ಮಹಿಳಾ ಸಂಘದಲ್ಲಿಶಾರದ ಪೂಜೆ

Contributed by: knamana4@gmail.com|Vijaya Karnataka•
sharada puja held with devotion at womens association in virajpet
ವಿಕ ಸುದ್ದಿಲೋಕ ವಿರಾಜಪೇಟೆ

ವಿರಾಜಪೇಟೆಯ ನಂ.371ನೇ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ವಿರಾಜಪೇಟೆ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿಶಾರದಾ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪೂಜೆಯ ಬಳಿಕ ಶಾರಾದ ದೇವಿಗೆ ನೈವೇದ್ಯ ಅರ್ಪಿಸಲಾಯಿತು.

ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿ ಪೂಜಾ ಕೈಂಕರ್ಯದಲ್ಲಿಭಾಗಿಯಾಗಿದ್ದರು. ಮಹಿಳಾ ಸದಸ್ಯರು ದೇವರ ನಾಮ ಹಾಗೂ ಭಜನೆಯನ್ನು ಮಾಡಿದರು.ಪೂಜೆಯ ಬಳಿಕ ನೆರೆದ ಸದಸ್ಯರುಗಳಿಗೆ ಪ್ರಸಾದ ವಿತರಿಸಲಾಯಿತು.

ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ಪಟ್ರಪಂಡ ಗೀತಾ ಬೆಳ್ಯಪ್ಪ, ಉಪಾಧ್ಯಕ್ಷೆ ಬಿ.ಆರ್ . ಸಬಿತ, ನಿರ್ದೆಶಕರಾದ ಆಶಾ ಚಿಣ್ಣಪ್ಪ, ಯು.ಕೆ.ಪೊನ್ನಮ್ಮ, ಕುಸುಮ ಸೋಮಣ್ಣ, ಜಯಲೀಲಾ ಸತೀಶ್ , ಪಿ.ಕೆ. ನೀಲಮ್ಮ, ಪ್ರೇಮ ಮಂಜುನಾಥ್ , ಬಿ.ಎನ್ . ಭಾರತಿ, ಬಿ.ಯಶೋಧ, ಎಚ್ .ಆರ್ . ಪುಷ್ಪವಾಸು, ಪುಷ್ಪ ಐತಪ್ಪ, ಮೆಟಿಲ್ಡಾ ಲೋಬೋ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಜಿ.ಪುಷ್ಪಲತಾ ಸೇರಿದಂತೆ ಮಹಿಳಾ ಸಮಾಜದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿಹಾಜರಿದ್ದರು.

ಪೋಟೋ:ಎಂಡಿಕೆ19ವಿಪಿಟಿ06ಎ: ವಿರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘ ನಿಯಮಿತ ಸಮಾಜದ ಸಭಾಂಗಣದಲ್ಲಿನಡೆದ ಶಾರದಾ ಪೂಜೆಯಲ್ಲಿಮಹಿಳೆಯರು ಭಾಗವಹಿಸಿದ್ದರು.