Couples Suicide Attempt Wife Dead Husband In Serious Condition
ಆತ್ಮಹತ್ಯೆಗೆ ದಂಪತಿ ಯತ್ನ: ಪತ್ನಿ ಸಾವು, ಪತಿ ಗಂಭೀರ
Contributed by: MANJUNATH SWAMY|Vijaya Karnataka•
ಅಶೋಕನಗರ ತಾಂಡಾದಲ್ಲಿನಡೆದ ಘಟನೆ
ಆತ್ಮಹತ್ಯೆಗೆ ದಂಪತಿ ಯತ್ನ: ಪತ್ನಿ ಸಾವು, ಪತಿ ಗಂಭೀರವಿಕ ಸುದ್ದಿಲೋಕ ಯಾದಗಿರಿ
ಕೌಟುಂಬಿಕ ಸಮಸ್ಯೆಯಿಂದಾಗಿ ಗ್ರಾಮೀಣ ಠಾಣೆ ವ್ಯಾಪ್ತಿಯ ಅಶೋಕನಗರ ತಾಂಡಾದಲ್ಲಿನವದಂಪತಿ ಮಂಗಳವಾರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಪತ್ನಿ ಮೃತಪಟ್ಟಿದ್ದು, ಪತಿ ಗಂಭೀರ ಸ್ಥಿತಿಯಲ್ಲಿದ್ದಾರೆ.
ಶಿಲ್ಪಾ (21) ಮೃತ. ಮಾರುತಿ (23) ಆರೋಗ್ಯ ಪರಿಸ್ಥಿತಿ ಬಹಳ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಯುವ ಜೋಡಿ ಪ್ರೀತಿಸಿ ನಂತರ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆ ಮಾಡಿಕೊಂಡಿದ್ದಾರೆ. ಆದರೆ, ಮದುವೆಯಾದ ಒಂದೇ ತಿಂಗಳಿಗೆ ಕೌಟುಂಬಿಕ ಸಮಸ್ಯೆಯಿಂದಾಗಿ ಮನೆಯಲ್ಲಿನ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ತನಿಖೆ ಬಳಿಕ ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಲಿದೆ.