ಹುಲಿ ಸೆರೆಗೆ ಕೂಂಬಿಂಗ್

Contributed byvkhnataraj@gmail.com|Vijaya Karnataka
Vijay Karnataka
ಹುಲಿ ಸೆರೆಗೆ ಕೂಂಬಿಂಗ್

ವಿಕ ಸುದ್ದಿಲೋಕ ಹುಣಸೂರು
ಹನಗೋಡು ಬಳಿಯ ಕೂಡ್ಲೂರು-ಹೊಸಕೋಟೆ ಸುತ್ತಮುತ್ತಲಿನಲ್ಲಿಹುಲಿ ಸೆರೆಗೆ ಆನೆಗಳು ಹಾಗೂ ಡ್ರೋಣ್ ಮೂಲಕ ಅರಣ್ಯ ಸಿಬ್ಬಂದಿ ಕೂಂಬಿಂಗ್ ನಡೆಸುತ್ತಿದ್ದು, ಹುಲಿ ಕಾಣಿಸಿಕೊಂಡಿಲ್ಲಎಂದು ಪ್ರಾದೇಶಿಕ ಅರಣ್ಯ ವಿಭಾಗದ ಡಿಸಿಎಫ್ ಕಿರುಬನಂತನ್ ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಹೊಸಕೋಟೆ ಬಳಿಯ ಜಮೀನಿನಲ್ಲಿಮೇಯುತ್ತಿದ್ದ ರೇವಣ್ಣ ಅವರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು. ಅದೇ ಸ್ಥಳದಲ್ಲಿತಿಂಗಳ ಹಿಂದೆಯೂ ಹಸು ಬಲಿಯಾಗಿತ್ತು. ಇದರಿಂದ ಆಕ್ರೋಶಿತರಾದ ರೈತರು, ಸುತ್ತಮುತ್ತಲ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ದಿಗ್ಬಂಧನ ವಿಧಿಸಿ ಆಹೋರಾತ್ರಿ ಧರಣಿ ನಡೆಸಿದ್ದರು.

ಹುಲಿ ಸೆರೆ ಹಿಡಿಯಲು ಎನ್ ಟಿಸಿಎ ವತಿಯಿಂದ ಅನುಮತಿ ದೊರೆತ ನಂತರ ದುಬಾರೆ ಸಾಕಾನೆ ಆನೆ ಶಿಬಿರದ ಇಂದ್ರ ಮತ್ತು ಅಜೇಯ ಸಾಕಾನೆಗಳು ಹಾಗೂ ಡ್ರೋನ್ ಮೂಲಕ ಪಶು ವೈದ್ಯಾಧಿಕಾರಿ ಡಾ.ರಮೇಶ್ ರೊಂದಿಗೆ ಅರಣ್ಯ ಹಾಗೂ ಆನೆ ಕಾರ್ಯಪಡೆಯ 40 ಮಂದಿ ಸಿಬ್ಬಂದಿ ಎಸಿಎಫ್ ಕಿರಣ್ ಕುಮಾರ್ , ಆರ್ .ಎಫ್ .ಒ. ಸಂತೋಷ್ ಹೂಗಾರ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿಪಾಲ್ಗೊಂಡಿದ್ದಾರೆ ಎಂದು ಡಿಸಿಎಫ್ ತಿಳಿಸಿದ್ದಾರೆ.

ಫೋಟೋ

ಚಿತ್ರ.20.ಹೆಚ್ .ಯು.ಎನ್ .3 ಮತ್ತು4.ಸಾಕಾನೆಗಳ ಮೂಲಕ ಅರಣ್ಯ ಸಿಬ್ಬಂದಿ ಹುಲಿ ಪತ್ತೆಗಾಗಿ ಹೊಸಕೋಟೆ ಸುತ್ತಾಮುತ್ತ ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು.