ಶ್ರೀಪತಿ ಭಟ್ | ಬೆಂಗಳೂರು(ತುಲಾ-ಈ ರಾಶಿಯವರಿಗೆ ಮೇಧಾ ಶಕ್ತಿ ಯೋಗ)
----------------
ಮೇಷ : ಹಣವನ್ನು ಬೇಡದ ಜಾಗಗಳಲ್ಲಿಹೂಡಿಕೆ ಮಾಡುವ ಯೋಚನೆಗಳಿಗೆ ತಡೆ ಹಾಕಿ. ನಿಮ್ಮ ಅಭಿಪ್ರಾಯಗಳಿಗೆ ಕುಟುಂಬದವರು ಸಮ್ಮತಿಯನ್ನು ಕೊಡಲಿದ್ದಾರೆ. ಹೀಗಿನ ವಾಸ್ತವ ಪರಿಸ್ಥಿತಿ ನಿಮ್ಮ ರಕ್ಷಾ ಕವಚದಂತಿದೆ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಕೆಂಪು)
-----------------
ವೃಷಭ : ಕಲಿಕೆಯಿಂದ ಆಫೀಸಿನ ಕೆಲಸಗಳನ್ನು ಇನ್ನಷ್ಟು ತಿಳಿದುಕೊಳ್ಳುವ ಅವಕಾಶ ಸಿಗುತ್ತದೆ. ಮಕ್ಕಳ ಮೇಲೆ ಮೃದು ಧೋರಣೆ ಇರಲಿ. ಹಾಗೆಂದು ಎಲ್ಲಾಸಮಯದಲ್ಲಿಯೂ ಇದನ್ನೇ ಮುಂದುವರಿಸಬೇಡಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೀಲಿ)
-------------
ಮಿಥುನ : ಬಹಳ ದಿನಗಳಿಂದ ಮೇಲಧಿಕಾರಿಗಳು ಬಯಸಿದ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ ಕಾರಣ ಪ್ರಶಂಸೆ ಸಿಗಲಿದೆ. ಮನೆಯಲ್ಲಿದುರ್ಗಾ ಸ್ತೋತ್ರ ಪಠಿಸಿದರೆ ಯಶಸ್ಸು ನಿಶ್ಚಿತವಾಗಿ ಸಿಗಲಿದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಸಿರು)
----------
ಕರ್ಕ: ಪ್ರತಿಯೊಂದು ಕೆಲಸ-ಕಾರ್ಯಗಳು ವಿಳಂಬವಾಗುವುದರಿಂದ ಉತ್ಸಾಹಕ್ಕೆ ಅಡ್ಡಿ ಉಂಟಾಗಬಹುದು. ಕರಕುಶಲ ವಸ್ತು ತಯಾರಿಕರಿಗೆ ಆದಾಯದಲ್ಲಿಹೆಚ್ಚಳವಾಗಲಿದೆ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಹಳದಿ)
----------
ಸಿಂಹ : ಮನಸ್ಸು ಸಿರಿತನದ ಜೀವನವನ್ನು ಇಷ್ಟಪಡಲಿದ್ದು, ಬುದ್ಧಿ ಸ್ಥಿಮಿತದಲ್ಲಿರಲಿ. ಈ ಋುತುವಿಗೆ ಹೊಂದುವ ಆಹಾರ ಪದಾರ್ಥಗಳನ್ನು ಮಾತ್ರ ಸ್ವೀಕರಿಸಿ. ದೇಹದಲ್ಲಿಅಧಿಕ ಉಷ್ಣಾಂಶದಿಂದ ಅನಾರೋಗ್ಯ ಎದುರಾಗಲಿದೆ.
(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಆಕಾಶ ನೀಲಿ)
----------
ಕನ್ಯಾ : ನೂತನ ಕೆಲಸ-ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಸೂಕ್ತ ಕಾಲ. ವೈಯಕ್ತಿಕ ವ್ಯವಹಾರಗಳಲ್ಲಿಗೌಪ್ಯತೆಯನ್ನು ಕಾಪಾಡುವುದು ಮುಖ್ಯವಾಗಿದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಸುವರ್ಣ)
---------
ತುಲಾ : ಸಾಮಾಜಿಕ ಕ್ಷೇತ್ರದಲ್ಲಿಹೆಸರು ಸಂಪಾದನೆ ಮಾಡುವ ಅಪೇಕ್ಷೆಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ತೆಗೆದುಕೊಳ್ಳುವ ಒಳ್ಳೆಯ ನಿರ್ಧಾರಗಳಿಂದ ಸಹೋದ್ಯೋಗಿಗಳು ಸಂತಸ ಪಡಲಿದ್ದಾರೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಪಾಚಿ ಹಸಿರು)
--------------
ವೃಶ್ಚಿಕ : ಉಗುರು ಮತ್ತು ಹಸ್ತಗಳ ಸ್ವಚ್ಚತೆಯ ಕೊರತೆಯಿಂದ ಕಾಯಿಲೆಗಳು ಬರುವ ಸಾಧ್ಯತೆ ಇದ್ದು, ಜಾಗ್ರತೆ ವಹಿಸಿ. ಪ್ರೇಮಿಗಳಿಗೆ ಜೀವನವನ್ನು ನಿರ್ವಹಿಸಲು ಉತ್ತಮ ಅವಕಾಶಗಳು ಸಿಗಲಿವೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕಪ್ಪು)
-------
ಧನು : ಯಾರ ನೆರವೂ ಇಲ್ಲದೆ ನಿಮ್ಮೆಲ್ಲಕಾರ್ಯಗಳನ್ನು ಸ್ವಯಂ ನೀವೇ ನಿರ್ವಹಿಸುವಂತಾಗಲಿದೆ. ಯಾರನ್ನು ಬಹಳ ಸಲೀಸು ಅಂದುಕೊಂಡಿದ್ದೀರೋ ಅವರೇ ಕಠಿಣರಾಗಲಿದ್ದಾರೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬಿಳಿ)
----------
ಮಕರ : ಪೂಜೆ-ಪುನಸ್ಕಾರಗಳ ಜತೆ ಸ್ವಂತ ಪ್ರಯತ್ನವಿದ್ದರೆ ಗುರಿ ಮುಟ್ಟಲು ಸಾಧ್ಯ. ಈ ಬಗ್ಗೆ ಯೋಚಿಸಿ. ಕುಟುಂಬದವರೊಡನೆ ಮನರಂಜನೆಗಾಗಿ ಅಲ್ಪ ಕಾಲವನ್ನು ಮೀಸಲಿಡಲು ಪ್ರಯತ್ನಿಸಿ.
(ಶುಭ ಸಂಖ್ಯೆ :9, ಅದೃಷ್ಟ ಬಣ್ಣ : ಕಂದು ಕೆಂಪು)
--------
ಕುಂಭ : ನಾಯಕತ್ವ ಗುಣವನ್ನು ಹೊರತರಲು ಸ್ನೇಹಿತರು ಪ್ರಯತ್ನಿಸುತ್ತಾರೆ. ಜನ ಸಂಪರ್ಕದಲ್ಲಿರುವ ರಾಜಕಾರಣಿಗಳಿಗೆ ಒತ್ತಡ ಹೆಚ್ಚಲಿದೆ. ಭೋಗ ವಸ್ತುವಿನಿಂದ ಖರೀದಿಯ ಅವಕಾಶ ಸಿಗಲಿದೆ.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಕೇಸರಿ)
----------
ಮೀನ : ಕಾರ್ಯಕ್ಕೆ ಪ್ರಭಾವಿ ವ್ಯಕ್ತಿಗಳ ಹಸ್ತಕ್ಷೇಪ ಸಮಸ್ಯೆ ಎದುರಾಗಬಹುದು, ಕಾಳಜಿ ವಹಿಸಿ. ಗುತ್ತಿಗೆ ವ್ಯವಹಾರವನ್ನು ಒಪ್ಪಿಕೊಳ್ಳುವ ಮೊದಲು ಜನಸಂಪತ್ತಿನ ಬಗ್ಗೆ ಯೋಚಿಸುವುದು ಅಗತ್ಯ.