ಸಿಂಧನೂರು- ‘ಆರೋಗ್ಯಕರ ಜೀವನ ಶೈಲಿ ಮುಖ್ಯ’

Contributed bychandrubennur@gmail.com|Vijaya Karnataka
discussion on healthy lifestyle at national pledge event for drug free youth developed india
‘ ಆರೋಗ್ಯಕರ ಜೀವನ ಶೈಲಿ ಮುಖ್ಯ’

ಸಿಂಧನೂರು : ‘‘ವಿದ್ಯಾರ್ಥಿಗಳು ಮಾದಕ ವ್ಯಸನದಿಂದ ದೂರವಿದ್ದು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಬೇಕು. ತಮ್ಮ ಶಿಕ್ಷಣ, ಕೌಶಲ ಮತ್ತು ಭವಿಷ್ಯದ ಗುರಿಗಳತ್ತ ಗಮನಹರಿಸಬೇಕು,’’ ಎಂದು ನಗರ ಪೊಲೀಸ್ ಠಾಣೆ ಪಿಐ ವೀರಾರೆಡ್ಡಿ ಹೇಳಿದರು. ನಗರದ ಪಾಟೀಲ್ ಪದವಿ ಮಹಾವಿದ್ಯಾಲಯಲ್ಲಿ‘ ನಶಾಮುಕ್ತ ಯುವ - ವಿಕಸಿತ ಭಾರತ’ ಅಭಿಯಾನದ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಕಲ್ಪ ಸಮಾರಂಭ, ಯುವ ಪ್ರತಿಜ್ಞೆ ಹಾಗೂ ಸಹಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘‘ಯುವಕರೇ ದೇಶದ ಭವಿಷ್ಯ. ಸದೃಢ ಭಾರತ ನಿರ್ಮಾಣದಲ್ಲಿಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕು,’’ ಎಂದು ತಿಳಿಸಿದರು.
ಪಾಟೀಲ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಆರ್ .ಸಿ.ಪಾಟೀಲ್ ಮಾತನಾಡಿದರು. ವಿದ್ಯಾರ್ಥಿಗಳು ನಶಾಮುಕ್ತ ಭಾರತ ನಿರ್ಮಾಣಕ್ಕಾಗಿ ಯುವ ಪ್ರತಿಜ್ಞೆ ಸ್ವೀಕರಿಸಿ, ಸಹಿ ಅಭಿಯಾನ ನಡೆಸಿದರು. ವಿದ್ಯಾರ್ಥಿಗಳು ನಶಾ ಮುಕ್ತ ಯುವಜನತೆಯ ಬಗ್ಗೆ ಕಿರು ನಾಟಕ ಪ್ರದರ್ಶಿಸಿ ಗಮನ ಸೆಳೆದರು.

---

ಆರ್ ಸಿಎಚ್ 18ಎಸ್ ಎನ್ ಡಿ3:

ಸಿಂಧನೂರಿನ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ‘ನಶಾಮುಕ್ತ ಯುವ - ವಿಕಸಿತ ಭಾರತ’ ನಿಮಿತ್ತ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸಂಕಲ್ಪ ಸಮಾರಂಭ, ಯುವ ಪ್ರತಿಜ್ಞೆ ಹಾಗೂ ಸಹಿ ಅಭಿಯಾನ ಕಾರ್ಯಕ್ರಮವನ್ನು ಪಿಐ ವೀರಾರೆಡ್ಡಿ ಉದ್ಘಾಟಿಸಿದರು.