ಸಂಸದರಾಗಿ ಗೆದ್ದ ಮೇಲೆ ತಾಲೂಕಿನ ಕಡೆ ಮುಖ ಮಾಡದ್ದಕ್ಕೆ ಅಸಮಾಧಾನ
ವಿಕ ಸುದ್ದಿಲೋಕ ಮುಳಬಾಗಲುನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿಜೆಡಿಎಸ್ ಪಕ್ಷದ ಮುಖಂಡರು ಕೋಲಾರ ಸಂಸದ ಮಲ್ಲೇಶ್ ಬಾಬು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಸಂಸದ ಎಂ.ಮಲ್ಲೇಶ್ ಬಾಬು ಅವರು ಖಾಸಗಿ ಕಾರ್ಯಕ್ರಮಕ್ಕೆ ಬಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಆನಂದ್ ರೆಡ್ಡಿ ಹಾಗೂ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ಅವರನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದಂತೆ ಕೆಂಡಾ ಮುಂಡಲರಾದ ಮುಖಂಡರು ನಮ್ಮ ವೈಯಕ್ತಿಕ ಹಣವನ್ನು ಸುರಿದು ತಾಲೂಕಿನಲ್ಲಿಲೋಕಸಭಾ ಚುನಾವಣೆಯಲ್ಲಿಮತಗಳನ್ನು ಹಾಕಿಸಿ ಗೆಲ್ಲಿಸಲಾಯಿತು. ಆದರೆ ಗೆದ್ದು ಸುಮಾರು ಮೂರು ವರ್ಷಗಳೇ ಕಳೆಯುತ್ತಿದ್ದರೂ ಸೌಜನ್ಯಕ್ಕಾದರೂ ದೂರವಾಣಿ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ. ತಾಲೂಕಿನಲ್ಲಿಇದುವರೆಗೂ ಯಾವುದೇ ರೀತಿಯ ಅನುದಾನ ಬಿಡುಗಡೆ ಮಾಡಿಸಿ ಕಾಮಗಾರಿ ನಡೆಸಿಲ್ಲ, ಯಾವುದೇ ಕಾರ್ಯಕ್ರಮಗಳಲ್ಲಿಭಾಗವಹಿಸುತ್ತಿಲ್ಲ. ಹೀಗಾಗಿ ಸಂಸದರನ್ನಾಗಿ ಗೆಲ್ಲಿಸಿ ತಪ್ಪು ಮಾಡಿದೆವು. ನಾವೇನು ನಿಮ್ಮನ್ನು ಹಣ ಕೇಳುತ್ತಿದ್ದೇವಾ ಎಂದು ತರಾಟೆಗೆ ತೆಗೆದುಕೊಂಡರು.
ಬಿಡದಿ ಟೌನ್ ಶಿಪ್ ಪಾದಯಾತ್ರೆಯಲ್ಲಿಭಾಗವಹಿಸಲು ಕರೆ ಮಾಡಿದರೂ ಸ್ವೀಕರಿಸಲಿಲ್ಲ, ಕಾರ್ಯಕರ್ತರಿಗಾಗಲಿ ಅಥವಾ ಕ್ಷೇತ್ರದ ಜನತೆಯ ಸ್ಪಂದನೆಗೆ ಸಿಗುತ್ತಿಲ್ಲ. ಯಾರೇ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸದೆ ಜನತೆಗೆ ಗೌರವ ನೀಡುತ್ತಿಲ್ಲ. ಚುನಾವಣೆಯಲ್ಲಿಗೆಲುವನ್ನು ಪಡೆದಾಗಿನಿಂದಲೂ ತಾಲೂಕಿಗೆ ಬಂದೇ ಇಲ್ಲಎಂದು ಜೆಡಿಎಸ್ ಪಕ್ಷದ ರಾಜ್ಯದ ಕೋರ್ ಕಮಿಟಿ ಸದಸ್ಯ ಜಿ.ಆನಂದರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಸಮಯದಲ್ಲಿತಾಲೂಕಿನಾದ್ಯಂತ ಸಂಚರಿಸಿ ಅದ್ಧೂರಿ ಪ್ರಚಾರ ಮಾಡಲಾಗಿತ್ತು. ಜೇಬುಗಳಲ್ಲಿಇದ್ದ ಹಣವನ್ನು ಖರ್ಚು ಮಾಡಿ ಗೆಲ್ಲಿಸಿದರೆ ಕನಿಷ್ಠ ತಾಲೂಕು ಏನಾಗಿದೆ?, ಗೆದ್ದಿರುವುದಕ್ಕಾದರೂ ತಾಲೂಕಿನ ಅಭಿವೃದ್ಧಿ ಬಗ್ಗೆ ಇದುವರೆಗೂ ಸಣ್ಣ ಕೆಲಸವನ್ನೂ ಸಹ ಮಾಡದೆ ತಾಲೂಕನ್ನು ಲೆಕ್ಕಕ್ಕಿಲ್ಲದಂತೆ ನೋಡುತ್ತಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಕಾಡೇನಹಳ್ಳಿ ನಾಗರಾಜ್ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿಕೋಲಾರದ ಜೆಡಿಎಸ್ ಮುಖಂಡರಾದ ಸಿ.ಎಂ.ಆರ್ ಶ್ರೀನಾಥ್ , ಬಣಕನಹಳ್ಳಿ ನಟರಾಜ್ , ಕೋಮುಲ್ ನಿರ್ದೇಶಕ ಸಾಮೇಗೌಡ, ಜೆಡಿಎಸ್ ವಕ್ತಾರ ಎಂ.ಎಸ್ .ಶ್ರೀನಿವಾಸ್ ರೆಡ್ಡಿ ಅವರು ಸಮಾಧಾನ ಮಾಡಲು ಯತ್ನಿಸಿದರು.
ವಡಗೂರು ಹರೀಶ್ , ನರಸಿಂಹಪ್ಪ, ಮೋಹನ ರೆಡ್ಡಿ ಹಾಗೂ ನೂರಾರು ಮುಖಂಡರು ಇದ್ದರು
2 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ನಗರದಲ್ಲಿನಡೆದ ಖಾಸಗಿ ಕಾರ್ಯಕ್ರಮದಲ್ಲಿಸಂಸದ ಎಂ. ಮಲ್ಲೇಶ್ ಬಾಬು ಅವರನ್ನು ಜೆಡಿಎಸ್ ಮುಖಂಡರು ತರಾಟೆ ತೆಗೆದುಕೊಳ್ಳುತ್ತಿರುವುದು.