ಮಂಗಳೂರು: ಅಂಧರ ಸೇವಾ ಸಂಘದ ದಕ್ಷಿಣ ಕನ್ನಡದ ಅಧ್ಯಕ್ಷರಾಗಿ ಪಿ. ರವೀಂದ್ರ ರಾವ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ವಾರ್ಷಿಕ ಮಹಾಸಭೆಯಲ್ಲಿಆಯ್ಕೆ ಪ್ರಕ್ರಿಯೆ ನಡೆಯಿತು.ಕಾರ್ಯದರ್ಶಿಯಾಗಿ ಪಿ. ಶೋಭಾ ರಾವ್ , ಗೌರವ ಸಲಹೆಗಾರರಾಗಿ ಎಂ.ವಿ. ಸುಬ್ರಹ್ಮಣ್ಯ, ಕೋಶಾಧಿಕಾರಿಯಾಗಿ ಪಿ. ಸುರೇಂದ್ರ ರಾವ್ , ಜತೆ ಕಾರ್ಯದರ್ಶಿಯಾಗಿ ಮಂಗಳಾ ಎಸ್ . ಭಟ್ , ಕಾರ್ಯಕಾರಿ ಸಮಿತಿಗೆ ಎಸ್ .ಜಿ. ಹೆಗಡೆ, ಪಿ. ಸತೀಶ್ ರಾವ್ , ಸುರೇಶ ವರ್ಕಾಡಿ, ಶಾಂತಕುಮಾರ್ ಹಾಗೂ ನೀರದಾ ರಾವ್ ಆಯ್ಕೆಯಾಗಿದ್ದಾರೆ.
ರವೀಂದ್ರ ರಾವ್ ಅವರು ಶಾರದಾ ರಾಮರಾವ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಸಿಟಿಜನ್ ಅಸೋಸಿಯೇಶನ್ ನ ಕೋಶಾಧಿಕಾರಿಯೂ ಆಗಿದ್ದಾರೆ.