Bheem A New Frontier For Building Indian Habitats On Extraterrestrial
ಅನ್ಯಗ್ರಹದಲ್ಲಿ‘ಭೀಮ್ ’ ಮನೆ
Contributed by: DHEERAJ K|Vijaya Karnataka•
ಹೊಸದಿಲ್ಲಿ: ಭಾರತವು ಈಗಾಗಲೇ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವ ಕನಸನ್ನು ಬಹಿರಂಗಪಡಿಸಿದೆ. ಇದರ ಜತೆಗೆ ಮಾನವ ಸಹಿತ ಚಂದ್ರಯಾನದ ಯೋಜನೆ ಯಲ್ಲೂದೇಶ ತೊಡಗಿಸಿಕೊಂಡಿದೆ. ಈ ನಡುವೆ, ಬೆಂಗಳೂರಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ನ (ಐಐಎಸ್ಸಿ) ಸಂಶೋಧಕರ ತಂಡವೊಂದು ಭೂಮಿಯ ಆಚೆಗೆ ಮಾನವ ನೆಲೆಗಳನ್ನು ನಿರ್ಮಿಸಲು ಸಂಪೂರ್ಣ ‘ಮೇಡ್ ಇನ್ ಇಂಡಿಯಾ’ ಪರಿಕಲ್ಪನೆ ಯೊಂದನ್ನು ಪ್ರಸ್ತಾಪಿಸಿದೆ. ‘ಭೀಮ್ ’ (ಆhಛಿಛಿಞ) ಅಥವಾ ‘ಭಾರತೀಯ ಎಕ್ಸ್ ಟ್ರಾಟೆರೆಸ್ಟ್ರಿಯಲ್ ಎಕ್ಸ್ ಪ್ಯಾಂಡೇಬಲ್ ಮಾಡ್ಯುಲರ್ ಹ್ಯಾಬಿಟ್ಯಾಟ್ ’ ಎಂದು ಕರೆಯಲ್ಪಡುವ ಈ ಯೋಜನೆ, ಸಣ್ಣ ರೀತಿಯಲ್ಲಿರಾಕೆಟ್ ಗಳಲ್ಲಿಸಾಗಿಸಿ, ನಂತರ ಚಂದ್ರ ಅಥವಾ ಮಂಗಳ ಗ್ರಹದ ಮೇಲೆ ಜೋಡಿಸಬಹುದಾದ ಫಲಕ ಆಧರಿತ ಮಾಡ್ಯುಲರ್ ಮನೆಗಳ ಪರಿಕಲ್ಪನೆಯಾಗಿದೆ. ಈ ಸಂಶೋಧನಾ ಪ್ರಬಂಧವನ್ನು ಬೆಂಗಳೂರಿನ ಮೃತ್ಯುಂಜಯ್ ಬರುವಾ, ಅಮೋಘ್ ಜಾಧವ್ , ಬಿಮಲೇಂದು ಮಹಾಪಾತ್ರ ಮತ್ತು ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾಅವರು ಜಂಟಿಯಾಗಿ ಬರೆದಿದ್ದಾರೆ.
ಏನಿದು ಭೀಮ್ ?ಹಿಂದಿನ ಸಾಂಪ್ರದಾಯಿಕ ಬಾಹ್ಯಾಕಾಶ ನಿವಾಸಗಳು ಬೃಹತ್ ಗಾತ್ರದ, ಮುಂಚಿತವಾಗಿಯೇ ನಿರ್ಮಿಸಿದ ಮಾಡ್ಯೂಲ್ ಗಳ ರೂಪದಲ್ಲಿಉಡಾವಣೆಯಾಗುತ್ತಿದ್ದವು. ಆದರೆ ‘ಭೀಮ್ ’ ಪರಿಕಲ್ಪನೆಯು ಸಣ್ಣ ಗಾತ್ರದ ಫಲಕಗಳಿಂದ ವಿನ್ಯಾಸಗೊಂಡಿದೆ. ಉಡಾವಣೆಯ ಸಮಯದಲ್ಲಿಇವುಗಳನ್ನು ಒಂದರ ಮೇಲೊಂದರಂತೆ ಸುಲಭವಾಗಿ ಜೋಡಿಸಿ ಕೊಂಡೊಯ್ಯಬಹುದು ಮತ್ತು ನಂತರ ಅನ್ಯಗ್ರಹದಲ್ಲಿಜೋಡಿಸಬಹುದು. ರಾಕೆಟ್ ಗಳಲ್ಲಿನ ಸೀಮಿತ ಜಾಗದಲ್ಲಿಬೃಹತ್ ವಾಸಸ್ಥಳಗಳನ್ನು ಸಾಗಿಸುವ ಸವಾಲಿಗೆ ಈ ಯೋಜನೆಯು ಉತ್ತರವಾಗಲಿದೆ. ಚಂದ್ರ ಮತ್ತು ಮಂಗಳ ಗ್ರಹಗಳ ಭವಿಷ್ಯದ ಕಾರ್ಯಾಚರಣೆಗಳನ್ನು ಮತ್ತು ರಾಕೆಟ್ ಉಡಾವಣಾ ಸಾಗಣೆಯ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಲಾಗಿದೆ.
‘ಸ್ಪೇಸ್ ಎಕ್ಸ್ ’ನ ಒಂದೇ ಒಂದು ಸ್ಟಾರ್ ಶಿಪ್ ಪೇಲೋಡ್ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವಾಸಯೋಗ್ಯ ಜಾಗಕ್ಕಿಂತ ಸುಮಾರು ಎರಡರಷ್ಟು ದೊಡ್ಡದಾದ ‘ಭೀಮ್ ’ ವಾಸಸ್ಥಳವನ್ನು ನಿರ್ಮಿಸಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
**
ಇಂದಿನಿಂದ 20 ವರ್ಷಗಳ ನಂತರ ಮನುಷ್ಯರು ಭೂಮಿಯ ಆಚೆಗೆ ವಾಸಿಸಬೇಕೆಂದರೆ, ಅದಕ್ಕಾಗಿ ಕೆಲಸ 20 ವರ್ಷಗಳ ನಂತರ ಪ್ರಾರಂಭವಾಗ ಬಾರದು; ಅದು ಇಂದೇ ಪ್ರಾರಂಭವಾಗಬೇಕು.