ಬ್ಯೂಟಿ ಟಿಫ್ಸ್

Contributed byshubha.hegde@timesgroup.com|Vijaya Karnataka
how to easily remove glitter eyeshadow perfect beauty tips without hassle
ಗ್ಲಿಟರ್ ಐಶ್ಯಾಡೋ ತೆಗೆಯುವುದು ಹೇಗೆ?

ಹೆವಿ ಗ್ಲಿಟರ್ ಐಶ್ಯಾಡೋವನ್ನು ಕಣ್ಣಿನ ರೆಪ್ಪೆಗಳಿಗೆ ಕಿರಿಕಿರಿಯಾಗದಂತೆ ಸುರಕ್ಷಿತವಾಗಿ ತೆಗೆಯುವುದು ಸವಾಲಿನದ್ದು. ಒಣ ಚರ್ಮದ ಮೇಲೆ ಗ್ಲಿಟರ್ ಗಳನ್ನು ಉಜ್ಜುವುದರಿಂದ ರೆಪ್ಪೆಯ ತೆಳುವಾದ ಚರ್ಮಕ್ಕೆ ಹಾನಿಯಾಗಬಹುದು. ಆದ್ದರಿಂದ ಆಯಿಲ್ ಆಧರಿತ ಮೇಕಪ್ ರಿಮೂವರ್ ಅಥವಾ ಕ್ಲೆನ್ಸಿಂಗ್ ಬಾಮ್ ಅನ್ನು ಹತ್ತಿಯ ಮೇಲೆ ಹಾಕಿ, ಅದನ್ನು ಮುಚ್ಚಿದ ಕಣ್ಣಿನ ಮೇಲೆ 20 ರಿಂದ 30 ಸೆಕೆಂಡುಗಳ ಕಾಲ ಒತ್ತಿ ಹಿಡಿಯಬೇಕು. ಈ ರೀತಿ ಮಾಡುವುದರಿಂದ ಎಣ್ಣೆಯು ಗ್ಲಿಟರ್ ಗ್ಲೂಅನ್ನು ಕರಗಿಸಿ, ಅದು ಸುಲಭವಾಗಿ ಜಾರುವಂತೆ ಮಾಡುತ್ತದೆ.ನಂತರ ಹತ್ತಿಯಿಂದ ಹೊರಮುಖವಾಗಿ ಒಂದೇ ದಿಕ್ಕಿನಲ್ಲಿಮೆಲ್ಲಗೆ ಒರೆಸಬೇಕು ಮತ್ತು ಗ್ಲಿಟರ್ ಮತ್ತೆ ಕಣ್ಣಿನ ಮೇಲೆ ಹರಡದಂತೆ ಪ್ರತಿ ಬಾರಿಯೂ ಹತ್ತಿಯ ಹೊಸ ಭಾಗವನ್ನೇ ಬಳಸಬೇಕು. ಒರೆಸಿದ ನಂತರವೂ ಕಣ್ಣಿನ ಮೇಲೆಯೇ ಸಣ್ಣ ಗ್ಲಿಟರ್ ಕಾಳುಗಳು ಉಳಿದುಕೊಂಡಿದ್ದರೆ, ಸಾಧಾರಣ ಸೆಲೋ ಟೇಪ್ ಅನ್ನು ಬೆರಳಿಗೆ ಸುತ್ತಿಕೊಂಡು, ಅದರ ಅಂಟುತನವನ್ನು ಸ್ವಲ್ಪ ಕಡಿಮೆ ಮಾಡಲು ಕೈಮೇಲೆ ಒಮ್ಮೆ ಮುಟ್ಟಿ, ನಂತರ ಕಣ್ಣಿನ ಮೇಲಿರುವ ಗ್ಲಿಟರ್ ಗಳನ್ನು ಮೆಲ್ಲಗೆ ಡ್ಯಾಬ್ ಮಾಡಿ ಎತ್ತಿ ತೆಗೆಯಬಹುದು. ಆದರೆ ಈ ಟೇಪ್ ಅನ್ನು ಕಣ್ಣಿಮೆಗಳಿಗೆ ಅಥವಾ ಕಣ್ಣಿನ ಒಳಗಿನ ಅಂಚಿಗೆ ತಾಗಿಸದಂತೆ ಎಚ್ಚರ ವಹಿಸಬೇಕು.
ಗ್ಲಿಟರ್ ಹೆಚ್ಚಾಗಿ ಕಣ್ಣಿಮೆಯ ಬುಡದಲ್ಲಿಸಿಕ್ಕಿಹಾಕಿಕೊಳ್ಳುವುದರಿಂದ ಆಯಿಲ್ ರಿಮೂವರ್ ಅಥವಾ ವಾಟರ್ ನಲ್ಲಿಮುಳುಗಿಸಿದ ಇಯರ್ ಬಡ್ ಬಳಸಿ ಕಣ್ಣಿಮೆಯ ಬುಡ ಮತ್ತು ಕಣ್ಣಿನ ಮೂಲೆಗಳನ್ನು ಎಚ್ಚರಿಕೆಯಿಂದ ಸ್ವಚ್ಛಗೊಳಿಸಬೇಕು. ಕೊನೆಯಲ್ಲಿಸಂಪೂರ್ಣ ಮುಖವನ್ನು ಮೃದುವಾದ ಫೇಸ್ ವಾಶ್ ನಿಂದ ತೊಳೆದುಕೊಂಡರೆ ಕೆನ್ನೆ ಅಥವಾ ಹುಬ್ಬುಗಳ ಮೇಲೆ ಬಿದ್ದಿರುವ ಗ್ಲಿಟರ್ ಸಂಪೂರ್ಣವಾಗಿ ಹೋಗುತ್ತದೆ. ಮುಖ ತೊಳೆದ ತಕ್ಷಣ ಕಣ್ಣಿನ ಸುತ್ತಲಿನ ಚರ್ಮಕ್ಕೆ ಸರಿಹೊಂದುವ ಐ ಕ್ರೀಮ್ ಹಚ್ಚುವುದರಿಂದ ಚರ್ಮದ ತೇವಾಂಶವು ಕಾಯ್ದುಕೊಳ್ಳುತ್ತದೆ ಮತ್ತು ಕಿರಿಕಿರಿ ಉಂಟಾಗುವುದಿಲ್ಲ.