ಸಂಸ್ಕೃತಿ,ಪರಂಪರೆ ಸಾರುವ ಸಾಂಪ್ರದಾಯಿಕ ಆಚರಣೆಗಳು ಯುವ ಪೀಳಿಗೆಗೆ ದಾರಿ ದೀಪವಾಗಿವೆ ಎಂದು ಬಮುಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ ಹೇಳಿದರು.
ಹೊಸಕೋಟೆ ತಾಲೂಕು ಕಂಬಳೀಪುರ ಗ್ರಾಪಂನಲ್ಲಿಸೋಮವಾರ ಆಯೋಜಿಸಿದ್ದ ಆಯುಧಪೂಜಾ ಕಾರ ್ಯಕ್ರಮದಲ್ಲಿಮಾತನಾಡಿದ ಅವರು, ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳ ಬಳಕೆ ಹೆಚ್ಚುತ್ತಿರುವ ಇಂದಿನ ಕಾಲದಲ್ಲಿಯೂ ಆಯುಧ ಪೂಜೆ ಶ್ರಮದ ಘನತೆ, ವೃತ್ತಿನಿಷ್ಠೆ ಹಾಗೂ ಕಾಯಕವೇ ಕೈಲಾಸ ಎಂಬ ಸಂದೇಶವನ್ನು ಸಾರುತ್ತಿದೆ. ಇಂತಹ ಸಾಂಪ್ರದಾಯಿಕ ಆಚರಣೆಗಳು ಪರಸ್ಪರ ಸೌಹಾರ್ದ ಬೆಳೆಸುವುದರ ಜತೆಗೆ ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುತ್ತವೆ ಎಂದರು.
ಆಯುಧ ಪೂಜೆಯು ಶ್ರಮ, ಕೌಶಲ ಮತ್ತು ವೃತ್ತಿಗೆ ಗೌರವ ಸಲ್ಲಿಸುವ ವಿಶಿಷ್ಟ ಹಬ್ಬವಾಗಿದೆ. ಜೀವನೋಪಾಯಕ್ಕೆ ನೆರವಾಗುವ ಉಪಕರಣಗಳು, ವಾಹನಗಳು ಹಾಗೂ ಯಂತ್ರಗಳನ್ನು ದೇವರ ಸ್ವರೂಪವೆಂದು ಭಾವಿಸಿ ಪೂಜಿಸುವ ಮೂಲಕ ಅವುಗಳ ಮಹತ್ವವನ್ನು ಸ್ಮರಿಸಲಾಗುತ್ತದೆ. ಕೃಷಿಕರು ತಮ್ಮ ಕೃಷಿ ಪರಿಕರಗಳನ್ನು, ಕಾರ್ಮಿಕರು ಕೆಲಸದ ಸಾಧನಗಳನ್ನು ಮತ್ತು ವೃತ್ತಿಯವರು ತಮ್ಮ ಉಪಕರಣಗಳನ್ನು ಪೂಜಿಸುವುದು ಈ ಹಬ್ಬದ ವಿಶೇಷತೆಯಾಗಿದೆ ಎಂದರು.
ಪಂಚಾಯತಿ ಕಚೇರಿಯಲ್ಲಿನ ವಾಹನಗಳು, ಯಂತ್ರೋಪಕರಣಗಳು, ಕೃಷಿ ಪರಿಕರಗಳು ಹಾಗೂ ದೈನಂದಿನ ಕೆಲಸಗಳಿಗೆ ಬಳಸುವ ಸಾಧನಗಳನ್ನು ಸ್ವಚ್ಛಗೊಳಿಸಿ, ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪೂಜೆಯ ಬಳಿಕ ನೆರೆದಿದ್ದವರಿಗೆ ಪ್ರಸಾದ ವಿತರಿಸಲಾಯಿತು. ಈ ಸಂದರ್ಭದಲ್ಲಿಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ನೀರುಗಂಟಿ ಹಾಗೂ ಸಿಬ್ಬಂದಿಗೆ ಬಮುಲ್ ನಿರ್ದೇಶಕ ಬಿ.ವಿ. ಸತೀಶ್ ಗೌಡ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮುನಿಗಂಗಯ್ಯ ಅವರು ಸಮವಸ್ತ್ರ ಹಾಗೂ ಉಡುಗೊರೆಗಳನ್ನು ವಿತರಿಸಿದರು.
ಕಾರ್ಯಕ್ರಮದಲ್ಲಿತಾಪಂ ಇಒ ಮುನಿಯಪ್ಪ, ಗ್ರಾಪಂ ಮಾಜಿ ಅಧ್ಯಕ್ಷ ಮುನಿಯಪ್ಪ, ರಮೇಶ್ , ಲೆಕ್ಕಸಹಾಯಕಿ ಕಾಂತಮ್ಮ, ಕರವಸೂಲಿಗಾರ ಮಂಜುನಾಥ್ , ನಾಗರಾಜ್ , ಅಶ್ವತ್ಥಮ್ಮ, ಗ್ರಾಮ ಪಂಚಾಯಿತಿ ಸಿಬ್ಬಂದಿ, ಪೌರ ಕಾರ್ಮಿಕರು, ಗ್ರಾಪಂ ಮಾಜಿ ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಚಿತ್ರ-19 ಸೂಲಿಬೆಲೆ 2
ಹೊಸಕೋಟೆ ತಾಲೂಕು ಕಂಬಳೀಪುರ ಗ್ರಾಮ ಪಂಚಾಯಿತಿಯಲ್ಲಿನಡೆದ ಆಯುಧ ಪೂಜೆ ಕಾರ ್ಯಕ್ರಮದಲ್ಲಿಬಮುಲ್ ನಿರ್ದೇಶಕ ಬಿ.ವಿ.ಸತೀಶ್ ಗೌಡ, ತಾಪಂ ಇಒ ಮುನಿಯಪ್ಪ, ಪಿಡಿಒ ಮುನಿಗಂಗಯ್ಯ ಭಾಗವಹಿಸಿದ್ದರು.
ಚಿತ್ರ-19 ಸೂಲಿಬೆಲೆ 3
ಹೊಸಕೋಟೆ ತಾಲೂಕು ಕಂಬಳೀಪುರ ಗ್ರಾಮ ಪಂಚಾಯಿತಿಯಲ್ಲಿನಡೆದ ಆಯುಧ ಪೂಜೆ ಕಾರ ್ಯಕ್ರಮದಲ್ಲಿಬಮುಲ್ ನಿರ್ದೇಶಕ ಬಿ.ವಿ ಸತೀಶ್ ಗೌಡರು ಹಾಗೂ ಅಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು