ದೇವದುರ್ಗ- ‘ಕಚೇರಿ ಸ್ಥಳಾಂತರ ಕೈಬಿಡಿ’

Contributed bysureshgowdajhl@gmail.com|Vijaya Karnataka
opposition to office relocation in devanagari government complicating farmers perspectives
‘ ಕಚೇರಿ ಸ್ಥಳಾಂತರ ಕೈಬಿಡಿ’

ವಿಕ ಸುದ್ದಿಲೋಕ ದೇವದುರ್ಗ
ತಾಲೂಕಿನ ಚಿಕ್ಕಹೊನ್ನಕುಣಿ ಗ್ರಾಮದ ಕೃಷ್ಣಾಭಾಗ್ಯ ಜಲನಿಗಮದ ಡಿವಿಜನ್ -6 ಎಇಇ ಕಚೇರಿಯನ್ನು ರಾಯಚೂರಿಗೆ ಸ್ಥಳಾಂತರ ಮಾಡುವ ಸರಕಾರದ ನಿರ್ಧಾರ ಖಂಡಿಸಿ ಪಟ್ಟಣದಲ್ಲಿರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿನೂರಾರು ರೈತರು ಪ್ರತಿಭಟನೆ ನಡೆಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿಜಮಾವಣೆಗೊಂಡ ರೈತರು ಶಾಸಕರ ಕಚೇರಿವರೆಗೆ ಒಂದೂವರೆ ಕಿ.ಮೀ. ಪ್ರತಿಭಟನಾ ರಾರ ಯಲಿ ನಡೆಸಿ, ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘‘ಬಲದಂಡೆ ನಾಲೆಯ 14ರಿಂದ 16ರವರೆಗೆ ನಾಲೆ ದುರಸ್ತಿ, ನೀರಿನ ಗೇಜ್ ನಿರ್ವಹಣೆ, ಹೂಳು, ಜಂಗಲ್ ಕಟಿಂಗ್ ಸೇರಿ ನಾನಾ ಕೆಲಸಗಳನ್ನು ಡಿವಿಜನ್ -6 ಕಚೇರಿ ವಹಿಸಿಕೊಂಡಿದೆ. ಈಗ ಸರಕಾರ ಏಕಾಏಕಿ ಕಚೇರಿಯನ್ನು ರಾಯಚೂರುಗೆ ಸ್ಥಳಾಂತರ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದೆ. ಮೊದಲೇ ಮಳೆ, ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಈ ನಿರ್ಧಾರ ಗಾಯದ ಮೇಲೆ ಬರೆ ಎಳೆಯಲಿದೆ,’’ ಎಂದು ಆತಂಕ ವ್ಯಕ್ತಪಡಿಸಿದರು.

‘‘ಕೆಬಿಜೆಎನ್ ಎಲ್ ಡಿವಿಜನ್ -6 ಕಚೇರಿ ಸ್ಥಳಾಂತರ ನಿರ್ಧಾರ ಕೈಬಿಡಬೇಕು. ಕಚೇರಿಯನ್ನು ಚಿಕ್ಕಹೊನ್ನಕುಣಿ ಗ್ರಾಮದಲ್ಲೇ ಉಳಿಸಬೇಕು. ಮುಖ್ಯನಾಲೆ, ಉಪಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ನಿರ್ಲಕ್ಷತ್ರ್ಯ ಮಾಡಿದರೆ ಎಲ್ಲಹಳ್ಳಿಗಳ ರೈತರೊಂದಿಗೆ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಗುವುದು,’’ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಗೌರಂಪೇಟೆ, ಮುಖಂಡರಾದ ಹರ್ಷವರ್ಧನ್ ನಾಯಕ, ನಾಗರಾಜ ತೆಗ್ಗಿಹಾಳ, ರಮೇಶ ನಾಯಕ, ಬಸವರಾಜ ಹಿರೇಮಠ, ಇರ್ಫಾನ್ ಭೂವಾಜಿ, ಹನುಮನಗೌಡ ಚಡಕಲಗುಡ್ಡ, ಅಲ್ಲಾವುದ್ದೀನ್ , ನರಸಣ್ಣ ನಾಯಕ, ಭೈರಗೌಡ ಮಾಲಿ ಪಾಟೀಲ್ , ರಮೇಶ ನಾಯಕ, ಸೈಯದ್ ಸಾಬ್ , ಶರಣಬಸವ, ಬಸವರಾಜ ಚಿಂಚೋಡಿ, ಸಿದ್ದರಾಮೇಶ, ಬಸವ ನಾಯಕ, ಮಲ್ಲೇಶ ನಾಯಕ ಇತರರಿದ್ದರು.

---

17ಡಿವಿಡಿ3

ಕೆಬಿಜೆಎನ್ ಎಲ್ ಡಿವಿಜನ್ -6 ಕಚೇರಿ ಸ್ಥಳಾಂತರ ಮಾಡದಂತೆ ಸರಕಾರದ ಮೇಲೆ ಒತ್ತಡ ಹಾಕುವಂತೆ ಕೋರಿ ದೇವದುರ್ಗದಲ್ಲಿಶಾಸಕಿ ಕರೆಮ್ಮ ಜಿ.ನಾಯಕ ಅವರಿಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.