟದ ಅಲ್ಲಾಭಕಾಶ್ ಮಾತನಾಡಿ, ಇಂದು ಕೇಂದ್ರ ಸರಕಾರದ ಹಾಗೂ ಚುನಾವಣಾ ಆಯೋಗದ ಎಸ್ ಐಆರ್ ವಿರುದ್ಧ ದೇಶದಾದ್ಯಂತ ರೈತರೂ ಪ್ರತಿಭಟಿಸುತ್ತಿದ್ದಾರೆ. ಮೊದಲು ದೇಶ ಉಳಿದರೆ ನಾವು ಎನ್ನುವ ಭಾವನೆಯಿಂದ ರೈತರು ನಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದರು.

ಬೆಲೆ ಕಾವಲು ಸಮಿತಿಯ ಶ್ರೀಕಾಂತ್ ಕೆಳಹಟ್ಟಿ ಮಾತನಾಡಿ, ದೇಶದಾದ್ಯಂತ ಎಸ್ ಐಆರ್ ವಿರೋಧಿ ಚಳವಳಿ ತೀವ್ರಗೊಂಡಿದೆ. ಜ್ಞಾನೇಶ್ ಕುಮಾರ್ ರನ್ನು ಬಂಧಿಸಿ ಎಸ್ ಐಆರ್ ಪ್ರಕ್ರಿಯೆ ಸ್ಥಗಿತಗೊಳಿಸುವವರೆಗೂ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲಎಂದರು.

ಈ ವೇಳೆ ರೈತ ಸಂಘದ ಅಧ್ಯಕ್ಷ ಜಯಾನಂದಯ್ಯ, ದೇವರಾಜು ತಿಮ್ಮಲಾಪುರ, ಮುಖಂಡರಾದ ಸಮೀವುಲ್ಲಾಖಾನ್ , ಷಫೀ ಉಲ್ಲಾಷರೀಫ್ , ಇನ್ನಿತರರು ಉಪಸ್ಥಿತರಿದ್ದರು.

ಪೊಟೋ23ತಿಪಟೂರು1: ತಿಪಟೂರಿನ ಸಿಂಗ್ರಿ ನಂಜಪ್ಪ ವೃತ್ತದಲ್ಲಿಪ್ರತಿಭಟನಾ ಧರಣಿಯಲ್ಲಿಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಬಸವಣ್ಣ ಮಾತನಾಡಿದರು.