ಕೃತಕ ಬುದ್ಧಿಮತ್ತೆಯು ಮನುಷ್ಯನ ಜ್ಞಾನಕ್ಕೆ ಸವಾಲು

Contributed bynaveena.channappa@timesofindia.com|Vijaya Karnataka
artificial intelligence new challenges to human knowledge
ವಿಕ ಸುದ್ದಿಲೋಕ ಮಂಡ್ಯ

ದೊಡ್ಡ ಮಟ್ಟದಲ್ಲಿಕೃತಕ ಬುದ್ಧಿಮತ್ತೆ ಮೇಲುಗೈ ಸಾಧಿಸಿ ಮನುಷ್ಯನ ಜ್ಞಾನಕ್ಕೆ ಸವಾಲಾಗಿದೆ ಎಂದು ರಾಜ್ಯ ಸಂಪನ್ಮೂಲ ಕೇಂದ್ರದ ಮಾಜಿ ನಿರ್ದೇಶಕ ಹಾಗೂ ಸಾಹಿತಿ ಎಸ್ . ತುಕಾರಾಂ ತಿಳಿಸಿದರು.
ನಗರದ ಕರ್ನಾಟಕ ಸಂಘದ ಕೆವಿಎಸ್ ಸಭಾಂಗಣದಲ್ಲಿಜನದನಿ ಸಾಂಸ್ಕೃತಿಕ ಟ್ರಸ್ಟ್ , ಕರ್ನಾಟಕ ಸಂಘ ಹಾಗೂ ಇಂಡುವಾಳು ಎಚ್ .ಹೊನ್ನಪ್ಪ ಸೇವಾ ಟ್ರಸ್ಟ್ ಸಹಯೋಗದಲ್ಲಿನಡೆದ 29ನೇ ವರ್ಷದ ದೇವಮ್ಮ ಇಂಡುವಾಳು ಎಚ್ .ಹೊನ್ನಯ್ಯ, ಇಂಡುವಾಳು ಎಚ್ .ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ, 3ನೇ ವರ್ಷದ ಇಂಡುವಾಳು ಎಚ್ .ಹೊನ್ನಪ್ಪ ಕ್ರೀಡಾ ಪ್ರಶಸ್ತಿ, ಎಚ್ .ಶಾರದಮ್ಮ ಮತ್ತು ಕೆಂಪಯ್ಯ ವಿದ್ಯಾರ್ಥಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿಅವರು ಮಾತನಾಡಿದರು.

‘‘ಪ್ರಸ್ತುತ ದಿನಗಳಲ್ಲಿತಂತ್ರಜ್ಞಾನವು ಎಲ್ಲಕ್ಷೇತ್ರಗಳನ್ನು ಆವರಿಸಿಕೊಂಡಿದೆ. ಊಟ ಮಾಡಲು, ಪಾಠ ಹೇಳಿ ಕೊಡಲು, ನಡೆದಾಡಲು, ರಾಕೆಟ್ ಗಳೆಲ್ಲವೂ ಯಂತ್ರಗಳಾಗಿ ಕೆಲಸ ಮಾಡುವ ಮೂಲಕ ಒಂದೇ ದಿಕ್ಕಿನಲ್ಲಿಸಾಗುತ್ತಿವೆ. ತಂತ್ರಜ್ಞಾನ ಕ್ಷೇತ್ರವು ಮನುಷ್ಯನ ಜ್ಞಾನಕ್ಕೆ ಹೊಸ ಸವಾಲಾಗಿದೆ,’’ಎಂದು ಹೇಳಿದರು.

‘‘ಶಿಕ್ಷಣ, ಕಲೆ, ಸಂಗೀತ, ಕ್ರೀಡೆಗಳಿಗೆ ಒತ್ತು ನೀಡುವ ಮೂಲಕ ಬಹುಜ್ಞಾನಗಳ ಜೊತೆ ಚಲಿಸುವಂತಾಯಿತು. ಆದರೆ, ಅದಕ್ಕೆ ಮೂಲ ಶಿಕ್ಷಣವೇ ಊರುಗೋಲಾಗಿತ್ತು ಎನ್ನುವುದನ್ನು ಮರೆತು ಓಡುತ್ತಿದ್ದೇವೆ. ನಮಗೆ ಸ್ವಾತಂತ್ರ್ಯ ಸಿಕ್ಕ ಹೊಸ್ತಿಲಿನಲ್ಲಿಜಾತಿ, ಅಸ್ಪೃಶ್ಯತೆ, ಅಸಮಾನತೆ ಕಾರಣದಿಂದ ಬಹುಜನರು ಶಿಕ್ಷಣದಿಂದ ವಂಚಿತರಾಗಿದ್ದರು. ಇಂತಹವರನ್ನು ಮುಖ್ಯವಾಹಿನಿಗೆ ಕರೆತರದಿದ್ದರೆ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಸ್ವಾತಂತ್ರ್ಯ ಹೋರಾಟಗಾರರು ಅರ್ಥ ಮಾಡಿಕೊಂಡಿದ್ದರು,’’ ಎಂದರು.

‘‘ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ‘ಶಿಕ್ಷಣ, ಆರೋಗ್ಯ ಹಾಗೂ ಕ್ರೀಡೆ ಈ ಮೂರು ಕ್ಷೇತ್ರಗಳು ಮುಖ್ಯವಾಗಿವೆ. ಕರ್ನಾಟಕ ಸಂಘ, ನೆಲದನಿ ಸಂಸ್ಥೆ ನೀಡುತ್ತಿರುವ ಈ ಪ್ರಶಸ್ತಿಗಳು ಅಮೂಲ್ಯವಾಗಿವೆ,’’ ಎಂದರು.

ಸಮಾರಂಭದಲ್ಲಿನೆಲದನಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಅಧ್ಯಕ್ಷ ಕೆ.ಜಯರಾಂ, ಕಾರ ್ಯದರ್ಶಿ ಎಚ್ .ಡಿ.ಸೋಮಶೇಖರ್ , ಇಂಡುವಾಳು ಎಚ್ .ಹೊನ್ನಯ್ಯ ಅವರ ಪುತ್ರ ಎಚ್ .ಚಂದ್ರಶೇಖರ್ , ಡಾ.ಆದರ್ಶ, ಡಾ.ಆದಿತ್ಯ ಭಾಗವಹಿಸಿದ್ದರು.

ಕೋಟ್ .....

ದೇವಮ್ಮ ಇಂಡುವಾಳು ಎಚ್ .ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ಮಂಡ್ಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಆರ್ .ತಾರಾ, ಇಂಡುವಾಳು ಎಚ್ .ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿಯನ್ನು ರಾಜ್ಯ ಶಿಕ್ಷಣ ಮತ್ತು ಸಂಶೋಧನಾ ತರಬೇತಿ ನಿರ್ದೇಶನಾಲಯದ ನಿವೃತ್ತ ನಿರ್ದೆಶಕ ಬೆಂಗಳೂರು ಬೆಳ್ಳಶೆಟ್ಟಿ, ಇಂಡುವಾಳು ಎಚ್ .ಹೊನ್ನಪ್ಪ ಕ್ರೀಡಾ ಪ್ರಶಸ್ತಿಯನ್ನು ವಾಲಿಬಾಲ್ ಆಟಗಾರ ಮಂಡ್ಯ ಸೋಮಶೇಖರ್ (ವಾಲಿಬಾಲ್ ಸೋಮಣ್ಣ) ಅವರಿಗೆ ತಲಾ 25,000 ರೂ. ನಗದು ಸಹಿತ ಪ್ರದಾನ ಮಾಡಲಾಯಿತು

ಇಂಡುವಾಳು ಎಂ.ಆರ್ .ದೀಕ್ಷಿತಾ, ಚೈತ್ರಾ, ಬೇವಿನಹಳ್ಳಿ ಬಿ.ಎಂ. ಚಂದನ್ , ಬಿ.ಎನ್ . ಜ್ಯೋತಿ ಅವರಿಗೆ ತಲಾ 5 ಸಾವಿರ ರೂ. ನಗದು ಸಹಿತ 2025-26ನೇ ಸಾಲಿನ ಎಚ್ .ಶಾರದಮ್ಮ ಮತ್ತು ಕೆಂಪಮ್ಮ ವಿದ್ಯಾರ್ಥಿ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಯಿತು.