ಹುಮನಾಬಾದ್ : ಶಾಸಕರು ರೈತರ ತಮ್ಮ ಪಾಪ ತೊಳೆದುಕೊಳ್ಳಲು ಬಿಎಸ್ ಎಸ್ ಕೆವರೆಗೆ ಪಾದಯಾತ್ರೆ ನಡೆಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಫ್ಸರ್ ಮಿಯ್ಯ ವ್ಯಂಗ್ಯವಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದರು. ಪಾದಯಾತ್ರೆಯಿಂದ ಕಾರ್ಖಾನೆ ಪ್ರಾರಂಭವಾಗುವುದಿಲ್ಲ. ಸರಕಾರದ ಮೇಲೆ ಒತ್ತಡ ಹಾಕಬೇಕಾಗುತ್ತದೆ. ಅದಕ್ಕೆ ಮಾಜಿ ಸಚಿವ ರಾಜಶೇಖರ ಪಾಟೀಲರ ನೇತೃತ್ವದಲ್ಲಿರೈತರ ನಿಯೋಗವು ತೆರಳಲಿದೆ. ಮುಖ್ಯಮಂತ್ರಿ, ಸಕ್ಕರೆ ಸಚಿವರು, ಸಹಕಾರಿ ಸಚಿವರನ್ನು ಭೇಟಿ ಮಾಡಲಿದ್ದಾರೆ ಎಂದರು. ಬಿಎಸ್ ಎಸ್ ಕೆ ಹಾಗೂ ಡಿಸಿಸಿ ಬ್ಯಾಂಕ್ ಎರಡು ರೈತರದ್ದಾಗಿವೆ. ಅಭಿಷೇಕ ಪಾಟೀಲ್ ರು ಬ್ಯಾಂಕ್ ನ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಪರಿಹಾರ ಅಲ್ಲಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮನವರಿಕೆ ಮಾಡಿದ ಕಾರಣ ರಾಜೀನಾಮೆ ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದರಲ್ಲಿಯಾವುದೇ ಗೊಂದಲ ಅಥವಾ ಉದ್ದೇಶ ಇಲ್ಲಎಂದ ಇವರು ಬಿಜೆಪಿ ಮಂಡಲ ಅಧ್ಯಕ್ಷರು ಇಲ್ಲಸಲ್ಲದ ಆರೋಪ ಮಾಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಅವರಲ್ಲಿಮಾಹಿತಿ ಕೊರತೆ ಇದೆ ಎಂದರು.