(ಚೂರು ಪಾರು)

Contributed byragh.pkn@gmail.com|Vijaya Karnataka
krishna jayanti and retirement of water supplier in kolar
ಪ್ರವೇಶಕ್ಕೆ ಅರ್ಜಿ ಸಲ್ಲಿಕೆ

ಕೋಲಾರ: 2027-28ನೇ ಶೈಕ್ಷಣಿಕ ಸಾಲಿನಲ್ಲಿ9ನೇ ತರಗತಿ ಮತ್ತು 11 ನೇತರಗತಿಯಲ್ಲಿಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ನಡೆಸಲಾಗುವ ಲ್ಯಾಟರಲ್ ಎಂಟ್ರಿ ಸೆಲೆಕ್ಷನ್ ಟೆಸ್ಟ್ (ಐಇTಖಿ)-2027 ಮೂಲಕ ಪ್ರವೇಶ ಪಡೆಯಲು ಆನ್ ಲೈನ್ ನೋಂದಣಿ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಶುಲ್ಕವಿಲ್ಲದೆ ಕೆಳಗಿನ ಲಿಂಕ್ ಗಳ ಮೂಲಕ ಅರ್ಜಿ ಸಲ್ಲಿಸಬಹುದು: 9ನೇತರಗತಿಗೆ:hಠಿಠಿps://್ಚಚಿsಛಿಜಿಠಿಞs.್ಞಜ್ಚಿ.ಜ್ಞಿ/2026/್ಞvsಜ್ಡಿಙ9, 11ನೇತರಗತಿಗೆ: hಠಿಠಿps://್ಚಚಿsಛಿಜಿಠಿಞs.್ಞಜ್ಚಿ.ಜ್ಞಿ/2026/್ಞvs್ಡಜಿಙ11 ಆನ್ ಲೈನ್ ಅರ್ಜಿ ಸಲ್ಲಿಸಲು ಸೆ.30 ಕೊನೆಯ ದಿನ. ಪ್ರಾಸ್ಪೆಕ್ಟಸ್ (ಮಾಹಿತಿ ಕೈಪಿಡಿ)ನೋಂದಣಿ ಪೋರ್ಟಲ್ ನಲ್ಲಿಲಭ್ಯವಿದೆ.
=

ಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆ

ಕೋಲಾರ: ಕೋಲಾರದ ಕೀಲುಕೋಟೆಯ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಆವರಣ, ಪ್ರಬೋಧ ಸೇವಾ ಸಮಿತಿ ಹಾಗೂ ಹಿಂದೂ ಜ್ಞಾನ ವೇದಿಕೆ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವ-2026ರ ಅಂಗವಾಗಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈಗಾಗಲೇ ವೇದಿಕೆ ಸಿದ್ಧಪಡಿಸಲಾಗಿದೆ. ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸೆ.4ರಿಂದ ಸೆ.7ರವರೆಗೆ ಕಾರ್ಯಕ್ರಮಗಳು ನಡೆಯಲಿದ್ದು, ಸೆ.7ರಂದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಪಲ್ಲಕ್ಕಿ ಉತ್ಸವ ನಡೆಯಲಿದೆ. ಕೋಲಾರದ ಶ್ರೀ ಬೀರೇಶ್ವರ ಸ್ವಾಮಿ ದೇವಸ್ಥಾನದ ಆವರಣ, ಎನ್ .ರಾಮಯ್ಯ ಲೇಔಟ್ , ಅಂತರಗಂಗೆ ರಸ್ತೆ, ಅಶ್ವಿನಿ ನರ್ಸಿಂಗ್ ಹೋಮ್ ಹತ್ತಿರ ಕಾರ್ಯಕ್ರಮಗಳು ಜರುಗಲಿವೆ. ಸೆ.4ರಿಂದ ಪ್ರತಿದಿನ ಬೆಳಗ್ಗೆ 9 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಪೂಜಾ ಕಾರ್ಯಕ್ರಮ, ಭಗವದ್ಗೀತೆ ಜಪ ಮತ್ತು ಭಕ್ತಿಗೀತೆಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪಲ್ಲಕ್ಕಿ ಉತ್ಸವದ ದಿನದಂದು ಊರಿನ ಪ್ರಮುಖ ಬೀದಿಗಳಲ್ಲಿಭಗವಾನ್ ಶ್ರೀಕೃಷ್ಣನ ಪ್ರತಿಮೆಯನ್ನು ಪಲ್ಲಕ್ಕಿಯಲ್ಲಿಹೊತ್ತು ಮೆರವಣಿಗೆ ನಡೆಸಲಾಗುವುದು. ಈ ಸಂದರ್ಭದಲ್ಲಿಭಕ್ತರು ಹೆಚ್ಚಿನ ಸಂಖ್ಯೆಯಲ್ಲಿಪಾಲ್ಗೊಂಡು ಶ್ರೀಕೃಷ್ಣನ ಆಶೀರ್ವಾದ ಪಡೆದು, ತೀರ್ಥ-ಪ್ರಸಾದ ಸ್ವೀಕರಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ ಆಯೋಜಕರಾದ ತ್ರೈತ ಸಿದ್ಧಾಂತ ಭಗವದ್ಗೀತಾ (ಟ್ರಸ್ಟ್ ) ಸೇವಾ ಟ್ರಸ್ಟ್ , ಕೋಲಾರ ಶಾಖೆ ಹಾಗೂ ಸ್ಥಳೀಯ ಭಕ್ತರು. ದೂ .9964679324, 8147642290, 9902095526, 8147158272.ಸಂಪರ್ಕಿಸಲು ಕೋರಲಾಗಿದೆ.

ಫೋಟೋ: (2ಕೆಪಿಎಚ್ 3)

=

ನಿವೃತ್ತಿ, ಬೀಳ್ಕೊಡುಗೆ

ಕೋಲಾರ: ನಗರಸಭೆಯಲ್ಲಿಕಳೆದ 25 ವರ್ಷಗಳಿಂದ ನೀರು ಸರಬರಾಜು ಕಾಯಕದಲ್ಲಿನಿರತರಾಗಿದ್ದ ಗೌರಿಪೇಟೆಯ ಆರ್ .ವೆಂಕಟಾಚಲಪತಿ ಅಲಿಯಾಸ್ ಶ್ರೀನಿವಾಸ್ ವಯೋ ನಿವೃತ್ತಿ ಹೊಂದಿದ್ದು, ಅವರನ್ನು ಕೋಲಾರ ನಗರದ 15ನೇ ವಾರ್ಡ್ ನಲ್ಲಿಕಸ್ತೂರಿ ಕನ್ನಡ ಸಂಘದ ವತಿಯಿಂದ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ನೀರು ಸರಬರಾಜು ಮಾಡುವಲ್ಲಿನ ಬದ್ಧತೆ, ಸಮಯಪ್ರಜ್ಞೆ, ಜನತೆಯೊಂದಿಗೆ ಹೊಂದಿದ್ದ ಒಡನಾಟ, ಮಾತಿನಲ್ಲಿಹಿಡಿತದ ಕುರಿತು ಸ್ಮರಿಸಿ, ನೀರಿನ ಸಂಕಷ್ಟದ ಸಮಯದಲ್ಲೂಸಮರ್ಪಕ ಹಾಗೂ ಸಮಾನವಾಗಿ ನೀರು ಸರಬರಾಜು ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು ಎಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿಕಸ್ತೂರಿ ಕನ್ನಡ ಸಂಘದ ಎಲ್ಲಾಪದಾಧಿಕಾರಿಗಳು ಹಾಜರಿದ್ದು, ನಿವೃತ್ತ ನೌಕರರಾದ ವೆಂಕಟಾಚಲಪತಿ ಅಲಿಯಾಸ್ ಶ್ರೀನಿವಾಸ ಅವರ ಸೇವೆಯನ್ನು ಶ್ಲಾಘಿಘಿಸಿ, ಗೌರವಿಸಿದರು.

ಫೋಟೋ: (2ಕೆಪಿಎಚ್ 4)