ಹೊಸದಿಲ್ಲಿ: ದೇಶದ ಮುಂಚೂಣಿ ಒಟಿಟಿ ಸಂಸ್ಥೆಯಾಗಿರುವ ಜಿಯೋ ಹಾಟ್ ಸ್ಟಾರ್ , ಬ್ರಿಟನ್ , ಕೆನಡಾ ಮತ್ತು ಸಿಂಗಾಪುರ ದೇಶಗಳಲ್ಲಿತನ್ನ ಅಂತಾರಾಷ್ಟ್ರೀಯ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿದೆ.
ಈ ಮೈಲುಗಲ್ಲಿನೊಂದಿಗೆ ಜಿಯೋ ಹಾಟ್ ಸ್ಟಾರ್ ಜಾಗತಿಕ ಮನರಂಜನಾ ವೇದಿಕೆಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಈ ವೇದಿಕೆಯು 12ಕ್ಕೂ ಹೆಚ್ಚು ಭಾಷೆಗಳಲ್ಲಿ1.6 ಲಕ್ಷ ಗಂಟೆಗಳಿಗೂ ಅಧಿಕ ಕಂಟೆಂಟ್ ಹೊಂದಿದ್ದು, ಬಳಕೆದಾರರಿಗೆ ಅತ್ಯುತ್ತಮ ಅನುಭವ ನೀಡುವ ಭರವಸೆಯಿತ್ತಿದೆ. ದಕ್ಷಿಣ ಏಷ್ಯಾ ಪ್ರೇಕ್ಷಕರನ್ನು ಗಮನದಲ್ಲಿರಿಸಿಕೊಂಡರೂ ಜಾಗತಿಕವಾಗಿ ಜನರನ್ನು ಆಕರ್ಷಿಸುವ ಭಾರತೀಯ ಚಲನಚಿತ್ರಗಳು, ಟಿವಿ ಶೋಗಳು, ಅನಿಮೆ ಮತ್ತು ಪ್ರಾದೇಶಿಕ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿತರಲಾಗಿದೆ.ಪ್ರತಿವರ್ಷ ಸುಮಾರು 30,000 ಗಂಟೆಗಳ ಹೊಸ ಕಂಟೆಂಟ್ ಅನ್ನು ಇಲ್ಲಿಸೇರಿಸಲಾಗುತ್ತದೆ. ಸಂಸ್ಥೆಯ ನೂತನ ಯತ್ನ ಫಲಪ್ರದವಾಗುವ ಭರವಸೆಯನ್ನು ಜಿಯೋ ಸ್ಟಾರ್ ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ಅಮಿತ್ ಮಲ್ಹೋತ್ರಾ ವ್ಯಕ್ತಪಡಿಸಿದ್ದಾರೆ.
ಈ ಹೊಸ ಅಪ್ಲಿಕೇಶನ್ ನಲ್ಲಿಹೊಸ ಒರಿಜಿನಲ್ ಕಂಟೆಂಟ್ ಜೊತೆಗೆ ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು 6 ಭಾಷೆಗಳಲ್ಲಿಪ್ರಸಾರ ಮಾಡಲಾಗುತ್ತಿದೆ. ಸಿಂಗಾಪುರ, ಕೆನಡಾ ಮತ್ತು ಬ್ರಿಟನ್ ಪ್ರೇಕ್ಷಕರು ಬಿಗ್ ಬಾಸ್ ಕಾರ್ಯಕ್ರಮದಲ್ಲಿನೇರವಾಗಿ ಲೈವ್ ವೋಟಿಂಗ್ ಮೂಲಕ ಭಾಗವಹಿಸುವ ಅವಕಾಶವನ್ನು ಪಡೆದಿದ್ದಾರೆ. ಅನಿಲ್ ಕಪೂರ್ ನಿರೂಪಣೆಯ ‘ಇಂಡಿಯಾ ಕಾ ಟಾಪ್ 1 ಪರ್ಸೆಂಟ್ ’ ಗೇಮ್ ಶೋ ಕೂಡ ಇಲ್ಲಿಲಭ್ಯವಿದೆ. ಸ್ಟಾರ್ ಪ್ಲಸ್ , ಕಲರ್ಸ್ ಮತ್ತು ಸ್ಟಾರ್ ವಿಜಯ್ ಮುಂತಾದ ಪ್ರಮುಖ ಟಿವಿ ಚಾನೆಲ್ ಗಳ ಜನಪ್ರಿಯ ಧಾರಾವಾಹಿಗಳನ್ನು ಟಿವಿಯಲ್ಲಿಬರುವುದಕ್ಕಿಂತ ಮುಂಚಿತವಾಗಿ ಅಥವಾ ಏಕಕಾಲದಲ್ಲಿವೀಕ್ಷಿಸಬಹುದಾಗಿದೆ.
ಈ ಆ್ಯಪ್ , ಆ್ಯಪಲ್ ಆ್ಯಪ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್ ನಲ್ಲಿಡೌನ್ ಲೋಡ್ ಗೆ ಲಭ್ಯವಿದೆ. ಪ್ರೇಕ್ಷಕರ ಅನುಕೂಲಕ್ಕಾಗಿ ತ್ರೈಮಾಸಿಕ ಮತ್ತು ವಾರ್ಷಿಕ ಚಂದಾದಾರಿಕೆ ಯೋಜನೆಗಳನ್ನು ಪರಿಚಯಿಸಲಾಗಿದೆ. ಬ್ರಿಟನ್ , ಕೆನಡಾ ಮತ್ತು ಸಿಂಗಾಪುರ ಮಾರುಕಟ್ಟೆಗಳಿಗೆ ತಕ್ಕಂತೆ ಬೆಲೆ ನಿಗದಿಪಡಿಸಲಾಗಿದೆ. ಹಳೆಯ ಹಾಟ್ ಸ್ಟಾರ್ ಚಂದಾದಾರರು ಯಾವುದೇ ತೊಂದರೆಯಿಲ್ಲದೆ ಹೊಸ ಜಿಯೋ ಹಾಟ್ ಸ್ಟಾರ್ ಪ್ಲಾಟ್ ಫಾಮ್ ರ್ ಗೆ ಬದಲಾಯಿಸಿಕೊಳ್ಳಬಹುದು.
ಕ್ಯಾಪ್ಷನ್ -
ಅಮಿತ್ ಮಲ್ಹೋತ್ರಾ, ಜಿಯೋ ಸ್ಟಾರ್ ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ.