ವಿಶ್ವದಲ್ಲೇ ಏಕತೆ ಹೊಂದಿದ ದೇಶ ಭಾರತ ವಿಕ ಸುದ್ದಿಲೋಕ ಹೊರ್ತಿ
‘‘ವಿವಿಧತೆಯಲ್ಲಿಏಕತೆಯನ್ನು ಹೊಂದಿರುವ ಭಾರತ ಜಗತ್ತಿನಲ್ಲೇ ಆಧ್ಯಾತ್ಮಿಕ -ಧಾರ್ಮಿಕ ಹಾಗೂ ಸಂಸ್ಕಾರ, ಸಂಸ್ಕೃತಿಯ ಆಚರಣೆಯಲ್ಲಿಶ್ರೇಷ್ಠತೆ ಹೊಂದಿದೆ,’’ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಗ್ರಾಮದ ಹೊರಪೇಟೆ ಓಣಿಯ ಆದಿಶಕ್ತಿ ದೇವಸ್ಥಾನದಲ್ಲಿಆದಿಶಕ್ತಿ ಮಹಾ ಮಂಡಳಿಯ 41ನೇ ವರ್ಷದ ದಸರಾ ಉತ್ಸವ ನಿಮಿತ್ತ ದೇವಿಗೆ ಉಡಿ ತುಂಬುವ ಮತ್ತು ಗೋಂದಳಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘‘ಭಕ್ತಿ ಮತ್ತು ಶ್ರದ್ಧೆಯೊಂದಿಗೆ ಆಚರಿಸುವ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿಸೌಹಾರ್ದ ಹಾಗೂ ಭಾವೈಕ್ಯ ಬಿಂಬಿಸಲಿವೆ,’’ ಎಂದರು.
ಹೊರ್ತಿ ರೇವಣಸಿದ್ದೇಶ್ವರ ದೇವಸ್ಥಾನ ಸಂಸ್ಥೆ ಅಧ್ಯಕ್ಷ ಮತ್ತು ಧರ್ಮದರ್ಶಿ ಅಣ್ಣಪ್ಪ ಖೈನೂರ ಮಾತನಾಡಿ, ‘‘ಭಾರತ ಸನಾತನ ಧರ್ಮದ ಪರಂಪರೆಯ ಮಹತ್ವ ಹೊಂದಿದ ದೇಶವಾಗಿದೆ. ವಿಶ್ವದಲ್ಲೇ ವಿಶಿಷ್ಟ ಸಂಪ್ರದಾಯ, ಪರಂಪರೆ, ಸಂಸ್ಕಾರ ಕಾಣಬಹುದಾಗಿದೆ,’’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಕನ್ನೂರ ಗುರು ಮಠದ ಸೋಮನಾಥ ಶಿವಾಚಾರ್ಯರು, ‘‘ಆದಿಶಕ್ತಿ ಜಗನ್ಮಾತೆಯು ಮಳೆ ಬೆಳೆ, ಸಮೃದ್ಧಿ ಕರುಣಿಸಲಿ,’’ ಎಂದರು.