ಗೌರಿಬಿದನೂರು: ಪುರಸಭೆ ಮಾಜಿ ಸದಸ್ಯ, ವಾಣಿಜ್ಯೋಧ್ಯಮಿ, ಕೆಎಚ್ ಪಿ ಮುಖಂಡ ಎಸ್ .ಎಚ್ . ಲಕ್ಷಿತ್ರ್ಮೕನಾರಾಯಣ್ ಅವರ ಪತ್ನಿ ರುಕ್ಮಣಮ್ಮ(78) ವಯೋಸಹಜ ಅನಾರೋಗ್ಯದಿಂದ ಸೋಮವಾರ ಬೆಳಗಿನ ಜಾವ ನಿಧನರಾದರು. ಅವರು ಮೂವರು ಪುತ್ರರು, ು , ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಬಳಗ ಅಗಲಿದ್ದಾರೆ. ಶಾಸಕ ಕೆ.ಎಚ್ . ಪುಟ್ಟಸ್ವಾಮಿಗೌಡ, ಬಿಜೆಪಿ ಮುಖಂಡ ಎನ್ .ಎಂ. ರವಿನಾರಾಯಣರೆಡ್ಡಿ, ಜೆಡಿಎಸ್ ಮುಖಂಡ ಸಿ.ಆರ್ . ನರಸಿಂಹಮೂರ್ತಿ, ವಾಣಿಜ್ಯೋದ್ಯಮಿಗಳಾದ ಬಿ.ಆರ್ . ಶ್ರೀನಿವಾಸಮೂರ್ತಿ, ಎ.ಎನ್ . ವೇಣು, ಮುಖಂಡರಾದ ಆರ್ . ಅಶೋಕ್ , ಆರ್ಯ ವೈಶ್ಯ ಮಂಡಳಿಯ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ಅನ್ನಮಯ್ಯ ಕೀರ್ತನಾ ಬಳಗ ಮೃತರ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದರು.