ಕಿಕ್ಕರ್ : ವಿದ್ಯುತ್ ಲೈನ್ ಕಾಮಗಾರಿ ವೇಳೆ ಘಟನೆ | ಉಪಗುತ್ತಿಗೆದಾರ, ಸಿಬ್ಬಂದಿ ವಿರುದ್ಧ ಪ್ರಕರಣ
--- ಕೆಇಬಿ ಕಾಮಗಾರಿ ವೇಳೆ ಅನುಮತಿಯಿಲ್ಲದೆ ಸ್ಫೋಟ
ಜಗಳೂರು: ಸರಕಾರದಿಂದ ಪರವಾನಗಿ ಪಡೆಯದೆ ಹಾಗೂ ಜಮೀನು ಮಾಲೀಕರ ಅನುಮತಿ ಇಲ್ಲದೆ ಕಾಮಗಾರಿ ಹೆಸರಿನಲ್ಲಿಅನಧಿಕೃತವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಬಂಡೆ ಸ್ಫೋಟಿಸುತ್ತಿದ್ದ ಖಾಸಗಿ ಸಂಸ್ಥೆಯ ಸಬ್ ಕಂಟ್ರ್ಯಾಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಜಗಳೂರು ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ತಾಲೂಕಿನ ಬಂಗಾರಕ್ಕನಗುಡ್ಡ ಗ್ರಾಮದ ಸರ್ವೆ ನಂ.44ರ ಜಮೀನಿನಲ್ಲಿಕೆಇಬಿ ಲೈನ್ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿ, ನಿಯಮಗಳನ್ನು ಉಲ್ಲಂಘಿಘಿಸಿ ಸ್ಫೋಟಕಗಳನ್ನು ಬಳಸಿ ಅ.17 ಶನಿವಾರ ಸಂಜೆ 4.30ಕ್ಕೆ ಬೃಹತ್ ಕಲ್ಲುಬಂಡೆಗಳನ್ನು ಸ್ಫೋಟಿಸಿದೆ. ಇದರಿಂದ ಸ್ಥಳೀಯ ಕೃಷಿ ಭೂಮಿಗೆ ಹಾನಿಯಾಗಿರುವ ಜತೆಗೆ, ಸುತ್ತಮುತ್ತಲಿನ ಜನ ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಹೆಡ್ ಕಾನ್ ಸ್ಟೆಬಲ್ ಪಕ್ಷಣ್ಣ ಎಂಬುವವರಿಗೆ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ, ಅನಧಿಕೃತವಾಗಿ ಸ್ಫೋಟ ಮಾಡಿರುವುದು ಬೆಳಕಿಗೆ ಬಂದಿದೆ.
ಕೃತ್ಯದಲ್ಲಿಭಾಗಿಯಾದ ಉಪಗುತ್ತಿಗೆದಾರ ಆಂಧ್ರಪ್ರದೇಶದ ಧರ್ಮಾವರಂ ತಾಲೂಕಿನ ಗೋಗುಲ ಲಿಂಗಮಯ್ಯ, ವೆಂಕಟೇಶ, ರಾಜು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳ ಕೃತ್ಯದ ಗಂಭೀರತೆಯನ್ನು ಪರಿಗಣಿಸಿ ಜಗಳೂರು ಪೊಲೀಸ್ ಠಾಣೆಯಲ್ಲಿಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
--
18ಜೆಎಎಲ್ ಆರ್ ಚಿತ್ರ2ಎ:
ಜಗಳೂರು ತಾಲೂಕಿನ ಬಂಗಾರಕ್ಕನಗುಡ್ಡದ ಸಮೀಪ ಸ್ಫೋಟಕ್ಕಾಗಿ ರಂಧ್ರ ಕೊರೆಯುತ್ತಿರುವ ಸಿಬ್ಬಂದಿ.