ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್ ಬೇಸರ
ವಿಕ ಸುದ್ದಿಲೋಕ ಕೊಣನೂರುಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೊಂದಿಗೆ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿಭಾಗವಹಿಸಲು ಅವಕಾಶ ನೀಡಿರುವುದು ಸರಿಯಿಲ್ಲಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಹೋಬಳಿಯ ಸಿದ್ದಾಪುರ ಗೇಟ್ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿಕಬ್ಬಳಿಗೆರೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಾಗೂ ಕೊಣನೂರಿನ ಮೌಲಾನಾ ಆಜಾದ್ ಮಾದರಿ ಶಾಲೆ ಸಹಯೋಗದೊಂದಿಗೆ ನಡೆದ ಹೋಬಳಿ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
‘‘ಪ್ರಾಥಮಿಕ ಶಾಲೆಗಳ 5, 6 ಮತ್ತು 7ನೇ ತರಗತಿಗಳ ಮಕ್ಕಳಿಗೆ ಮಾತ್ರ ಅವಕಾಶ ಇದೆ. ಈ ವರ್ಷ 14 ವರ್ಷ ಒಳಪಟ್ಟ ಮಕ್ಕಳಿಗೆ ಅವಕಾಶ ನೀಡಿದ ಪರಿಣಾಮ ಪ್ರೌಢಶಾಲೆಯ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿಸ್ಪರ್ಧಿಸುವುದು ದೈಹಿಕವಾಗಿ ಕಷ್ಟವಿದೆ. ಈಗಿನ ನಿಯಮವು ಬದಲಾಗಬೇಕಿದೆ. ಮುಂದಿನ ದಿನಗಳಲ್ಲಿಹೀಗೆಯೇ ಅದರೆ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವನ್ನು ನಡೆಸಲು ಅವಕಾಶ ನೀಡುವುದಿಲ್ಲ,’’ಎಂದರು.
ಕೆಸವತ್ತೂರು ಮಠದ ಬಸವರಾಜೇಂದ್ರ ಸ್ವಾಮೀಜಿ ಕ್ರೀಡಾಧ್ವಜವನ್ನು ಅರಳಿಸಿದರು. ಕೊಣನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ನಾಗರಾಜು ಮತ್ತು ಜಿಲ್ಲಾಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ ್ಯದರ್ಶಿ ಟಿ.ಕೆ.ಮೋಹನ್ ಕುಮಾರ್ ಮಾತನಾಡಿದರು.
ಮರಿಯಾನಗರದ ದಿವ್ಯಜ್ಯೋತಿಯ ಶಾಲೆಯ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿಭಾಗವಹಿಸಿ ಬಾಲಕರ ವಿಭಾಗ 100 ಮೀಟರ್ (ಪ್ರ), (ದ್ವಿ), 200 ಮೀಟರ್ (ಪ್ರ), (ದ್ವಿ), 400 ಮೀಟರ್ (ಪ್ರ),(ದ್ವಿ), 4*100 ಮೀಟರ್ ರಿಲೇ (ಪ್ರ),(ದ್ವಿ), ಚಕ್ರ ಎಸೆತ (ಪ್ರ), ಗುಂಡು ಎಸೆತ (ಪ್ರ), ಉದ್ದ ಜಿಗಿತ (ಪ್ರ), ಗುಂಪು ಆಟಗಳಲ್ಲಿವಾಲಿಬಾಲ್ ಪ್ರಥಮ, ದ್ವಿತೀಯ, ಖೋ ಖೋ ಪ್ರಥಮ, ದ್ವಿತೀಯ, ಥ್ರೋ ಬಾಲ್ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಬಾಲಕಿಯರ ವಿಭಾಗ 100 ಮೀಟರ್ ತೃತೀಯ, 200 ಮೀಟರ್ (ಪ್ರ),(ದ್ವಿ), 400 ಮೀಟರ್ (ಪ್ರ),(ದ್ವಿ), 600 ಮೀಟರ್ (ಪ್ರ),(ದ್ವಿ), ಎತ್ತರ ಜಿಗಿತ (ಪ್ರ), ಗುಂಪು ಆಟಗಳಲ್ಲಿವಾಲಿಬಾಲ್ ಪ್ರಥಮ, ದ್ವಿತೀಯ, ಥ್ರೋಬಾಲ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ಬಾಲಕರ ಮತ್ತು ಬಾಲಕಿಯರ ಸಮಗ್ರ ಪ್ರಶಸ್ತಿಯನ್ನು ಪಡೆದು, ಶಾಲೆಯ ತನ್ಮಯ್ ಗೌಡ ಬಾಲಕರ ವಿಭಾಗದ ವೀರಾಗ್ರಣಿ ಮತ್ತು ಬಾಲಕಿಯ ವಿಭಾಗದ ವೀರಾಗ್ರಣಿ ಪ್ರಶಸ್ತಿಯನ್ನು ಅನುಪ್ರಿಯ ಪಡೆದುಕೊಂಡರು.
ಆಯೋಜಕ ಶಾಲೆಗಳ ಮುಖ್ಯ ಶಿಕ್ಷಕರಾದ ಗಣೇಶಪ್ಪ, ಹರೀಶ್ , ವಿಶ್ವನಾಥ್ , ಜಿಲ್ಲಾಮತ್ತು ತಾಲೂಕು ಶಿಕ್ಷಕರ ಸಂಘಗಳ ಪದಾಧಿಕಾರಿಗಳು, ತಾಲೂಕು ದೈಹಿಕ ಶಿಕ್ಷಕರ ಪರಿವೀಕ್ಷಕ ಬಸವರಾಜ, ಸಂಜೀವ್ ಕುಮಾರ್ , ವಿವಿಧ ಶಾಲೆಗಳ ಶಿಕ್ಷಕರು, ದೈಹಿಕ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.
ಏಖN28ಓN್ಕ7-8 ಧಿ ಕೊಣನೂರು ಹೋಬಳಿಮಟ್ಟದ ಕ್ರೀಡಾಕೂಟದಲ್ಲಿದಿವ್ಯಜ್ಯೋತಿಯ ಶಾಲೆಯ ವಿದ್ಯಾರ್ಥಿಗಳು ನಾನಾ ವಿಭಾಗದ ಜಯಗಳಿಸಿ ಸಮಗ್ರ ಪ್ರಶಸ್ತಿ ಪಡೆದು ಸಂಭ್ರಮಿಸಿದರು.