ವಿಕ ಸುದ್ದಿಲೋಕ ಸುರತ್ಕಲ್ ಇತ್ತೀಚಿಗಷ್ಟೇ ದೊಡ್ಡ ಗಾತ್ರದ ಕಲ್ಲೊಂದು ಕೆಳಗೆ ಬಿದ್ದು ಸುದ್ದಿಯಾಗಿದ್ದ ಸುರತ್ಕಲ್ ಫ್ಲೈಓವರ್ ಇದೀಗ ಮಳೆನೀರು ಹರಿದುಹೋಗಲು ಅಳವಡಿಸಲಾಗಿದ್ದ ಪೈಪ್ ಕೆಳಗೆ ಬಿದ್ದಿರುವುದರಿಂದ ಮತ್ತೆ ಸುದ್ದಿಯಾಗಿದೆ. ಈ ಘಟನೆ ಸುರತ್ಕಲ್ ಪೇಟೆಯ ಮಸೀದಿ ಬಳಿ ಮಂಗಳವಾರ ನಡೆದಿದೆ.
ಪೈಪ್ ಗೆ ಅಳವಡಿಸಲಾಗಿದ್ದ ಕ್ಲಾಂಪ್ ಕಿತ್ತುಹೋದದ್ದೇ ಇದಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಕಳೆದ ಜೂನ್ 2ರಂದು ಫ್ಲೈಓವರ್ ನ ಸಂಧಿಭಾಗದಿಂದ ತಲೆಯ ಮೇಲೆ ಬಿದ್ದರೆ ಅಪಾಯವಾಗಬಹುದಾದ ದೊಡ್ಡ ಗಾತ್ರದ ಕಲ್ಲೊಂದು ಕಾರು ಪಾರ್ಕಿಂಗ್ ಸ್ಥಳದ ಬಳಿ, ಬೇಕರಿಯೊಂದರ ಸಮೀಪ ಕೆಳಗೆ ಬಿದ್ದಿರುವುದು ಸುದ್ದಿಯಾಗಿತ್ತು.
ದುರಸ್ತಿ ನಡೆಯದ ಆರೋಪ: ಬಳಿಕವೂ ಸೂಕ್ತ ದುರಸ್ತಿ ನಡೆಸಿಲ್ಲ. ಫ್ಲೈಓವರ್ ನ ದಂಡೆಯ ಮೇಲೆ ಬೆಳೆದಿದ್ದ ಗೆಲ್ಲುಗಳನ್ನು ಕಡಿದುಬಿಡಲಾಗಿದೆ. ಒಟ್ಟಾರೆ ಫ್ಲೈಓವರ್ ಕಳಪೆಯಾಗಿ ನಿರ್ವಹಣೆಯ ಕೊರತೆಯಿಂದ ಬಳಲುತ್ತಿದೆ. ಅನೇಕ ಕಡೆಗಳಲ್ಲಿಪೈಪ್ ಗಳು ನೇತಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪೈಪ್
ಕ್ಯಾಪ್ಸನ್ : ಸುರತ್ಕಲ್ ಫ್ಲೈಓವರ್ ನಿಂದ ಕೆಳಗೆ ಬಿದ್ದ ನೀರು ಹರಿಯುವ ಪೈಪ್