ತುಮಕೂರು: ಸರಕಾರದ ಅಧಿಸೂಚನೆಯನ್ವಯ ಬೆಂಗಳೂರು ಶಿಕ್ಷಕರ ಕ್ಷೇತ್ರ ಮತ್ತು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯಲಿರುವ ದ್ವೆತ್ರೖವಾರ್ಷಿಕ ಚುನಾವಣೆ-2026ಕ್ಕೆ ಸಂಬಂಧಿಸಿದಂತೆ ಅ.23ರಂದು ನಡೆಯುವ ಮತದಾನದಲ್ಲಿಆಯಾ ಮತಕ್ಷೇತ್ರಗಳಲ್ಲಿನ ಅರ್ಹ ಪದವೀಧರ, ಶಿಕ್ಷಕ ಮತದಾರರಿಗೆ ಮಾತ್ರ ಮತ ಚಲಾಯಿಸಲು ಅನುವಾಗುವಂತೆ ಒಂದು ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ. ಅಂದು ಶುಕ್ರವಾರದಂದು ಮತದಾರರು ರಜೆ ಮಂಜೂರು ಮಾಡಲು ಅಧಿಕಾರವುಳ್ಳ ಪ್ರಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯುವ ಷರತ್ತಿಗೊಳಪಟ್ಟು ಒಂದು ದಿನ ವಿಶೇಷ ಸಾಂದರ್ಭಿಕ ರಜೆ ಮಂಜೂರು ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.