ಸೇವಾಲಾಲ ಮಹಾಮಠ ಸಮಿತಿಗೆ ಆಯ್ಕೆ

Contributed bysaleem.balabatti@timesofindia.com|Vijaya Karnataka
new directors elected for the sevalal mahamath committee in gadag
ಸೇವಾಲಾಲ ಮಹಾಮಠ ಸಮಿತಿಗೆ ಆಯ್ಕೆ

ವಿಕ ಸುದ್ದಿಲೋಕ ಗದಗ
ಶ್ರೀ ಸಂತ ಸೇವಾಲಾಲ ಜನ್ಮಸ್ಥಾನ ಮಹಾಮಠ ಸಮಿತಿ ಭಾಯಾಗಡ್ , ಸೂರಗೊಂಡನಕೊಪ್ಪ, ಚಿನ್ನಿಕಟ್ಟೆ, ನ್ಯಾಮತಿ ತಾಲೂಕು, ದಾವಣಗೆರೆ ಜಿಲ್ಲೆಇದರ ಆಡಳಿತ ಮಂಡಳಿಗೆ ಗದಗ ಜಿಲ್ಲಾನಿರ್ದೇಶಕರಾಗಿ ಗೋರಸೇನಾ (ಬಂಜಾರ) ರಾಜ್ಯಾಧ್ಯಕ್ಷ ಹಾಗೂ ವಕೀಲ ರವಿಕಾಂತ ಅಂಗಡಿ ಅವಿರೋಧ ಆಯ್ಕೆಯಾಗಿದ್ದಾರೆ.

ನಗರದ ಸೇವಾಲಾಲ ನಗರದಲ್ಲಿರುವ ಶ್ರೀ ಸಂತ ಸೇವಾಲಾಲ ದೇವಸ್ಥಾನದಲ್ಲಿಭಾನುವಾರ ನಡೆದ ಚುನಾವಣೆಯಲ್ಲಿಜಿಲ್ಲೆಯ ಸಮಿತಿ ಸದಸ್ಯರ ಸಮ್ಮುಖದಲ್ಲಿಅಂಗಡಿ ಅವರ ಆಯ್ಕೆ ಕೈಗೊಳ್ಳಲಾಯಿತು.

ಚುನಾವಣಾಧಿಕಾರಿ ರಾಘವೇಂದ್ರ ನಾಯ್ಕ ಅವರು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿ, ನೂತನ ನಿರ್ದೇಶಕರಿಗೆ ಪ್ರಮಾಣಪತ್ರ ವಿತರಿಸಿದರು. ಚುನಾವಣೆ ಉಸ್ತುವಾರಿ ಕೆ.ಎಲ್ .ಪೂಜಾರ, ಸಹಾಯಕ ಚುನಾವಣಾಧಿಕಾರಿಗಳಾದ ರವಿ ನಾಯ್ಕ, ವಿಕ್ರಮ್ ಹರಾವತ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಸಮಿತಿ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.

ಫೋಟೊ: 21 ಎಸ್ ಬಿ 11: ಗದಗದಲ್ಲಿನ್ಯಾಯವಾದಿ ರವಿಕಾಂತ ಅಂಗಡಿ ಅವರನ್ನು ಬಂಜಾರ ಸಮುದಾಯದವರು ಸನ್ಮಾನಿಸಿದರು.