ವಿಕ ಸುದ್ದಿಲೋಕ ಹಾನಗಲ್ಲಹಾನಗಲ್ಲತಾಲೂಕನ್ನು ಬರಗಾಲ ಎಂದು ಘೋಷಣೆ ಮಾಡಲು ಒತ್ತಾಯಿಸಿ ಸೋಮವಾರ ಜೆಡಿಎಸ್ ನೇತೃತ್ವದಲ್ಲಿಪಟ್ಟಣದಲ್ಲಿರೈತರು ಪ್ರತಿಭಟನೆ ನಡೆಸಿದರು.
ಇಲ್ಲಿನ ಕುಮಾರೇಶ್ವರ ವಿರಕ್ತಮಠದಿಂದ ಮುಖ್ಯ ರಸ್ತೆ ಮೂಲಕ ಗಾಂಧಿ ವೃತ್ತ ತಲುಪಿ ಕೆಲಹೊತ್ತು ರಸ್ತೆ ತಡೆ ನಡೆಸಿ ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಇಲ್ಲಿನ ನೈಜ ಸ್ಥಿತಿ ಅರಿಯದೆ, ಹಾನಗಲ್ಲತಾಲೂಕನ್ನು ಮಧ್ಯಮ ಸ್ಥಿತಿಯ ಬರಗಾಲ ಪ್ರದೇಶ ಎಂದು ರಾಜ್ಯ ಸರಕಾರ ಘೋಷಣೆ ಮಾಡಿದೆ. ಎರಡೆರಡು ಬಾರಿ ಬಿತ್ತನೆ ಮಾಡಿ ಕೈಸುಟ್ಟುಕೊಂಡ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಂತರ್ಜಲ ಮಟ್ಟ ಕುಸಿತವಾಗಿದೆ. ವಿದ್ಯುತ್ ಕೊರತೆ ಉಂಟಾಗಿದೆ ಎಂದು ಮನವಿಯಲ್ಲಿತಿಳಿಸಲಾಗಿದೆ.
ಜೆಡಿಎಸ್ ತಾಲೂಕು ಅಧ್ಯಕ್ಷ ರಾಮನಗೌಡ ಪಾಟೀಲ ಮಾತನಾಡಿ,‘‘ತಾಲೂಕಿನಲ್ಲಿಬರ ಪರಿಹಾರ ಕಾರ್ಯಕ್ರಮ ಕೈಗೊಳ್ಳಬೇಕು. ಕುಡಿಯಲು ನೀರು, ಮೇವು ಪೂರೈಕೆ, ವೈಜ್ಞಾನಿಕವಾಗಿ ಬೆಳೆಹಾನಿ ಮೌಲ್ಯಮಾಪನ ಹಾಗೂ ಬರಪೀಡಿತ ಪ್ರದೇಶದಲ್ಲಿಅಲ್ಪ ಅವಧಿಯಲ್ಲಿಬೆಳೆಗಳನ್ನು ಬೆಳೆಯಲು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು’’ ಎಂದು ಒತ್ತಾಯಿಸಿದರು.