ಸಹಕಾರ ಕ್ಷೇತ್ರದ ಬದಲಾವಣೆಗಳ ಬಗ್ಗೆ ತರಬೇತಿ ಅಗತ್ಯ

Contributed by: naveena.channappa@timesofindia.com|Vijaya Karnataka•
need for training workshop for cooperative society elections
ವಿಕ ಸುದ್ದಿಲೋಕ ಮಂಡ್ಯ

ಸಹಕಾರ ಕ್ಷೇತ್ರದಲ್ಲಿಆಗುತ್ತಿರುವ ಬದಲಾವಣೆಗಳು, ನೂತನ ಕಾನೂನುಗಳು ಹಾಗೂ ಚುನಾವಣಾ ಪ್ರಕ್ರಿಯೆಗಳ ಕುರಿತು ಸಹಕಾರ ಸಂಘಗಳ ಮುಖ್ಯ ಕಾರ ್ಯನಿರ್ವಾಹಕರು ಮತ್ತು ಚುನಾವಣಾಧಿಕಾರಿಗಳಿಗೆ ಕಾಲಕಾಲಕ್ಕೆ ತರಬೇತಿ ನೀಡುವುದು ಅಗತ್ಯ ಎಂದು ಮಂಡ್ಯ ಜಿಲ್ಲಾಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್ ತಿಳಿಸಿದರು.
ನಗರದ ಜಿಲ್ಲಾಸಹಕಾರ ಒಕ್ಕೂಟದ ಮೂರನೇ ಮಹಡಿ ಸಭಾಂಗಣದಲ್ಲಿರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾಸಹಕಾರ ಒಕ್ಕೂಟ ಹಾಗೂ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿಭಾನುವಾರ ನಡೆದ ಮಂಡ್ಯ ಜಿಲ್ಲೆಯ ಚುನಾವಣಾ ಪ್ರಕ್ರಿಯೆ ನಡೆಯುವ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕರಿಗೆ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

‘‘ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿನಡೆಸಲು ಅಧಿಕಾರಿಗಳಿಗೆ ಸಮಗ್ರ ತಿಳಿವಳಿಕೆ ಇರಬೇಕು.ಸಹಕಾರ ಸಂಘಗಳಿಗೆ ಸಂಬಂಧಿಸಿದ ಜಿಎಸ್ ಟಿ, ಆದಾಯ ತೆರಿಗೆ, ನೌಕರರ ನೇಮಕಾತಿ, ಇಪಿಎಫ್ , ಕಾರ್ಮಿಕ ಕಾನೂನುಗಳು, ಲೆಕ್ಕಪತ್ರ ನಿರ್ವಹಣೆ ಮತ್ತು ಲೆಕ್ಕ ಪರಿಶೋಧನೆ ಸೇರಿದಂತೆ ನಾನಾ ವಿಷಯಗಳ ಕುರಿತು ತರಬೇತಿ ನೀಡಲು ಒಕ್ಕೂಟ ಕ್ರಮ ಕೈಗೊಳ್ಳಲಿದೆ,’’ಎಂದು ಹೇಳಿದರು.

‘‘ಸಹಕಾರ ಸಂಘಗಳ ಗಣಕೀಕರಣ, ಆಡಳಿತಾತ್ಮಕ ಪ್ರಕ್ರಿಯೆಗಳು ಹಾಗೂ ಸರ್ಕಾರಿ ಮಾರ್ಗಸೂಚಿಗಳ ಬದಲಾವಣೆಗಳ ಬಗ್ಗೆಯೂ ಮಾಹಿತಿ ನೀಡಲಾಗು ವುದು. ಸಂಘಗಳ ಬೇಡಿಕೆ ಹಾಗೂ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳಿಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು,’’ಎಂದರು.

ಸಹಕಾರ ಸಂಘಗಳ ಉಪ ನಿಬಂಧಕರಾದ ಬಿ.ಎನ್ .ಶೀಲಾ ಮಾತನಾಡಿ, ‘‘ಚುನಾವಣಾ ಕಾಯಿದೆ-ಕಾನೂನುಗಳಲ್ಲಿಕಾಲಕಾಲಕ್ಕೆ ತಿದ್ದುಪಡಿಗಳಾಗುವುದರಿಂದ ಪ್ರತಿಯೊಂದು ಚುನಾವಣೆಯಲ್ಲಿಯೂ ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು ಅಗತ್ಯ,’’ ಎಂದರು.

‘‘ಚುನಾವಣಾ ಪ್ರಕ್ರಿಯೆಯಲ್ಲಿನ ಗೊಂದಲಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹರಿಸಿಕೊಳ್ಳಬೇಕು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಇತರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮತ್ತು ಲೆಕ್ಕಪತ್ರ ನಿರ್ವಹಣೆ ಕುರಿತು ಸ್ಪಷ್ಟ ತಿಳಿವಳಿಕೆ ಹೊಂದಿರಬೇಕು. ಮುಖ್ಯ ಕಾರ್ಯನಿರ್ವಾಹಕರು ಚುನಾವಣೆಯ ನಿಗದಿತ ದಿನಾಂಕಗಳನ್ನು ನೆನಪಿಟ್ಟುಕೊಂಡು, ಪ್ರತಿಯೊಂದು ಹಂತವನ್ನೂ ನಿಯಮಾನುಸಾರ ಪೂರ್ಣಗೊಳಿಸಬೇಕು,’’ಎಂದು ಸಲಹೆ ನೀಡಿದರು.

ಚುನಾವಣೆ ನೆಡೆಸುವ ಕ್ರಮಗಳು ಹಾಗೂ ಇತ್ತೀಚಿನ ಸಹಕಾರ ಕಾಯಿದೆ ತಿದ್ದುಪಡಿ ಬಗ್ಗೆ ನಿವೃತ್ತ ಸಹಕಾರ ಸಂಘಗಳ ಅಪರ ನಿಬಂಧಕ ಎಚ್ .ಎಸ್ .ನಾಗರಾಜಯ್ಯ ತರಬೇತಿ ನೀಡಿದರು. ಜಿಲ್ಲಾಸಹಕಾರ ಒಕ್ಕೂಟದ ಉಪಾಧ್ಯಕ್ಷೆ ಎಂ.ಪಿ.ಜ್ಯೋತಿ, ನಿರ್ದೇಶಕರಾದ ಎಸ್ .ನಾಗೇಂದ್ರ, ಕೆ.ಎಲ್ .ದೊಡ್ಡಲಿಂಗೇಗೌಡ, ಎಚ್ .ಎನ್ . ಕೃಷ್ಣ, ಆರ್ .ಎಸ್ .ಮಹೇಶ್ , ಎಚ್ .ಬಿ.ಚಂದ್ರು, ಎಸ್ .ಸೋಮಸುಂದರ್ , ರಾಮಕೃಷ್ಣೇಗೌಡ, ಡಿ.ಎಂ.ಮಹೇಂದ್ರ, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಕೆ.ಅನಿತಾ ಹಾಗೂ ಪಾಂಡವಪುರ ಉಪವಿಭಾಗದ ಸಹಾಯಕ ನಿಬಂಧಕ ಎಚ್ .ಆರ್ .ನಾಗಭೂಷಣ್ , ಮುಖ್ಯ ಕಾರ ್ಯನಿರ್ವಾಹಣಾಧಿಕಾರಿ ಎನ್ .ಸುರೇಶ್ ಭಾಗವಹಿಸಿದ್ದರು.