ಜನರ ನಂಬಿಕೆಯಿಂದಲೇ ನಾಯಕನಾದ ಲಿಂಬಿಕಾಯಿವಿಕ ವಿಶೇಷ ಹುಬ್ಬಳ್ಳಿ
ಕೆಲವರು ಅಧಿಕಾರಕ್ಕಾಗಿ ಸಾರ್ವಜನಿಕ ಜೀವನಕ್ಕೆ ಬರುತ್ತಾರೆ. ಇನ್ನೂ ಕೆಲವರು ಜೀವನವಿಡೀ ಜನರಿಗಾಗಿ ದುಡಿದ ನಂತರ, ಸಾರ್ವಜನಿಕ ಜೀವನವೇ ಅವರ ಕರ್ತವ್ಯವಾಗುತ್ತದೆ. ಧಾರವಾಡ ಜಿಲ್ಲೆಯ ಪಶ್ಚಿಮ ಪದವೀಧರ ಕ್ಷೇತ್ರದ ಈ ಬಾರಿಯ ಚುನಾವಣೆಯಲ್ಲಿಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಮೋಹನ ಎ.ಲಿಂಬಿಕಾಯಿ ಅವರು ಎರಡನೇ ಸಾಲಿನಲ್ಲಿನಿಲ್ಲುತ್ತಾರೆ.
1959ರ ಮಾರ್ಚ್ 23. ಧಾರವಾಡ ಜಿಲ್ಲೆಯ ಮಣಕವಾಡ ಗ್ರಾಮದ ಒಂದು ಸಣ್ಣ ಮನೆ. ಆ ಮನೆಯಲ್ಲಿರಾಜಕೀಯ ಹಿನ್ನೆಲೆ, ಅಧಿಕಾರದ ಪ್ರಭಾವವಿರಲಿಲ್ಲ. ಪ್ರಾಮಾಣಿಕತೆ, ಶಿಸ್ತು ಮತ್ತು ಕಠಿಣ ಪರಿಶ್ರಮವೇ ಅವರಲ್ಲಿದ್ದ ಆಸ್ತಿ. ತಂದೆ ಆಡಿವೆಪ್ಪ ಲಿಂಬಿಕಾಯಿ ಪ್ರಾಥಮಿಕ ಶಾಲೆಯ ಶಿಕ್ಷಕರು ಮತ್ತು ಕೃಷಿಕರು. ಹಗಲಿನಲ್ಲಿಮಕ್ಕಳಿಗೆ ಅಕ್ಷರದ ಬೆಳಕು ನೀಡುತ್ತಿದ್ದ ಅವರು, ಸಂಜೆ ಹೊಲದಲ್ಲಿಬೆವರು ಸುರಿಸುತ್ತಿದ್ದರು. ತಾಯಿ ಬಸವಣೆವ್ವ ಮನೆಯಲ್ಲಿಗೃಹಣಿ. ಅವರಿಬ್ಬರ ಮೌಲ್ಯಗಳೇ ಮೋಹನ ಲಿಂಬಿಕಾಯಿ ಅವರ ಬದುಕಿನ ಭದ್ರ ಬುನಾದಿಗೆ ಅಡಿಪಾಯವಾಯಿತು. ಇಂದಿಗೂ ಅವರ ಪ್ರತಿಯೊಂದು ನಿರ್ಧಾರದ ಹಿಂದೆಯೂ ತಂದೆ,ತಾಯಿ ಬಿತ್ತಿದ ಸಂಸ್ಕಾರ ಎದ್ದು ಕಾಣುತ್ತದೆ.
ಶಿಕ್ಷಕರ ಮಗನಾಗಿ ಅವರು ಕಲಿತ ಮೊದಲ ಪಾಠವೇ ಸಮಾನತೆ. ತಂದೆಯವರು ಶಾಲೆಯಲ್ಲಿಬಡವ-ಶ್ರೀಮಂತ, ಜಾತಿ-ಧರ್ಮ ನೋಡದೆ ಎಲ್ಲಮಕ್ಕಳನ್ನು ಸಮಾನವಾಗಿ ಕಾಣುತ್ತಿದ್ದರು. ಶಿಕ್ಷಣ ಎಲ್ಲರ ಹಕ್ಕು ಎಂಬ ನಂಬಿಕೆ ಇಟ್ಟುಕೊಂಡಿದ್ದರು. ಆ ಚಿಂತನೆ ಬಾಲ್ಯದಲ್ಲೇ ಮೋಹನ ಅವರಲ್ಲಿಬೇರೂರಿತು. ರಾಜಕೀಯಕ್ಕಿಂತ ಬಹಳ ಹಿಂದೆಯೇ ಜನರೊಂದಿಗೆ ಬೆರೆಯುವುದು, ಅವರ ಸಮಸ್ಯೆ ಆಲಿಸುವುದು ಅವರ ಬದುಕಿನ ಭಾಗವಾಗಿತ್ತು.
ಆಣ್ಣಿಗೇರಿಯ ಅಮೃತೇಶ್ವರ ಕಾಲೇಜಿನಲ್ಲಿಶಾಲಾ ಶಿಕ್ಷಣ, ಕಡಸಿದ್ದೇಶ್ವರ ಕಾಲೇಜಿನಲ್ಲಿಪಿಯುಸಿ, ಕರ್ನಾಟಕ ಕಾಲೇಜು ಧಾರವಾಡದಲ್ಲಿಪದವಿ, ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿಎಂ.ಎ. ಪದವಿ. ಆದರೆ ಅನ್ಯಾಯಕ್ಕೊಳಗಾದವರ ಪರ ನಿಲ್ಲುವುದು ಹೇಗೆ ಎಂಬ ಪ್ರಶ್ನೆಯೇ ಅವರನ್ನು ಹುಬ್ಬಳ್ಳಿಯ ಜೆಎಸ್ ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದತ್ತ ಹೆಜ್ಜೆ ಹಾಕುವಂತೆ ಮಾಡಿತು. ಅಲ್ಲಿಕಾನೂನು ಪದವಿ ಪಡೆದು ನ್ಯಾಯದ ಹಾದಿಯಲ್ಲಿಮುನ್ನಡೆದರು.
ವಕೀಲ, ಪ್ರಾಧ್ಯಾಪಕ, ನಾಯಕ
1986ರಲ್ಲಿವಕೀಲರಾಗಿ ವೃತ್ತಿ ಆರಂಭಿಸಿದ ಲಿಂಬಿಕಾಯಿ ಅವರಿಗೆ ನ್ಯಾಯಾಲಯ ಕಾರ್ಯಕ್ಷೇತ್ರವಾದರೆ, ನ್ಯಾಯವೇ ಧ್ಯೇಯವಾಯಿತು. ಕಾನೂನು ಪುಸ್ತಕದಲ್ಲಿಉಳಿಯಬಾರದು, ಸಾಮಾನ್ಯನ ಬದುಕಲ್ಲಿನ್ಯಾಯವಾಗಿ ಕಾಣಿಸಬೇಕು ಎಂಬುದು ಅವರ ವಕೀಲ ವೃತ್ತಿಗೆ ಅರ್ಥ ನೀಡಿತು. ತಂದೆಯಿಂದ ಬಂದ ಸಂಸ್ಕಾರ ಅವರನ್ನು ಮತ್ತೆ ಶಿಕ್ಷಣದತ್ತ ಸೆಳೆಯಿತು. ವಕೀಲ ವೃತ್ತಿಯ ಜೊತೆಗೆ ಸುಮಾರು 16 ವರ್ಷ ಜೆಎಸ್ ಎಸ್ ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿಗೌರವ ಪ್ರಾಧ್ಯಾಪಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ನಾಯಕತ್ವ ಹುದ್ದೆಯಿಂದ ಬರುವುದಲ್ಲ, ಅದು ಜನರ ನಂಬಿಕೆಯಿಂದ ಜನ್ಮತಾಳುತ್ತದೆ ಎಂಬುದಕ್ಕೆ ಅವರ ಜೀವನವೇ ಸಾಕ್ಷಿ. ಕರ್ನಾಟಕ ವಿಶ್ವವಿದ್ಯಾಲಯದ ಸೆನೆಟ್ ಮತ್ತು ಸಿಂಡಿಕೇಟ್ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾದರು. ಅಲ್ಲಿಶಿಕ್ಷಣದ ಗುಣಮಟ್ಟ, ವಿದ್ಯಾರ್ಥಿಗಳ ಭವಿಷ್ಯದ ಕುರಿತು ನಿರಂತರ ಕಾರ್ಯನಿರ್ವಹಿಸಿದರು. ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕಾನೂನು ಶಿಕ್ಷಣಕ್ಕೆ ಕೊಡುಗೆ ನೀಡಿದರು. ವಕೀಲ ಸಮುದಾಯ ಅವರ ಪ್ರಾಮಾಣಿಕತೆಯನ್ನು ಗುರುತಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾಗಿ, ನಂತರ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿತು.
ಪದವೀಧರರ ಧ್ವನಿಯಾಗಿ ವಿಧಾನ ಪರಿಷತ್ತಿಗೆ
ಶಿಕ್ಷಣ, ಕಾನೂನು ಮತ್ತು ಸಮಾಜ ಸೇವೆಯಲ್ಲಿಅವರ ಸಾಧನೆಗೆ ಪದವೀಧರ ಸಮುದಾಯ 2008ರಲ್ಲಿಮಾನ್ಯತೆ ನೀಡಿತು. ಪಶ್ಚಿಮ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಅವರನ್ನು ಆಯ್ಕೆ ಮಾಡಿತು. ಇದು ಕೇವಲ ಗೆಲುವಾಗಿರಲಿಲ್ಲ, ಸಾವಿರಾರು ಪದವೀಧರರು ವ್ಯಕ್ತಪಡಿಸಿದ ವಿಶ್ವಾಸವಾಗಿತ್ತು. ವಿಧಾನ ಪರಿಷತ್ತಿನಲ್ಲಿಅವರು ಮಾತನಾಡಿದಾಗ ಅದು ಒಬ್ಬ ವ್ಯಕ್ತಿಯ ಧ್ವನಿಯಾಗಿರಲಿಲ್ಲ, ಶಿಕ್ಷಕರ, ವಿದ್ಯಾರ್ಥಿಗಳ, ವಕೀಲರ, ಸರಕಾರಿ ನೌಕರರ, ಪದವೀಧರರ ಆಶಯಗಳ ಧ್ವನಿಯಾಗಿತ್ತು ಎಂಬುದನ್ನು ಇಂದಿಗೂ ಅವರ ಆಪ್ತರು ನೆನಪಿಸಿಕೊಳ್ಳುತ್ತಾರೆ. ಅವರ ಅತ್ಯಂತ ಮಹತ್ವದ ಕೊಡುಗೆ ಎಂದರೆ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದ 60 ಸಾವಿರಕ್ಕೂ ಹೆಚ್ಚು ದಿನಗೂಲಿ ನೌಕರರ ಸೇವೆ ಕಾಯಂ ಆಗುವ ಹೋರಾಟದಲ್ಲಿವಹಿಸಿದ ಪಾತ್ರ. ಅದು ಕೇವಲ ಆಡಳಿತಾತ್ಮಕ ಆದೇಶವಾಗಿರಲಿಲ್ಲ, ಸಾವಿರಾರು ಕುಟುಂಬಗಳಿಗೆ ಭದ್ರತೆ ಹಾಗೂ ಭರವಸೆಯ ಬೆಳಕಾಗಿತ್ತು.
ಸಂಸ್ಥೆಗಳನ್ನು ಕಟ್ಟಿದ ದೂರದೃಷ್ಟಿ ನಾಯಕ
ಎಷ್ಟು ಹುದ್ದೆ ಅಲಂಕರಿಸಿದರು ಎಂಬುದಕ್ಕಿಂತ ಸಮಾಜಕ್ಕೆ ಎಷ್ಟು ಶಾಶ್ವತ ಕೊಡುಗೆ ನೀಡಿದರು ಎಂಬುದೇ ಮುಖ್ಯ ಎಂದು ನಂಬಿದ ಲಿಂಬಿಕಾಯಿ ಅವರು ಹುಬ್ಬಳ್ಳಿಯಲ್ಲಿಸಂಜೀವಿನಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪಿಸಿದರು. ಶಿಕ್ಷಣವೂ ಬೇಕು, ಆರೋಗ್ಯವೂ ಬೇಕು, ಎರಡೂ ಸಮಾಜದ ಹಕ್ಕುಗಳು ಎಂಬ ನಂಬಿಕೆಯಿಂದ ಈ ಸಂಸ್ಥೆ ಹುಟ್ಟಿಕೊಂಡಿತು.
40 ವರ್ಷಗಳ ಸಾರ್ವಜನಿಕ ಜೀವನದಲ್ಲಿಅವರು ವಕೀಲರಾಗಿ, ಶಿಕ್ಷಕರಾಗಿ, ಶೈಕ್ಷಣಿಕ ಆಡಳಿತಗಾರರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಕೀಲರ ಪರಿಷತ್ತಿನ ಉಪಾಧ್ಯಕ್ಷರಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ, ಸಾಮಾಜಿಕ ಸಂಘಟಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಎಲ್ಲದರ ನಡುವೆ ಬದಲಾಗದ್ದು ಅವರ ಸರಳತೆ ಮತ್ತು ಜನಸ್ನೇಹ. ಹೊಸ ಜವಾಬ್ದಾರಿಯಲ್ಲಿಹಿರಿಯ ನಾಯಕದಶಕಗಳ ಸೇವೆಗೆ ಗೌರವವಾಗಿ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದು ಕೇವಲ ಹುದ್ದೆಯಲ್ಲ, ಅವರ ಅನುಭವ, ನಿಷ್ಠೆಗೆ ಸಿಕ್ಕ ಗೌರವವಾಗಿದೆ.
ತಮ್ಮ 66ನೇ ವಯಸ್ಸಿನಲ್ಲಿಬತ್ತದ ಉತ್ಸಾದಿಂದ ಮತ್ತೊಮ್ಮೆ ಜನರ ಮುಂದೆ ನಿಂತಿದ್ದಾರೆ. ಮತ ಕೇಳಲು ಮಾತ್ರವಲ್ಲ, ನಂಬಿಕೆ ಕೇಳಲು. ಈ ಪಯಣದ ಕೇಂದ್ರಬಿಂದುವಿನಲ್ಲಿಅಧಿಕಾರವಿರಲಿಲ್ಲ, ಜನರೇ ಇದ್ದರು. ಇದು ಮತ್ತೊಂದು ಚುನಾವಣೆಗೆ ಸ್ಪರ್ಧಿಸುತ್ತಿರುವ ಮೋಹನ ಲಿಂಬಿಕಾಯಿ ಅವರು, ಒಬ್ಬ ಶಿಕ್ಷಕರ ಮಗನಾಗಿ ಜನಸೇವೆ ಆರಂಭಿಸಿದ 4 ದಶಕಗಳ ಪಯಣದಲ್ಲಿನಿಮ್ಮ ಸಮಸ್ಯೆ - ನನ್ನ ಸಮಸ್ಯೆ, ನಿಮ್ಮ ಧ್ವನಿ - ನನ್ನ ಧ್ವನಿ, ನಿಮ್ಮ ಭವಿಷ್ಯ - ನನ್ನ ಆದ್ಯತೆ, ತಮ್ಮ ಸೇವೆಯೇ ನನ್ನ ಸಂಕಲ್ಪ ಎಂಬ ಹೆಗ್ಗುರಿಯೊಂದಿಗೆ ಮುಂದುವರಿಲು ನಿರ್ಧರಿಸಿದ್ದಾರೆ.
ಪ್ರಮುಖ ಆದ್ಯತೆಗಳು
ಸರಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿಖಾಲಿ ಇರುವ ಶಿಕ್ಷಕ ಮತ್ತು ಶಿಕ್ಷಕೇತರ ಹುದ್ದೆಗಳನ್ನು ಅರ್ಹತೆಯ ಮೇರೆಗೆ ನೇಮಕಾತಿ ಮಾಡಿಸುವುದು
ಶಿಕ್ಷಕರ ಮೇಲೆ ಮಕ್ಕಳ ಬಿನ್ನಾಭಿಪ್ರಾಯ ಮತ್ತು ಕ್ಷೀಣಿಸುತ್ತಿರುವ ಚಟುವಟಿಕೆಗಳಿಗೆ ಹೊರತಾದ ಅನಗತ್ಯ ಕೆಲಸದ ಹೊರೆಯನ್ನು ಕಡಿಮೆ ಮಾಡಲು ಧ್ವನಿ ಎತ್ತುವುದು
ಸರಕಾರಿ ಅನುದಾನಿತ ಹಾಗೂ ಅನುದಾನಿತ ಶಾಲಾ ಕಟ್ಟಡಗಳ ದುರಸ್ತಿ, ಕಾಂಪೌಂಡ್ , ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವುದು
ಸರ್ಕಾರಿ ಹಾಗೂ ಅನುದಾನಿತ ಕಾಲೇಜು ಕಟ್ಟಡಗಳ ದುರಸ್ತಿ, ಕಾಂಪೌಂಡ್ , ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು
ಅನುದಾನರಹಿತ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸುವುದು. ಇಲ್ಲಿಸೇವೆ ಸಲ್ಲಿಸುವ ಶಿಕ್ಷಕರಿಗೆ ಆಡಳಿತ ಮಂಡಳಿಯಿಂದ ನ್ಯಾಯಯುತ ಕನಿಷ್ಠ ವೇತನ ದೊರಕಿಸುವುದು
ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿಸೇವೆ ಸಲ್ಲಿಸುವ ಶಿಕ್ಷಕರಿಗೆ ಆಡಳಿತ ಮಂಡಳಿಯಿಂದ ನ್ಯಾಯಯುತ ಕನಿಷ್ಠ ವೇತನ ದೊರಕುವಂತೆ ಹಾಗೂ ಸರಕಾರದ ಮೇಲೆ ಒತ್ತಡ ಹೇರುವುದು
ನಿರುದ್ಯೋಗಿ ಪದವೀಧರರಿಗೆ ಉದ್ಯೋಗ, ಕೌಶಲ್ಯ ತರಬೇತಿ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸುವುದು
ಶಿಕ್ಷಕರು ಸೇರಿದಂತೆ ಸರಕಾರಿ ಹಾಗೂ ಅರೆ ಸರಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಸ್ ) ಮರುಜಾರಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುವುದು
ನಮ್ಮ ಬಾಲ್ಯ ಜಿಲ್ಲೆಗಳಲ್ಲಿಹೊಸ ಕೈಗಾರಿಕೆ ಹಾಗೂ ಉದ್ಯಮಗಳನ್ನು ಉತ್ತೇಜಿಸಿ ಯುವ ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದು.