ರಾಯಚೂರು: ದಸರಾ ಹಬ್ಬದ ಆಯುಧಪೂಜೆ ಹಿನ್ನೆಲೆಯಲ್ಲಿಮಾರುಕಟ್ಟೆಯಲ್ಲಿನಾನಾ ವಸ್ತುಗಳ ಖರೀದಿ ಭರಾಟೆ ಸೋಮವಾರ ಜೋರಾಗಿತ್ತು.ಬಾಳೆದಿಂಡು, ಮಾವಿನ ಎಲೆ, ತರಹೇವಾರಿ ಹೂ, ಕುಂಬಳಕಾಯಿ, ತೆಂಗಿನ ಕಾಯಿ, ನಾನಾ ಬಗೆಯ ಹಣ್ಣು ಮುಂತಾದವುಗಳ ಖರೀದಿ ನಡೆಯಿತು. ಗಾತ್ರ ಆಧರಿಸಿ 50ರಿಂದ 150ರೂ.ವರೆಗೆ ಒಂದು ಕುಂಬಳಕಾಯಿ, 60-ರಿಂದ 70ರೂ.ಗೆ ಡಜನ್ ನಂತೆ ಬಾಳೆಹಣ್ಣು, 30 ರೂ.ಗೆ ಒಂದರಂತೆ ಸೇಬು, 100ರೂ.ಗೆ ಕೆಜಿಯಂತೆ ಚೆಂಡು ಹೂ ಮಾರಾಟವಾದವು. ಬೆಲೆ ಏರಿಕೆ ಮಧ್ಯೆಯೂ ಗ್ರಾಹಕರು ಅಗತ್ಯ ಪೂಜಾ ಸಾಮಗ್ರಿ ಖರೀದಿಸುತ್ತಿರುವುದು ಕಂಡುಬಂತು. ಬೆಳಗ್ಗೆಯಿಂದ ಸಂಜೆಯವರೆಗೆ ಮಾರುಕಟ್ಟೆ ಗಿಜಿಗುಡುತ್ತಿತ್ತು. ಚಿಕ್ಕ ಗಾತ್ರದ ತೆಂಗಿನ ಕಾಯಿ ದರ 35-40 ರೂ.ಗೆ ಏರಿಕೆಯಾಗಿದ್ದರಿಂದ, ಹೆಚ್ಚು ಗ್ರಾಹಕರು ಸಗಟು ವ್ಯಾಪಾರಿಗಳ ಬಳಿ ಖರೀದಿಸಿದರು. ಚಂದ್ರಮೌಳೇಶ್ವರ ವೃತ್ತ, ತೀನ್ ಕಂದೀಲ್ , ಉಸ್ಮಾನಿಯಾ ಮಾರುಕಟ್ಟೆ ಮುಂತಾದೆಡೆ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ವೇಳೆ ಹೊಸ ಬಟ್ಟೆಗಳ ಖರೀದಿಯೂ ನಡೆಯಿತು.
---
ಆರ್ ಸಿಎಚ್ 19ಎಂಎಸ್ 06
ಆಯುಧಪೂಜೆ ಹಿನ್ನೆಲೆಯಲ್ಲಿರಾಯಚೂರಿನಲ್ಲಿಚೆಂಡು ಹೂಗಳ ಖರೀದಿ ಭರಾಟೆ ಸೋಮವಾರ ಜೋರಾಗಿತ್ತು.