ಇಳುವರಿ ಕುಸಿತ, ನಿಂಬೆ ಬೆಲೆ ಜಿಗಿತ (ಹೆಡ್ )

Contributed by: raghukgjd1@gmail.com|Vijaya Karnataka•
lime price hike customer concerns due to yield decline
ಮಳೆ ಕೊರತೆಯಿಂದ ಇಳುವರಿ ಕುಂಠಿತ | ಪೂರೈಕೆ ಕಡಿಮೆ (ಕಿಕ್ಕರ್ )

ನವರಾತ್ರಿಗೆ ಬೆಲೆ ಹೆಚ್ಚಳ ಬರೆ (ಬಾಕ್ಸ್ )
ಇಳುವರಿ ಕುಸಿತ, ನಿಂಬೆ ಬೆಲೆ ಜಿಗಿತ (ಹೆಡ್ )

ರಾಘವೇಂದ್ರ ಕುಲಕರ್ಣಿ ಗಜೇಂದ್ರಗಡ

ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿನಿಂಬೆ ಹಣ್ಣಿನ ಬೆಲೆ ಹೆಚ್ಚಳವಾಗಿದೆ. ಗುಣಮಟ್ಟದ ನೂರು ನಿಂಬೆ ಹಣ್ಣುಗಳಿಗೆ 700-800 ರೂ. ವರೆಗೆ ದರ ಇದೆ. ಗಾತ್ರ ಸಹ ಚಿಕ್ಕದಾಗಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ಸರಿಯಾಗಿ ಮಳೆ ಬಾರದೆ ಬರ ಸ್ಥಿತಿಯಲ್ಲಿಮಾರುಕಟ್ಟೆಯಲ್ಲಿನಿಂಬೆ ಹಣ್ಣಿನ ಪೂರೈಕೆ ಕಡಿಮೆಯಾಗಿದೆ. ಬೇಡಿಕೆ ಮಾತ್ರ ಗಣನೀಯ ಪ್ರಮಾಣದಲ್ಲಿಏರಿಕೆಯಾಗಿದೆ. ಮಳೆ ಕೊರತೆಯಿಂದ ನಿಂಬೆ ತೋಟಗಳಲ್ಲಿನಿರೀಕ್ಷಿತ ಪ್ರಮಾಣದಲ್ಲಿಇಳುವರಿ ಬಂದಿಲ್ಲ. ಪರಿಣಾಮ ಮಾರುಕಟ್ಟೆಗೆ ಬರುತ್ತಿರುವ ಪ್ರಮಾಣದಲ್ಲಿಗಣನೀಯ ಇಳಿಕೆಯಾಗಿದೆ. ಇದೇ ಕಾರಣಕ್ಕೆ ಚಿಲ್ಲರೆ ಮಾರುಕಟ್ಟೆಯಲ್ಲಿನಿಂಬೆಹಣ್ಣಿನ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.

ಅಡುಗೆ ಮನೆಯಿಂದ ಹಿಡಿದು ಪಾನೀಯಗಳಿಗೆ ಅಗತ್ಯವಾಗಿ ಬೇಕಾದ ನಿಂಬೆ ದರ ಹೆಚ್ಚಳದಿಂದ ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ವಿಜಯಪುರದಿಂದ ಮಾರುಕಟ್ಟೆಗೆ ಬರುತ್ತಿರುವ ಬಹುತೇಕ ನಿಂಬೆ ಹಣ್ಣುಗಳು ಗಾತ್ರದಲ್ಲಿಚಿಕ್ಕದಾಗಿದ್ದು, ಹಚ್ಚ ಹಸಿರಿನ ಕಾಯಿಗಳೇ ಹೆಚ್ಚಾಗಿ ಕಂಡುಬರುತ್ತಿವೆ. ಗುಣಮಟ್ಟದ ಹಾಗೂ ದೊಡ್ಡಗಾತ್ರದ ನಿಂಬೆ ಹಣ್ಣುಗಳ ಲಭ್ಯತೆ ಕಡಿಮೆಯಾಗಿದೆ. ಹೀಗಾಗಿ ಚಿಕ್ಕ ಗಾತ್ರದ ನಿಂಬೆ ಹಣ್ಣುಗಳಿಗೂ ಬೇಡಿಕೆ ಹೆಚ್ಚಾಗಿದೆ.

ಗಜೇಂದ್ರಗಡ ನಗರ ಸುತ್ತಲಿನ ಸಂತೆ ಮಾರುಕಟ್ಟೆಗಳಲ್ಲಿನಿಂಬೆ ಹಣ್ಣಿಗೆ ಭಾರೀ ಬೇಡಿಕೆ ಕಂಡುಬರುತ್ತಿದೆ. ಬೇಸಿಗೆ ಅಥವಾ ಮದುವೆ ಸಮಾರಂಭಗಳ ಸಂದರ್ಭದಲ್ಲಿಮಾತ್ರವಲ್ಲದೆ, ಸಾಮಾನ್ಯ ದಿನಗಳಲ್ಲಿಯೂ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳಿಂದ ಬೇಡಿಕೆ ಇರುವುದರಿಂದ ಪೂರೈಕೆ ಕಡಿಕೆಯಾಗಿ ಬೆಲೆ ಹೆಚ್ಚಾಗಲಿದೆ.

ಒಂದು ನಿಂಬೆ, ಹತ್ತು ತುಂಡು: ಬೆಲೆ ಏರಿಕೆಯಿಂದಾಗಿ ಕೆಲ ಹೋಟೆಲ್ ಗಳಲ್ಲಿಗ್ರಾಹಕರಿಗೆ ನೀಡುವ ನಿಂಬೆ ಹಣ್ಣಿನ ಪ್ರಮಾಣವನ್ನೇ ಕಡಿಮೆ ಮಾಡಲಾಗುತ್ತಿದೆ. ಒಂದು ನಿಂಬೆ ಹಣ್ಣನ್ನು ಹತ್ತು ತುಂಡುಗಳಾಗಿ ಕತ್ತರಿಸಿ ಗ್ರಾಹಕರಿಗೆ ನೀಡುತ್ತಿರುವುದು ಕಂಡುಬರುತ್ತಿದೆ. ಹೆಸರಿಗೆ ನಿಂಬೆ ಹಣ್ಣು ನೀಡಿದಂತಾದರೂ, ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೂ ತಟ್ಟುತ್ತಿದೆ. ಪೂರೈಕೆ ಕೊರತೆ ನೇರವಾಗಿ ಬೆಲೆಯ ಮೇಲೆ ಪರಿಣಾಮ ಬೀರಿದೆ.

ಕೋಟ್

ಸರಿಯಾಗಿ ಮಳೆಯಾಗದೆ ತೋಟಗಳಲ್ಲಿಇಳುವರಿ ಕುಸಿದಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಮುಂದಿನ ದಿನಗಳಲ್ಲಿಮಳೆ ಪ್ರಮಾಣ ಹಾಗೂ ಹೊಸ ಇಳುವರಿ ಮಾರುಕಟ್ಟೆಗೆ ಬರುವುದನ್ನು ಅವಲಂಬಿಸಿ ಬೆಲೆಯಲ್ಲಿಇಳಿಕೆಯಾಗುವ ನಿರೀಕ್ಷೆ ಇದೆ.

-ಮಹಾಂತೇಶ ಮಡಿವಾಳರ, ತರಕಾರಿ ವ್ಯಾಪಾರಸ್ಥ.

ಫೋಟೊ: 10 ಜಿಜೆಡಿ 5:

ಗಜೇಂದ್ರಗಡ ತರಕಾರಿ ಮಾರುಕಟ್ಟೆಯಲ್ಲಿನಿಂಬೆಹಣ್ಣು ಮಾರಾಟ ಮಾಡುತ್ತಿರುವುದು.