ಮಂಗಳೂರು ವಿಧಾನಸಭೆ ಕ್ಷೇತ್ರದ ಭಾಗ ಸಂಖ್ಯೆ 24ರ ಮತದಾರರಾಗಿರುವ ಡೊನಾಲ್ಡ್ ಜೋಸೆಫ್ ರೇಗೊ ಅವರ ಹೆಸರನ್ನು ಗಣತಿ ನಮೂನೆಯಲ್ಲಿಮೃತ ಎಂದು ನಮೂದಿಸಿ ಕರಡು ಮತದಾರರ ಪಟ್ಟಿಯಿಂದ ಕೈಬಿಟ್ಟಿರುತ್ತಾರೆ ಎಂದು ದಿನಪತ್ರಿಕೆಯಲ್ಲಿಪ್ರಕಟವಾಗಿರುವ ಘಟನೆಯ ಕುರಿತು ಪರಿಶೀಲನೆ ನಡೆಸಲಾಗಿದ್ದು, ಮಂಗಳೂರು ವಿಧಾನಸಭಾ ಕ್ಷೇತ್ರದ ಮತಗಟ್ಟೆ ಭಾಗ ಸಂಖ್ಯೆ 24 ರಲ್ಲಿಮತದಾರರಾಗಿ ಡೊನಾಲ್ಡ್ ಜೋಸೆಫ್ ರೇಗೊ ಅವರ ಹೆಸರು ಅಂತಿಮ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಚುನಾವಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.