ಕಾರಡ್ಕ ಕೃಷಿ ಭವನದ ನೇತೃತ್ವದಲ್ಲಿಕೃಷಿಕರ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿಕಾರಡ್ಕ ಪಂ. ವ್ಯಾಪ್ತಿಯ ಅತ್ಯುತ್ತಮ ವಿದ್ಯಾರ್ಥಿ ಕೃಷಿಕನಾಗಿ ಆಯ್ಕೆಯಾದ ಶಿವಪ್ರಸಾದ್ ನನ್ನು ಕಾರಡ್ಕ ಬ್ಲಾಕ್ ಪಂ. ಅಧ್ಯಕ್ಷ ಸಿ.ಬಾಲನ್ ಸನ್ಮಾನಿಸಿದರು. ಕಾರಡ್ಕ ಗ್ರಾಮ ಪಂ. ಅಧ್ಯಕ್ಷೆ ಜನನಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಸಹ ನಿರ್ದೇಶಕ ಹೆನ.ಕೆ.ಕೆ, ಕೃಷಿ ಅಧಿಕಾರಿ ಬಿಂದು ಬ್ಲಾಕ್ ಪಂ. ಉಪಾಧ್ಯಕ್ಷೆ ಉಷಾ.ಪಿ, ಕೃಷಿ ಸಹ ನಿರ್ದೇಶಕ ಅನಿಲ್ ಕುಮಾರ್ .ಯು.ಎನ್ , ಜಿಲ್ಲಾಪಂ. ಸದಸ್ಯರಾದ ವತ್ಸಲ, ಗ್ರಾಮ ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತ ಕುಮಾರಿ, ಬಾಲಕೃಷ್ಣ, ವಸಂತಿ, ವಿಜಯ ಕುಮಾರ್ , ಕೃಷಿ ಅಭಿವೃದ್ಧಿ ಸಮಿತಿ ಪ್ರತಿನಿ ಶ್ರೀಧರನ್ ನಾಯರ್ , ಪುರುಷೋತ್ತಮನ್ , ಇ.ಆರ್ .ಮುಹಮ್ಮದ್ ಕುಂಞಿ, ಕೆ.ಶಂಕರನ್ ಉಪಸ್ಥಿತರಿದ್ದರು.ಚಿತ್ರ..27ಎಂಯುಸನ್ಮಾನ